AAI Recruitment 2020: 368 ಜ್ಯೂನಿಯರ್ ಎಕ್ಸಿಕ್ಯುಟಿವ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ 368 ಜ್ಯೂನಿಯರ್ ಎಕ್ಸಿಕ್ಯುಟಿವ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ವಿದ್ಯಾರ್ಹತೆ, ವಯೋಮಿತಿ ಮತ್ತು ಇತರೆ ಮಾಹಿತಿಯನ್ನು ಪಡೆಯಲು ಮುಂದೆ ಓದಿ.

ಏರ್‌ಪೋರ್ಟ್ ಅಥಾರಿಟಿಯಲ್ಲಿ ಉದ್ಯೋಗಾವಕಾಶ...ತಿಂಗಳಿಗೆ 40 ಸಾವಿರ ವೇತನ ಪಡೆಯುವ ಅವಕಾಶ
ವಿದ್ಯಾರ್ಹತೆ:

ಬಿ.ಇ/ಬಿ.ಟೆಕ್, ಬಿ.ಎಸ್ಸಿ/ಪದವಿ, ಗ್ರಾಜುಯೇಶನ್ ಮತ್ತು ಎಂಬಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವಯೋಮಿತಿ:

ನವೆಂಬರ್ 30,2020ರ ಅನ್ವಯ ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಟ 32 ಮತ್ತು ಜ್ಯೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

ವೇತನ:

ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 60,000/- ರಿಂದ 1,80,000/-ರೂ ಮತ್ತು ಜ್ಯೂನಿಯರ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000/- ರಿಂದ 1,40,000/-ರೂ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು 1000/-ರೂ, ಪ.ಜಾ/ಪ.ಪಂ ಅಭ್ಯರ್ಥಿಗಳು 170/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:

ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ https://www.aai.aero/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಡಿಸೆಂಬರ್ 15.2020 ರಿಂದ ಜನವರಿ 14,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
AAI recruitment 2020 notification has been released for 368 junior executive and manager posts. Interested candidates can apply before January 14.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X