ಅರಣ್ಯ ಇಲಾಖೆಯಲ್ಲಿ 329 ವಲಯ ಅರಣ್ಯಾಧಿಕಾರಿ ಮತ್ತು ಮೋಜಣಿದಾರ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳಂತೆ 2012 ರಂತೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರಣ್ಯ ಇಲಾಖೆಯ ಒಟ್ಟು 288 ಉಪ ವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ ಮತ್ತು ಬ್ಯಾಕ್ಲಾಗ್ 41 ಉಪ ವಲಯ ಅರಣ್ಯಾಧಿಕಾರಿ ಮತ್ತು ಮೋಕಣಿದಾರ ಒಟ್ಟು 329 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಯ ವಿವರ
ಹುದ್ದೆಯ ಹೆಸರು: ಉಪ ವಲಯ ಅರಣ್ಯಾಧಿಕಾರಿ
ಒಟ್ಟು ಹುದ್ದೆ: 329
ವೇತನ ಶ್ರೇಣಿ: ರೂ.12500-24000/-
ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ (ಅರಣ್ಯಶಾಸ್ತ್ರ) ವಿಷಯದಲ್ಲಿ ಅಥವಾ ಬಿ.ಎಸ್ಸಿಯಲ್ಲಿ ಪದವೀಧರರಾಗಿರಬೇಕು. ಬಿ.ಎಸ್ಸಿ. ಪದವೀಧರರು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂಗರ್ಭಶಾಸ್ತ್ರ, ಮೈಕ್ರೋಬಯಾಲಜಿ, ಬಯೋಟೆಕ್ನಾಲಜಿ, ಬಯೋಕೆಮಿಸ್ಟ್ರಿ ಈ ಐಚ್ಛಿಕ ಪಠ್ಯಕ್ರಮಗಳಲ್ಲಿ ಯಾವುದಾದರು ಎರಡು ಅಥವಾ ಹೆಚ್ಚಿನ ಪಠ್ಯಕ್ರಮಗಳನ್ನು ಎಲ್ಲಾ ಸೆಮಿಸ್ಟರುಗಳಲ್ಲಿ ಅಭ್ಯಾಸ ಮಾಡಿರಬೇಕು.

ವಯೋಮಿತಿ
ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
- ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷ
- ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 28 ವರ್ಷ
- ಪ.ಜಾ/ಪ.ಪಂ/ಪ್ರ-೧ ಅಭ್ಯರ್ಥಿಗಳಿಗೆ 30 ವರ್ಷ
ಅರ್ಜಿ ಸಲ್ಲಿಕೆ
- ಅರ್ಜಿಗಳನ್ನು ಆನ್-ಲೈನ್ ಮೂಲಕ ಸಲ್ಲಿಸತಕ್ಕದ್ದು. ಆನ್-ಲೈನ್ ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.
- ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಳು, ಜಾತಿ/ಪ್ರವರ್ಗ ದೃಢೀಕರಿಸುವ ಪ್ರಮಾಣ ಪತ್ರಗಳು, ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನಾ ನಿರಾಶ್ರಿತ , ವೈದ್ಯಕೀಯ ಪ್ರಮಾಣ ಪತ್ರ, ಸೈನಿಕ ಸೇವೆ ದೃಢೀಕರಣ ಮತ್ತು ಇತರೆ ಅವಶ್ಯವಿರುವ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಇಲಾಖಾ ವೆಬ್ಸೈಟ್ ಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಅಪ್ಲೋಡ್ ಮಾಡತಕ್ಕದ್ದು.
- ಆನ್-ಲೈನ್ ಮೂಲಕ ಅರ್ಜಿಯನ್ನು ದಿನಾಂಕ 15-05-2017 ರಿಂದ 14-06-2017 ರ ಅಪರಾಹ್ನ 4-30 ಗಂಟೆಯವರೆಗೆ ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸುವ ಆನ್-ಲೈನ್ ವಿಳಾಸ kfdrecruitment.in
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.100 + ಸೇವಾ ಶುಲ್ಕ ರೂ.15 /-
- ಪ.ಜಾ/ಪ.ಪಂ/ಪ್ರ-1 /ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.25 + ಸೇವಾ ಶುಲ್ಕ ರೂ.15 /-
- ಅರ್ಜಿ ಶುಲ್ಕವನ್ನು ಇ-ಪಾವತಿ ಸೌಲಭ್ಯವಿರುವ ಅಂಚೆ ಕಚೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ, ಈ ಮೇಲೆ ಹೇಳಿರುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕ ಅಭ್ಯರ್ಥಿಗಳು ಪಾವತಿಸತಕ್ಕದ್ದು.
- ಶುಲ್ಕ ಪಾವತಿಸಲು ಕಡೆಯ ದಿನಾಂಕ 17-06-2017 ಮಧ್ಯಾಹ್ನ 1:00 ಗಂಟೆ
ಆಯ್ಕೆ ಪ್ರಕ್ರಿಯೆ
ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೇಹದಾರ್ಡ್ಯತೆ , ದೈಹಿಕ ತಾಳ್ವಿಕೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಮೂಲ ದಾಖಲೆಗಳ ಪರಿಶೀಲನೆ, ದೈಹಿಕ ತಾಳ್ವಿಕೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ನಡೆಯುವ ಸ್ಥಳ
ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಧಾರವಾಡ, ಹಾಸನ, ಶಿರಸಿ, ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರ್ಗಿ ಬಳ್ಳಾರಿ
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್ ವಿಳಾಸ www.aranya.gov.in ಗಮನಿಸಿ


Click it and Unblock the Notifications











