
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಅಧಿಸೂಚನೆಯನ್ನು ಪ್ರಕಟ ಮಾಡಲಾಗಿದೆ. 2020-21ನೇ ಸಾಲಿನಲ್ಲಿ ಪರೀಕ್ಷೆಗೆ ನೊಂದಣಿ ಮಾಡಿಕೊಂಡು ಹಾಜರಾಗದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಬಹುದಾಗಿದ್ದು, ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಪರೀಕ್ಷೆಯು ಜುಲೈ ತಿಂಗಳಲ್ಲಿ ನಡೆದ ಮಾದರಿಯಲ್ಲಿಯೇ ಎರಡು ದಿನಗಳ ಕಾಲ ನಡೆಯಲಿದ್ದು, ಒಂದು ದಿನ ಕೋರ್ ವಿಷಯಗಳಿಗೆ ಹಾಗೂ ಮತ್ತೊಂದು ದಿನ ಭಾಷಾ ವಿಷಯಕ್ಕೆ ಪರೀಕ್ಷೆ ನಡೆಯಲಿದೆ. ಎರಡೂ ಪತ್ರಿಕೆಯಲ್ಲಿ ಬಹು ಆಯ್ಕೆ ಪಶ್ನೆಗಳನ್ನು ನೀಡಲಾಗಿರುತ್ತದೆ. ಪ್ರತಿ ವಿಷಯಕ್ಕೆ 40 ಅಂಕಗಳನ್ನು ನಿಗದಿಪಡಿಸಲಾಗಿದೆ.
2020-21ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡು ಕೊವಿಡ್ ಕಾರಣಕ್ಕೆ ಹಾಜರಾಗದ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು. ಪರೀಕ್ಷೆಯು ಸಪ್ಟೆಂಬರ್ ತಿಂಗಳಲ್ಲೇ ನಿಗದಿಪಡಿಸಲಾಗಿದೆ ಆದರೆ ಪೂರಕ ಪರೀಕ್ಷೆಯ ದಿನಾಂಕ ಇನ್ನು ಬಿಡುಗಡೆ ಮಾಡಲಾಗಿಲ್ಲ.
ಈ ಭಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಜುಲೈ 19 ಹಾಗೂ 22ರಂದು ನಡೆಸಲಾಗಿತ್ತು. ಒಂದು ದಿನದಲ್ಲಿ ಮೂರು ಪರೀಕ್ಷೆಗಳಂತೆ ಎರಡು ದಿನಗಳಲ್ಲಿ ಆರು ವಿಷಯಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಬಹು ಆಯ್ಕೆ ಪ್ರಶ್ನೆಗಳನ್ನೊಳಗೊಂಡ ಪರೀಕ್ಷೆ ಇದಾಗಿದ್ದು, ಪ್ರತಿ ವಿಷಯಕ್ಕೆ 40 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿತ್ತು.
ಪರೀಕ್ಷೆಗೆ ಶೇ 99.65ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. 4,885 ಪರೀಕ್ಷಾ ಕೇಂದ್ರ, 73, 064 ಪರೀಕ್ಷಾ ಕೊಠಡಿಯಲ್ಲಿ ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
ಆಗಸ್ಟ್ 9,2021ರ ಮಧ್ಯಾಹ್ನ 3:30ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಲಾಗಿದ್ದು, ಶೇ 99.09% ರಷ್ಟು ಫಲಿತಾಂಶ ಕಂಡುಬಂದಿದೆ. ಮೊದಲ ಬಾರಿ 8.74 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 4.70 ಲಕ್ಷ ವಿದ್ಯಾರ್ಥಿಗಳು ಪಾಸ್ ಆಗಿದ್ದು, 4.1 ಲಕ್ಷ ವಿದ್ಯಾರ್ಥಿನಿಯರು ಎಸ್ಎಸ್ಎಲ್ ಸಿ ಉತ್ತೀರ್ಣರಾಗಿದ್ದಾರೆ.


Click it and Unblock the Notifications











