ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೇ 7 ರಂದು ನಡೆಯಲಿವೆ.
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು ಈ ಪರೀಕ್ಷೆಯನ್ನು ಆಯೋಜಿಸಲಿದ್ದು ಈ ಬಾರಿ ದೇಶಾದ್ಯಂತ ಸುಮಾರು 10 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಕೂರುವ ಸಾಧ್ಯತೆ ಇದೆ. ದೇಶದ 103 ನಗರಗಳ 2200 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ವಿವರ
- ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಸೇರಿದಂತೆ ದೇಶದ ಒಟ್ಟು 10 ಭಾಷೆಗಳಲ್ಲಿ ನೀಡಲಾಗುತ್ತದೆ.
- ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು 3 ಬಾರಿ ಅವಕಾಶ ನೀಡಲಾಗಿದ್ದು ಈಗಾಗಲೇ 3 ಬಾರಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
- ದಿನಾಂಕ 07-05-2017 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ಪತ್ರಿಕೆಯು ಒಟ್ಟು 180 ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ಪರೀಕ್ಷಾ ವಿಷಯಗಳು
ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ (ಬಾಟನಿ ಮತ್ತು ಜಿಯೋಲಾಜಿ) ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ಕನ್ನಡಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ.
ಕರ್ನಾಟಕದಲ್ಲಿರುವ ಪರೀಕ್ಷಾ ಕೇಂದ್ರಗಳು
ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ಮಂಗಳೂರು, ಹುಬ್ಬಳ್ಳಿ, ಮೈಸೂರು, ದಾವಣಗೆರೆ ಮತ್ತು ಉಡುಪಿ.
ಪ್ರಮುಖ ದಿನಾಂಕಗಳು
ಪರೀಕ್ಷೆ ನಡೆಯುವ ದಿನಾಂಕ 07-05-2017
ಫಲಿತಾಂಶ ಪ್ರಕಟಗೊಳ್ಳುವ ದಿನಾಂಕ 08 -06 -2017
ಸೂಚನೆ
- ಸರ್ಕಾರಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳನ್ನು ಆಲ್ ಇಂಡಿಯಾ ಕೋಟ (ಎನ್.ಐ. ಆರ್) ಮತ್ತು ರಾಜ್ಯ ಸರ್ಕಾರಿ ಕೋಟಾದಡಿ ಹಂಚಿಕೆ ಮಾಡಲಾಗುತ್ತದೆ.
- ಖಾಸಗಿ ಕಾಲೇಜುಗಳ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳನ್ನು ಎನ್.ಐ.ಆರ್ ಕೋಟ, ರಾಜ್ಯ ಸರ್ಕಾರಿ ಕೋಟ ಮತ್ತು ಆಡಳಿತ ಮಂಡಳಿ ಕೋಟ ಸೀಟುಗಳಾಗಿ ವರ್ಗೀಕರಣ ಮಾಡಲಾಗಿದೆ.
- ಒಟ್ಟಾರೆ ಎಲ್ಲ ಸೀಟುಗಳನ್ನು ನೀಟ್ ರ್ಯಾಂಕಿಂಗ್ ಆಧಾರದಲ್ಲಿಯೇ ಭರ್ತಿ ಮಾಡಲಾಗುತ್ತದೆ. ಆಲ್ ಇಂಡಿಯಾ ರ್ಯಾನ್ಕ್ ನ ಮೆರಿಟ್ ಪಟ್ಟಿ ಆಧರಿಸಿ ತಮ್ಮ ಕೋಟ ಸೀಟುಗಳ ಭರ್ತಿಗೆ ಸಂಬಂಧಿಸಿದ ದಾಖಲಾತಿ ಸಂಸ್ಥೆಗಳು ಕೌನ್ಸೆಲಿಂಗ್ ನಡೆಸುತ್ತದೆ.
For Quick Alerts
For Daily Alerts


Click it and Unblock the Notifications











