ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌ 2017: ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನ

ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನವಾಗಿದೆ. ನವೆಂಬರ್ 26 ರಂದು ದೇಶಾದ್ಯಂತ 140 ಪರೀಕ್ಷಾ ಕೇಂದ್ರಗಳಲ್ಲಿ ಕ್ಯಾಟ್ ಪರೀಕ್ಷೆಗಳು ನಡೆಯಲಿದೆ.

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌-ಐಐಎಂ) ಪ್ರವೇಶಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌)ಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಉಳಿದಿವೆ.

ಕ್ಯಾಟ್ ಪರೀಕ್ಷೆ ತೆಗೆದುಕೊಳ್ಳ ಬಯಸುವ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆ.20 ಕೊನೆಯ ದಿನವಾಗಿದೆ.

ನವೆಂಬರ್ 26 ರಂದು ದೇಶಾದ್ಯಂತ 140 ಪರೀಕ್ಷಾ ಕೇಂದ್ರಗಳಲ್ಲಿ ಕ್ಯಾಟ್ ಪರೀಕ್ಷೆಗಳು ನಡೆಯಲಿದ್ದು, ಈ ಬಾರಿ 20000 ಸೀಟುಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕಾಮನ್‌ ಅಡ್ಮಿಷನ್‌ ಟೆಸ್ಟ್‌-ಕ್ಯಾಟ್‌ 2017

ಪ್ರಮುಖ ದಿನಾಂಕಗಳು

ಆನ್-ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-09-2017
ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ: 18-10-2017
ಕ್ಯಾಟ್ ಪರೀಕ್ಷೆಗಳು ನಡೆಯುವ ದಿನಾಂಕ: 26-11-2017

ಅರ್ಜಿ ಶುಲ್ಕ

ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1800/-
ಪ.ಜಾ/ಪ.ಪಂ/ಅಂಗವಿಕಲ ಅಭ್ಯರ್ಥಿಗಳಿಗೆ ರೂ.900/-

ಅರ್ಜಿ ಸಲ್ಲಿಸಲು ಮತ್ತು ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಎಟಿ ಪರೀಕ್ಷೆ

ಸಿಎಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯು ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಪ್ರತಿಷ್ಠಿತ ಐಐಎಂಗಳು ಮತ್ತು ಎಫ್‌ಎಂಎಸ್, ಎಂಡಿಐ, ಎಸ್‌ಪಿ ಜೈನ್, ಐಐಟಿಗಳು ಸೇರಿದಂತೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾವಹಾರಿಕ (ಬಿಸಿನೆಸ್) ಪದವಿಗೆ ಪ್ರವೇಶ ಪಡೆಯಲು ಸಿಎಟಿ ಅರ್ಹತೆ ಕಡ್ಡಾಯ.

ಒಟ್ಟು ಎರಡು ವಿಭಾಗಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಮೊದಲ ವಿಭಾಗದಲ್ಲಿ ಗುಣಾತ್ಮಕ ಸಾಮರ್ಥ್ಯ ಮತ್ತು ಮಾಹಿತಿ ವಿಶ್ಲೇಷಣೆ, ಇನ್ನೊಂದರಲ್ಲಿ ಮೌಖಿಕ ಸಾಮರ್ಥ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯದ ಪರೀಕ್ಷೆ ನಡೆಯುತ್ತದೆ.

ಎಂಬಿಎ ಕಲಿಕೆಗೆ ಇದು ಪ್ರವೇಶ ಪರೀಕ್ಷೆ ಆಗಿರುವುದರಿಂದ ಗುಣಾತ್ಮಕ ಸಾಮರ್ಥ್ಯ, ವಿಶ್ಲೇಷಣೆ ಮತ್ತು ತಾರ್ಕಿಕ ಮನೋಭಾವ, ಮಾಹಿತಿ ವಿಶ್ಲೇಷಣೆ ಮತ್ತು ಮೌಖಿಕ ಸಂವಹನ ಕ್ಷೇತ್ರದಲ್ಲಿ ಅಭ್ಯರ್ಥಿ ದಕ್ಷನಾಗಿರಬೇಕಾಗುತ್ತದೆ. ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಕ್ಯಾಟ್ ಪರೀಕ್ಷೆ ಸಹಕಾರಿಯಾಗಲಿದೆ.

More News  

For Quick Alerts
ALLOW NOTIFICATIONS  
For Daily Alerts

English summary
The Common Admissions Test (CAT) exam is conducted by the Indian Institute of Management (IIM) for admissions in MBA into premier institutes including the IIMs. The official notification was released by Indian Institute of Management (IIM) Lucknow. Registrations for this began early in August 2017.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+