ಕೆಎಸ್ಆರ್ ಟಿಸಿ ದರ್ಜೆ-3ರ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳ ಕರೆ ಪತ್ರವನ್ನು ಪ್ರಕಟಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಉಲ್ಲೇಖಿತ ಜಾಹೀರಾತಿಗಳ ಅನುಸಾರ ದರ್ಜೆ-3, ಮೇಲ್ವಿಚಾರಕ ಆಂತರಿಕ ಹಾಗೂ ನೇರ ನೇಮಕಾತಿ ಹುದ್ದೆಗಳ ಆನ್-ಲೈನ್ ಪರೀಕ್ಷೆಯನ್ನು ದಿನಾಂಕ 19-08-2017 ರಂದು ನಡೆಯುತ್ತಿದ್ದು, ಸದರಿ ಜಾಹೀರಾತಿಗೆ ಸ್ಪಂದಿಸಿರುವ ಅಭ್ಯರ್ಥಿಗಳು ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಸಂಸ್ಥೆಯ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳತಕ್ಕದ್ದು.

ಉಚಿತ ಬಸ್ ವ್ಯವಸ್ಥೆ
ಸದರಿ ಜಾಹೀರಾತಿನನ್ಚಯ ಈ ಹಿಂದೆ ಆನ್-ಲೈನ್ ಪರೀಕ್ಷೆ ರದ್ದಾಗಿದ್ದ ಕಾರಣ ಅಭ್ಯರ್ಥಿಗಳಿಗೆ ಉಂಟಾದ ಅನಾನುಕೂಲತೆಯನ್ನು ಸರಿಪಡಿಸಲು ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗರೆಡ್ಡಿ ರವರ ನಿರ್ದೇಶನದ ಮೇರೆಗೆ ಅಭ್ಯರ್ಥಿಯ ವಿಳಾಸದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಿಬರಲು ಸಂಸ್ಥೆಯ ಸಾಮಾನ್ಯ ಸಾರಿಗೆ ವಾಹನಗಳಲ್ಲಿ ಉಚಿತ ಪ್ರಯಾಣಿಸಲು ಅವಕಾಸ ಕಲ್ಪಿಸಲಾಗಿದೆ.
ಅಭ್ಯರ್ಥಿಗಳು ದಿನಾಂಕ: 19-08-2017 ರಂದು ನಡೆಯುವ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಮೂಲ ಪ್ರವೇಶ ಪತ್ರವನ್ನು ಸರ್ಕಾರದಿಂದ ವಿತರಿಸಿರುವ ಯಾವುದಾದರು ಮೂಲ ಗುರುತಿನ ಚೀಟಿಯೊಂದಿಗೆ (ಉದಾ: ಮತದಾರರ ಗುರುತಿನ ಚೀಟಿ/ಡ್ರೈವಿಂಗ್ ಲೈಸೆನ್ಸ್/ಆಧಾರ್ ಕಾರ್ಡ್) ಸಂಸ್ಥೆಯ ವಾಹನಗಳಲ್ಲಿ ನಿರ್ವಾಹಕರಿಗೆ ತೋರಿಸಿ ಪ್ರಯಾಣಿಸಬಹುದೆಂದು ತಿಳಿಸಲಾಗಿದೆ.
ಪರೀಕ್ಷಾ ವಿಧಾನ
ಕ್ಯಾಟ್ ಪರೀಕ್ಷೆಯು ಒಟ್ಟು ನೂರು ಅಂಕಗಳಿಗೆ ನಡೆಯಲಿದ್ದು, ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ.
ಮೊದಲ ಪತ್ರಿಕೆಯಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು, ಜಿಯಾಗ್ರಫಿ, ಭಾರತ ಸಂವಿಧಾನ, ಇತಿಹಾಸ, ಜನರಲ್ ಇಂಗ್ಲಿಷ್ ಮತ್ತು ಕಮ್ಯುನಿಕೇಷನ್ ಅಂಡ್ ಇಂಟರ್ ಪರ್ಸನಲ್ ಸ್ಕಿಲ್ಸ್ ಕುರಿತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಎರಡನೇ ಪತ್ರಿಕೆಯಲ್ಲಿ ಬೇಸಿಕ್ ಆಟೊಮೊಬೈಲ್ ಇಂಜಿನಿಯರಿಂಗ್, ಎಂಟಿಡಬ್ಲ್ಯು ಅಂಡ್ ಫ್ಯಾಕ್ಟರಿ ಆ್ಯಕ್ಟ್, ಜನರಲ್ ಸೈನ್ಸ್ ಅಂಡ್ ಟೆಕ್ನಾಲಜಿ, ಎನ್ವರಾನ್ಮೆಂಟ್ ಅಂಡ್ ಇಕೊಲಜಿ, ಬಯೋಡೈವರ್ಸಿಟಿ ಅಂಡ್ ಕ್ಲೈಮೆಟ್ ಚೆಂಜ್, ಜನರಲ್ ಮೆಂಟಲ್ ಎಬಿಲಿಟಿ, ಡಿಸಿಷನ್ ಮೇಕಿಂಗ್, ಪ್ರಾಬ್ಲಮ್ ಸಾಲ್ವಿಂಗ್, ಕಂಪ್ಯೂಟರ್ ನಾಲೆಡ್ಜ್ ಕುರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ ಗಮನಿಸುವುದು.


Click it and Unblock the Notifications











