VTU First Semester Exam Time Table : ವಿಟಿಯು ಮೊದಲ ಸೆಮಿಸ್ಟರ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

ವಿಟಿಯು ಮೊದಲ ಸೆಮಿಸ್ಟರ್ ವೇಳಾಪಟ್ಟಿ ಪ್ರಕಟ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದ್ದು, ಬಾಕಿ ಉಳಿದ ಮೊದಲ ಸೆಮಿಸ್ಟರ್ ಪರೀಕ್ಷೆಗಳ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಿಗದಿಪಡಿಸಲಾಗಿದ್ದ ಪರೀಕ್ಷೆಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆದರೆ ಇದೀಗ ವಿಟಿಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.

ವೇಳಾಪಟ್ಟಿಯ ಪ್ರಕಾರ ಜುಲೈ 27 ರಿಂದ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾಗಲಿದ್ದು, ಅಗಸ್ಟ್ 3ರವರೆಗೆ ನಡೆಯಲಿವೆ. ಅಗಸ್ಟ್ 4 ರಿಂದ ಅಗಸ್ಟ್ 13ರವರೆಗೆ ವೈವಾ ಮತ್ತು ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಜನವರಿ, ಮಾರ್ಚ್​​ನಲ್ಲಿ ನಡೆದಿದ್ದ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವು ಈಗಾಗಲೇ ಪ್ರಕಟವಾಗಿದ್ದು, ಮರು ಮೌಲ್ಯಮಾಪನಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಅರ್ಜಿ ಆಹ್ವಾನಿಸಿದೆ.

ಜುಲೈ 14ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಉತ್ತರ ಪತ್ರಿಕೆ ಫೋಟೋ ಕಾಪಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಮರುಮೌಲ್ಯಮಾಪನ ಅರ್ಜಿ ಆಯಾ ಕಾಲೇಜಿಗೆ ಸಲ್ಲಿಸಬೇಕಿದ್ದು, http://prexamblr.Vtu.Ac.inನಲ್ಲಿ ಅರ್ಜಿ ವೀಕ್ಷಿಸಬಹುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸುತ್ತೋಲೆ ತಿಳಿಸಿದೆ.

For Quick Alerts
ALLOW NOTIFICATIONS  
For Daily Alerts

English summary
VTU 2021 announced first semester time table. Check dates here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X