
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯುಜಿಸಿ-ನೆಟ್ ಡಿಸೆಂಬರ್ 2020 ಮತ್ತು ಜೂನ್ 2021ರ ಪರೀಕ್ಷೆಗಳ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಯುಜಿಸಿ ಎನ್‌ಇಟಿ ಪರೀಕ್ಷೆಯು ಈಗಾಗಲೇ ಅನೇಕ ಕಾರಣಗಳಿಂದ ಮುಂದೂಡಲಾಗಿದೆ, ಆದರೆ ಇದೀಗ ಅಧಿಕೃತವಾಗಿ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದ್ದು, ನವೆಂಬರ್ 20, 2021 ರಿಂದ ಪರೀಕ್ಷೆ ಆರಂಭವಾಗಲಿವೆ. ಅಭ್ಯರ್ಥಿಗಳು ಸಂಪೂರ್ಣ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ಎನ್‌ಟಿಎ ಈ ಹಿಂದೆ ನಿಗದಿಪಡಿಸಿದ್ದ ಪರೀಕ್ಷೆಗಳ ವೇಳಾಪಟ್ಟಿಯ ನಡುವಿನ ಘರ್ಷಣೆಯನ್ನು ತಪ್ಪಿಸಲು ಪರೀಕ್ಷೆಯನ್ನು ಮುಂದೂಡಿತ್ತು. ಪರೀಕ್ಷೆಗಳನ್ನು ಈಗ ನವೆಂಬರ್ 20, 21, 22, 24, 25, 26, 29, 30 ಮತ್ತು ಡಿಸೆಂಬರ್ 1, 2, 3, 4 ಮತ್ತು 5, 2021 ರಂದು ನಡೆಸಲಾಗುವುದು ಎಂದು ಹೇಳಿದೆ.
ಯುಜಿಸಿ ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಗಳು ಕನಿಷ್ಠ 40 ಪ್ರತಿಶತ ಅಂಕಗಳನ್ನು ಗಳಿಸಬೇಕು (ಮೀಸಲು ವರ್ಗದ ಅಭ್ಯರ್ಥಿಗಳಿಗೆ 35 ಪ್ರತಿಶತ). ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಹಾಯಕ ಪ್ರಾಧ್ಯಾಪಕ ಅಥವಾ ಜೂನಿಯರ್ ಸಂಶೋಧನಾ ಫೆಲೋಶಿಪ್ (JRF) ಹುದ್ದೆಗೆ ಅರ್ಹರಾಗಿರುತ್ತಾರೆ.
ಯುಜಿಸಿ ಎನ್‌ಇಟಿ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿದೆ. ಪ್ರತಿ ವಿಷಯಕ್ಕೆ ಎರಡು ಪತ್ರಿಕೆಗಳಿದ್ದು, ಪೇಪರ್ 1ರಲ್ಲಿ 50 ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದೆ ಮತ್ತು ಪೇಪರ್ 2ರಲ್ಲಿ 100 ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮೂರು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ಸರಿಯಾದ ಉತ್ತರಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ ಮತ್ತು ಯಾವುದೇ ನೆಗೆಟಿವ್ ಅಂಕಗಳು ಇರುವುದಿಲ್ಲ.
ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











