KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂಬರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ನೊಂದಾಯಿಸಿಕೊಂಡ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಪಠ್ಯಕ್ರಮವನ್ನು ವೀಕ್ಷಿಸಬಹುದು.

 
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2022ರ ಪಠ್ಯಕ್ರಮ ಬಿಡುಗಡೆ

ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳು, ಫಾರ್ಮ್ ಸೈನ್ಸ್ ಕೋರ್ಸ್‌ಗಳು, ಪಶುವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ಕೋರ್ಸ್‌ಗಳು, ಬಿಫಾರ್ಮಾ, ಫಾರ್ಮಾ ಡಿ ಮತ್ತು ನ್ಯಾಚುರೋಪತಿ ಮತ್ತು ಯೋಗ ಕೋರ್ಸ್‌ಗಳು ಸೇರಿದಂತೆ ಮೊದಲ ವರ್ಷದ ಪದವಿಪೂರ್ವ ಕಾರ್ಯಕ್ರಮಗಳ ಪ್ರವೇಶಕ್ಕಾಗಿ ಕೆಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. KCET 2022 ಪಠ್ಯಕ್ರಮದ ಜೊತೆಗೆ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವ ವಿಷಯಗಳನ್ನು ಸಹ KEA ಬಿಡುಗಡೆ ಮಾಡಿದೆ.

KCET 2022 ಪ್ರಶ್ನೆ ಪತ್ರಿಕೆಯು PUC ಮೊದಲ ವರ್ಷದ 2020ರ ಭೌತಶಾಸ್ತ್ರ-ರಸಾಯನಶಾಸ್ತ್ರ-ಗಣಿತಶಾಸ್ತ್ರ-ಜೀವಶಾಸ್ತ್ರ (PCMB) ಮತ್ತು PUC 2021ರ ಎರಡನೇ ವರ್ಷದ ಕೋರ್ಸ್‌ನ ಭೌತಶಾಸ್ತ್ರ-ರಸಾಯನಶಾಸ್ತ್ರ-ಗಣಿತಶಾಸ್ತ್ರ-ಜೀವಶಾಸ್ತ್ರ (PCMB) ವಿಷಯಗಳನ್ನು ಆಧರಿಸಿರುತ್ತದೆ. PUC ಮೊದಲ ವರ್ಷದ 2020 ರ PCMB 70 ಪ್ರತಿಶತ ಪಠ್ಯಕ್ರಮವನ್ನು ಒಳಗೊಂಡಿರುತ್ತದೆ ಮತ್ತು 2021 ರ ಎರಡನೇ ವರ್ಷದ PCMB ಸಂಪೂರ್ಣ ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯು ಸೂಚಿಸಿದ ಪಠ್ಯಕ್ರಮವನ್ನು ಆಧರಿಸಿರುತ್ತದೆ ಎಂದು ಕೆಇಎ ಹೇಳಿಕೆ ತಿಳಿಸಿದೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2022ರ ಪಠ್ಯಕ್ರಮ ಬಿಡುಗಡೆ

ಸಿಇಟಿ 2022ರ ಪರೀಕ್ಷೆಯ ವಿಷಯಗಳು :

ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸ್‌ಗಳು (BE/ BTech): PCM
ಕೃಷಿ ವಿಜ್ಞಾನ ಕೋರ್ಸ್‌ಗಳು (BSc ಕೃಷಿ, ರೇಷ್ಮೆ ಕೃಷಿ, ತೋಟಗಾರಿಕೆ ಇತ್ಯಾದಿ): PCMB
ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಮತ್ತು ಅನಿಮಲ್ ಹಸ್ಬೆಂಡರಿ (BV Sc ಮತ್ತು AH): PCB
ಬಿ ಫಾರ್ಮಾ: PCM ಅಥವಾ PCB
2ನೇ ವರ್ಷದ ಬಿ ಫಾರ್ಮಾ: PCM ಅಥವಾ PCB
ಫಾರ್ಮಾ D: PCM ಅಥವಾ PCB
ಪ್ರಕೃತಿ ಚಿಕಿತ್ಸೆ ಮತ್ತು ಯೋಗ: PCB

 

KCET 2022 ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮೇ 29 ರಿಂದ ಮತ್ತೆ ಪ್ರಾರಂಭವಾಗುತ್ತದೆ ಮತ್ತು ಮೇ 30,2022ರಂದು ಕೊನೆಗೊಳ್ಳಲಿದೆ. ಹಲವು ವಿದ್ಯಾರ್ಥಿಗಳು ಮತ್ತು ಪೋಷಕರ ಕೋರಿಕೆಯ ಮೇರೆಗೆ, CET 2022 ಗೆ ಹಾಜರಾಗಲು ನೋಂದಾಯಿಸದ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವನ್ನು ನೀಡಲಾಗುತ್ತದೆ. ನೋಂದಾಯಿಸಿಕೊಳ್ಳದ ಅಥವಾ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸದವರು ನೋಂದಾಯಿಸಿಕೊಂಡು ಶುಲ್ಕವನ್ನು ಪಾವತಿಸುವ ಮೂಲಕ ಮೇ 30,2022ರ ರಾತ್ರಿ 8 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
Karnataka exam authority releases kcet 2022 exam syllabus. Here is the subjects to appear for the exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X