ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ದಿನಾಂಕವನ್ನು ಮುಂದೂಡಲಾಗಿದೆ. ಮೊನ್ನೆಯಷ್ಟೇ ಜುಲೈ 5ರಂದು ಪರೀಕ್ಷೆಯನ್ನು ನಡೆಸುವುದಾಗಿ ಶಿಕ್ಷಣ ಸಚಿವರು ಪ್ರಕಟಿಸಿದ್ದರು. ಆದರೆ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (CTET) ಜುಲೈ 05 (ಭಾನುವಾರ) ರಂದೇ ನಡೆಸಲು ಉದ್ದೇಶಿಸಿರುವ ಕಾರಣ ರಾಜ್ಯ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಎಸ್ ಸುರೇಶ್‌ಕುಮಾರ್ ರವರು ಟ್ವೀಟ್ ಮಾಡುವ ಮೂಲಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜುಲೈ 12 (ಭಾನುವಾರ) ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಎರಡು ಪರೀಕ್ಷೆಗಳು ಒಂದೇ ದಿನ ನಿಗದಿಯಾಗಿವೆ ಎಂದು ಗೊಂದಲಕ್ಕೀಡಾಗಿದ್ದ ಅಭ್ಯರ್ಥಿಗಳು ಈಗ ನಿಶ್ಚಿಂತೆಯಿಂದ ಪರೀಕ್ಷೆಗೆ ತಯಾರಿ ನಡೆಸಬಹುದಾಗಿದೆ.
KTET ಪರೀಕ್ಷೆ 2020ರ ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?:
ಸ್ಟೆಪ್ 1: ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ http://www.schooleducation.kar.nic.in/ ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ KTET 2020 ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ಮತ್ತೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕೇಳಲಾಗಿರುವ ಮಾಹಿತಿ ಭರ್ತಿ ಮಾಡಿ.
ಸ್ಟೆಪ್ 4: ನಂತರ ಪ್ರವೇಶ ಪತ್ರ ಲಭ್ಯವಾಗುವುದು ಅದನ್ನು ಸೇವ್ ಮಾಡಿ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ.


Click it and Unblock the Notifications











