KSET Notification 2021: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಎಸ್ಇಟಿ)-2021 ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 11,2021ರಂದು ಪರೀಕ್ಷೆಯು ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮಾರ್ಚ್ 7,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಕೆ-ಸೆಟ್ 2021 ಪರೀಕ್ಷೆಯ ಅಧಿಸೂಚನೆ ರಿಲೀಸ್

ಕೆಎಸ್‌ಇಟಿ 2021ರ ಪರೀಕ್ಷೆಯನ್ನು 41 ವಿಷಯಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ 11 ನೋಡಲ್ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯ/ಪ್ರಥಮ ದರ್ಜೆ ಪದವಿ ಕಾಲೇಜು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ ಹಾಗೂ ಆಯಾ ಸಂಸ್ಥೆಗಳ ನಿಯಮ ಮತ್ತು ಕಾಯಿದೆಗಳಿಗೆ ಒಳಪಟ್ಟಿರುತ್ತಾರೆ.

ಅರ್ಜಿ ಸಲ್ಲಿಸಲು ಅರ್ಹತೆ:

ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಶೇ 55%ರಷ್ಟು ಅಂಕ ಗಳಿಸಿರಬೇಕು. ಪರಿಶಿಷ್ಟ ಜಾತಿ, ಪಂಗಡ, ವಿವಿಧ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶೇ 50%ರಷ್ಟು ಅಂಕ ನಿಗದಿಪಡಿಸಲಾಗಿದೆ.

ವಯೋಮಿತಿ:

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಗರಿಷ್ಟ ವಯೋಮಿತಿ ಇರುವುದಿಲ್ಲ.

ಪರೀಕ್ಷಾ ವಿಧಾನ:

ಕೆಎಸ್‌ಇಟಿ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರುತ್ತವೆ. ಎರಡು ಪತ್ರಿಕೆಗಳು ಸಹ ಬಹುಸಂಖ್ಯಾ ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
ಮೊದಲನೇ ಪತ್ರಿಕೆ- ಒಟ್ಟು 100 ಅಂಕಗಳು- ಒಂದು ಗಂಟೆ ಅವಧಿ
ಎರಡನೇ ಪತ್ರಿಕೆ- ಒಟ್ಟು 200 ಅಂಕಗಳು- 2 ಗಂಟೆ ಅವಧಿ

ಪರೀಕ್ಷಾ ಕೇಂದ್ರಗಳು:

ರಾಜ್ಯದ ಹನ್ನೊಂದು ನೋಡಲ್ ಕೇಂದ್ರಗಳಲ್ಲಿ ಕೆ-ಸೆಟ್ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷೆಗಳು ನಡೆಯಲಿವೆ.

ಕೆ-ಸೆಟ್ ಪರೀಕ್ಷೆ:

ಕರ್ನಾಟಕ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ರಾಜ್ಯದ ವಿಶ್ವವಿದ್ಯಾಲಯಗಳಿಂದ ನಡೆಸಲ್ಪಡುವುದು. ಯುಜಿಸಿ ಅಥವಾ ಯುಜಿಸಿ-ಸಿಎಸ್ಐಆರ್ /ಸಿಬಿಎಸ್ಇ ನಡೆಸುವ ಈ ಅರ್ಹತಾ ಪರೀಕ್ಷೆಯ ಹೊರತಾಗಿ, ರಾಜ್ಯ ಮಟ್ಟದಲ್ಲಿ ನೆಟ್ ಪರೀಕ್ಷೆ ಮಾದರಿಯಲ್ಲಿ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯನ್ನು (SET) ನಡೆಸಲೂ ಸಹ ಯುಜಿಸಿ ಅವಕಾಶ ಮಾಡಿಕೊಟ್ಟಿದೆ.

ರಾಷ್ಟ್ರಮಟ್ಟದಲ್ಲಿ ಈ ಪರೀಕ್ಷೆಗಳು ಅತ್ಯಂತ ಸುವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ವರ್ಷದಿಂದ ವರ್ಷಕ್ಕೆ ಪಾರದರ್ಶಕತೆಯನ್ನು ಹೆಚ್ಚಿಸಿಕೊಳ್ಳುತ್ತ, ಮೌಲ್ಯವರ್ಧಿಸಿಕೊಂಡು ಈ ಪರೀಕ್ಷೆಗಳು ಸಾಗುತ್ತಿವೆ. ಆದರೂ ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಉತ್ತೀರ್ಣತಾ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾಗಿ ರಾಜ್ಯಗಳಿಗೆ ತಮ್ಮದೇ ಆದ ರಾಜ್ಯಮಟ್ಟದ ಅರ್ಹತಾ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಅನುವು ಮಾಡಿಕೊಟ್ಟಿದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಫೆಬ್ರವರಿ 8,2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 7,2021
250/-ರೂ ದಂಡ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 13,2021
ಭರ್ತಿ ಮಾಡಿ ಮುದ್ರಿಸಿದ ಅರ್ಜಿಯೊಂದಿಗೆ ಹಾಜರಾತಿ ಪ್ರತಿಯನ್ನು ಆಯ್ಕೆ ಮಾಡಿದ ನೊಡೆಲ್ ಕೇಂದ್ರಕ್ಕೆ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 15,2021
ಪರೀಕ್ಷಾ ದಿನಾಂಕ: ಏಪ್ರಿಲ್ 11,2021

ಪರೀಕ್ಷಾ ಶುಲ್ಕದ ವಿವರ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 1,150/-ರೂ
ಪ್ರವರ್ಗ-2ಎ, 3ಬಿ, 3ಎಮ 3ಬಿ ಅಭ್ಯರ್ಥಿಗಳಿಗೆ 950/-ರೂ
ಪ್ರವರ್ಗ-1,ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳಿಗೆ 650/-ರೂ

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ನಿಗಧಿತ ಅವಧಿ ಮುಗಿದ ನಂತರ ಪ್ರಕಟಣೆಯಲ್ಲಿ ನಮೂದಿಸಿರುವ ದಿನಾಂಕದೊಳಗೆ ರೂ.250/- ದಂಡಶುಲ್ಕ ಪಾವತಿ ಮಾಡಿ ಹೆಚ್ಚುವರಿಯಾಗಿ ನಿಗದಿ ಪಡಿಸಿರುವ ಅವಧಿಯವರೆಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಿಕೆ:

ಅಭ್ಯರ್ಥಿಗಳು ಕೆಎಸ್‌ಇಟಿ-2021ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್‌ http://kset.uni-mysore.ac.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಮಾರ್ಚ್ 7,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಪರೀಕ್ಷೆಯ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
KSET 2021 notification has been released in official website. Interested candidates can apply before 7th march 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+