ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಿ ಜಿ ಎಲ್ ದ್ವಿತೀಯ ಶ್ರೇಣಿ ಪರೀಕ್ಷೆ ಫಲಿತಾಂಶ ಪ್ರಕಟ

ಸ್ಟಾಫ್ ಸೆಲೆಕ್ಷನ್ ಕಮಿಷನ್ ನ ಸಿ ಜಿ ಎಲ್ ದ್ವಿತೀಯ ಶ್ರೇಣಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

 

2016 ರಲ್ಲಿ ನಡೆದ ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ವಿಳಾಸದ ಮೂಲಕ ಪಡೆಯಬಹುದಾಗಿದೆ.

 ದ್ವಿತೀಯ ಶ್ರೇಣಿ ಪರೀಕ್ಷೆ ಫಲಿತಾಂಶ ಪ್ರಕಟ

ಪರೀಕ್ಷೆ ನಡೆದ ದಿನಾಂಕ

ಸ್ಟಾಫ್ ಸೆಲೆಕ್ಷನ್ ಕಮಿಷನ್ ಆಯೋಜಿಸಿದ್ದ ಕಂಬೈನ್ಡ್ ಗ್ರ್ಯಾಜುಯೆಟ್ ಲೆವೆಲ್ (ಸಿ ಜಿ ಎಲ್) ದ್ವಿತೀಯ ಶ್ರೇಣಿ ಪರೀಕ್ಷೆಯು ನವೆಂಬರ್ 30 ರಿಂದ ಡಿಸೆಂಬರ್ 02,2016 ರವರೆಗೂ ನಡೆದಿತ್ತು.

ಮರು ಪರೀಕ್ಷೆ

ಜನವರಿ 12 ಮತ್ತು 13, 2017 ರಂದು ಸಿ ಜಿ ಎಲ್ ದ್ವಿತೀಯ ಶ್ರೇಣಿಯ ಮರು ಪರೀಕ್ಷೆಗಳು ನಡೆದಿದ್ದವು.

ಪರೀಕ್ಷೆ ಹಾಜರಾತಿ

ದ್ವಿತೀಯ ಶ್ರೇಣಿಯ ಈ ಪರೀಕ್ಷೆಗೆ ದೇಶಾದ್ಯಂತ ಸುಮಾರು 1.49 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು

 

ಆಯ್ಕೆ ವಿಧಾನ

ಅಭ್ಯರ್ಥಿಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಶ್ರೇಣಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕು, ತೇರ್ಗಡೆಯಾದ ಅಭ್ಯರ್ಥಿಗಳನ್ನು ನಾಲ್ಕನೇ ಶ್ರೇಣಿಯಲ್ಲಿ ಪರೀಕ್ಷಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಫಲಿತಾಂಶ ಪಡೆಯುವ ವಿಧಾನ

ಫಲಿತಾಂಶವನ್ನು ಎಸ್ ಎಸ್ ಸಿ ಅಧಿಕೃತ ವೆಬ್ ಸೈಟ್ ವಿಳಾಸದಲ್ಲಿ ಪ್ರಕಟಿಸಲಾಗಿದೆ

 • ಮೊದಲಿಗೆ ಅಧಿಕೃತ ವಿಳಾಸದಲ್ಲಿ ಲಾಗಿನ್ ಆಗಬೇಕು
 • ಸಿ ಜಿ ಎಲ್ ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
 • ಕೇಳಲಾಗಿರುವ ಮಾಹಿತಿಯನ್ನು ನಮೂದಿಸಿ
 • submit ಬಟನ್ ಕ್ಲಿಕ್ ಮಾಡಿ
 • ರಿಸಲ್ಟ್ ಶೀಟ್ ತೆರೆದುಕೊಳ್ಳುವುದು
 • ರಿಸಲ್ಟ್ ಶೀಟ್ ಅನ್ನು ಸೇವ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ

