AAAL Recruitment 2021 : 40 ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ನೇರ ಸಂದರ್ಶನ

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನಲ್ಲಿ 40 ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 15,2021 ಮತ್ತು ಡಿಸೆಂಬರ್ 16,2021 ರಂದು ಬೆಳಿಗ್ಗೆ 9:30 ರಿಂದ 12:30ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ನೇಮಕಾತಿ ಬಗೆಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಎಎಎಎಲ್ ನಲ್ಲಿ 40 ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಇಂಟರ್ವ್ಯೂ

AAAL ನೇಮಕಾತಿ 2021 ವಿದ್ಯಾರ್ಹತೆ ಮತ್ತು ಅನುಭವ :

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ಯಾವುದೇ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

AAAL ನೇಮಕಾತಿ 2021 ವಯೋಮಿತಿ :

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ 15,2021ರ ಅನ್ವಯ ಗರಿಷ್ಟ 45 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

AAAL ನೇಮಕಾತಿ 2021 ಆಯ್ಕೆ ಪ್ರಕ್ರಿಯೆ:

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

AAAL ನೇಮಕಾತಿ 2021 ವೇತನ :

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 22,371/-ರೂ ವೇತನವನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

AAAL ನೇಮಕಾತಿ 2021 ಅರ್ಜಿ ಶುಲ್ಕ :

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ನಡೆಸಲಾಗುವ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 1000/-ರೂ ಅರ್ಜಿ ಶುಲ್ಕವನ್ನು ಡಿಡಿ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗಿರುತ್ತದೆ.

AAAL ನೇಮಕಾತಿ 2021 ಸಂದರ್ಶನ ವಿವರ:

ಅಲೈಯನ್ಸ್ ಏರ್ ಏವಿಯೇಶನ್ ಲಿಮಿಟೆಡ್ (ಎಎಎಎಲ್) ನೇಮಕಾತಿಯ ಸೂಪರ್‌ವೈಸರ್ ಸೆಕ್ಯುರಿಟಿ ಹುದ್ದೆಗಳಿಗೆ ನಡೆಸಲಾಗುತ್ತಿರುವ ಸಂದರ್ಶನದಕ್ಕೆ ಹಾಜರಾಗಲಿರುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://www.airindia.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಡಿಸೆಂಬರ್ 15,2021 ಮತ್ತು ಡಿಸೆಂಬರ್ 16,2021 ರಂದು ಬೆಳಿಗ್ಗೆ 9:30 ರಿಂದ 12:30ರ ವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Alliance Air Aviation Limited (AAAL) recruitment 2021 notification has been released for 40 supervisor security posts. Interested candidates can attend walk in interview on december 15 and 16,2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+