NTA UGC NET Exam 2021 Date : ಎನ್‌ಇಟಿ ಪರೀಕ್ಷೆಯ ಪರಿಷ್ಕೃತ ದಿನಾಂಕ ಪ್ರಕಟ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಯಜಿಸಿ ಎನ್‌ಇಟಿ ಪರೀಕ್ಷೆ 2021ರ ಪರಿಷ್ಕೃತ ದಿನಾಂಕಗಳನ್ನು ಪ್ರಕಟ ಮಾಡಲಾಗಿದೆ. ಎನ್‌ಇಟಿ ಡಿಸೆಂಬರ್ 2020 ಮತ್ತು ಜೂನ್ 2021ರ ಹೊಸ ಪರೀಕ್ಷಾ ದಿನಾಂಕಗಳನ್ನು ಎನ್‌ಟಿಎ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ವೆಬ್‌ಸೈಟ್ ಗೆ ಭೇಟಿ ನೀಡಿ ಚೆಕ್ ಮಾಡಿಕೊಳ್ಳಬಹುದು.

ಯುಜಿಸಿ ಎನ್‌ಇಟಿ ಪರೀಕ್ಷೆಯ ಪರಿಷ್ಕೃತ ದಿನಾಂಕಗಳು ಪ್ರಕಟ

ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿದ್ಯಾರ್ಥಿ ಸಮುದಾಯದ ಮನವಿಯ ಮೇರೆಗೆ ಅಕ್ಟೋಬರ್ 10 ರಂದು ನಿಗದಿಪಡಿಸಲಾಗಿದ್ದ ಪರೀಕ್ಷಾ ದಿನಾಂಕವನ್ನು ಕೆಲವು ಪ್ರಮುಖ ಪರೀಕ್ಷೆಗಳೊಂದಿಗೆ ಘರ್ಷಣೆಗೊಳ್ಳುವ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ ಯುಜಿಸಿ ಎನ್‌ಇಟಿ ಡಿಸೆಂಬರ್ 2020 ಮತ್ತು ಜೂನ್ 2021ಸೈಕಲ್ ಗಳ ಪರೀಕ್ಷೆಯ ಹೊಸ ಪರಿಷ್ಕೃತ ದಿನಾಂಕಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಯುಜಿಸಿ ನೆಟ್ ಡಿಸೆಂಬರ್ 2020ರ ಮತ್ತು ಜುಲೈ 2021ರ ಪರೀಕ್ಷೆಯನ್ನು ಅಕ್ಟೋಬರ್ 6 ರಿಂದ ಅಕ್ಟೋಬರ್ 11,2021 ರವರೆಗೆ ನಡೆಸಲು ನಿಗದಿಪಡಿಸಲಾಗಿತ್ತು. ಇದನ್ನು ಈಗ ಅಕ್ಟೋಬರ್ 6 ರಿಂದ ಅಕ್ಟೋಬರ್ 8, 2021ರ ವರೆಗೆ ಮತ್ತು ಅಕ್ಟೋಬರ್ 17 ರಿಂದ ಅಕ್ಟೋಬರ್ 19,2021ರ ವರೆಗೆ ಪರಿಷ್ಕರಿಸಲಾಗಿದೆ.

ಪರೀಕ್ಷೆಯ ವಿವರವಾದ ದಿನಾಂಕಗಳನ್ನು ಅತೀ ಶೀಘ್ರದಲ್ಲಿ ಪ್ರಕಟಿಸಲಾಗುವುದು. ಪ್ರವೇಶ ಪತ್ರ ಪ್ರಕಟಿಸಿದ ಬಳಿಕ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಏನಾದರೂ ಪ್ರಶ್ನೆ ಮತ್ತು ಗೊಂದಲಗಳಿದ್ದಲ್ಲಿ ಎನ್‌ಟಿಎ ಹೆಲ್ಪ್ ಡೆಸ್ಕ್ ಗೆ ಕರೆ ಅಥವಾ ಮೇಲ್ ಮಾಡಿ ಪರಿಹರಿಸಿಕೊಳ್ಳಬಹುದು.

ಯುಜಿಸಿ ಎನ್‌ಇಟಿ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆಯನ್ನು ಆಗಸ್ಟ್ 10 ರಿಂದ ಸೆಪ್ಟೆಂಬರ್ 5,2021ರ ವರೆಗೆ ನಡೆಸಲಾಯಿತು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಎನ್ಟಿಎ ಯುಜಿಸಿ ನೆಟ್ ನ ಅಧಿಕೃತ ಸೈಟ್ https://ugcnet.nta.nic.in/ ಗೆ ಭೇಟಿ ನೀಡಿ ಚೆಕ್ ಮಾಡಬಹುದು.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
NTA has announced UGC NET Dec 2020 And June 2021 Rescheduled Exam Dates, here are the details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+