ಪರೀಕ್ಷಾ ಕ್ರಮದಲ್ಲಿ ಬದಲಾವಣೆ

 • ಪ್ರಶ್ನೆಪತ್ರಿಕೆಯಲ್ಲಿ 200 ಪ್ರಶ್ನೆಗಳ ಬದಲಾಗಿ 100 ಪ್ರಶ್ನೆಗಳನ್ನು ಕೇಳಲಾಗುವುದು
 • ಒಟ್ಟು ಅಂಕಗಳು 200 , ಪ್ರತಿ ಪ್ರಶ್ನೆಗೆ 2 ಅಂಕಗಳು
 • ಪರೀಕ್ಷೆ ಬರೆಯಲು 75 ನಿಮಿಷಗಳ ಕಾಲಾವಕಾಶ ನೀಡಲಾಗುವುದು
 • ತೃತೀಯ ಶ್ರೇಣಿ ಪತ್ರಿಕೆಗೆ ಹಿಂದಿ/ ಇಂಗ್ಲಿಷ್ ನ ಡೆಸ್ಕ್ರಿಪ್ಟಿವ್ ಮಾದರಿ ಅಳವಡಿಸಲಾಗಿದೆ.

ಪರೀಕ್ಷಾ ವಿಧಾನ

 • ತೃತೀಯ ಶ್ರೇಣಿ ಪತ್ರಿಕೆಯು ಡೆಸ್ಕ್ರಿಪ್ಟಿವ್ ಮಾದರಿಯಲ್ಲಿರುತ್ತದೆ
 • ಅಭ್ಯರ್ಥಿಯು ಬರವಣಿಗೆ ಮೂಲಕ ಉತ್ತರಿಸಬೇಕು
 • ಗರಿಷ್ಠ ಅಂಕಗಳು 100
 • ಅಭ್ಯರ್ಥಿಗಳಿಗೆ ಪತ್ರ, ಪ್ರಬಂಧ ಮತ್ತು ಪ್ಯಾಸೇಜ್ ಬರೆವಣಿಗೆ ಕೇಳಲಾಗುವುದು
 • ಅಭ್ಯರ್ಥಿಗಳ ಬರವಣಿಗೆ ಕೌಶಲ್ಯವನ್ನು ಪರಿಗಣಿಸಲಾಗುವುದು

ಸೂಚನೆ

 • ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಪ್ರವೇಶಿಸಬೇಕಾದರೆ ಕನಿಷ್ಠ 33 ಅಂಕಗಳನ್ನು ಪಡೆಯಬೇಕು
 • ಮೂರನೇ ಶ್ರೇಣಿ ನಂತರ ನಾಲ್ಕನೇ ಶ್ರೇಣಿ ಎದುರಿಸಬೇಕು
 • ನಾಲ್ಕನೇ ಶ್ರೇಣಿಯಲ್ಲಿ ಡೇಟಾ ಎಂಟ್ರಿ ಕೌಶಲಿಲವನ್ನು ಮತ್ತು ಕಂಪ್ಯೂಟರ್ ಜ್ಞಾನವನ್ನು ಪರೀಕ್ಷಿಸಲಾಗುವುದು.

ಎಸ್ ಎಸ್ ಸಿ

ಸ್ಟಾಫ್ ಸೆಲೆಕ್ಷನ್ ಕಮಿಷನ್ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರದ ಮಿತಿಗೆ ಬರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದೆ.
ಎಸ್ ಎಸ್ ಸಿ ಪರೀಕ್ಷೆಗಳು, ಉದ್ಯೋಗ ಮಾಹಿತಿಗಾಗಿ ಎಸ್ ಎಸ್ ಸಿ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ http://ssc.nic.in/

For Quick Alerts
ALLOW NOTIFICATIONS  
For Daily Alerts

English summary
The SSC CGL Tier II Exam 2016 results are out. Interested candidates can check the results on the official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X