ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್ 7 ವಿವಿಧ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಕಸ್ಟಮರ್ ಏಜೆಂಟ್ ಮತ್ತು ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 10,2019ರಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

| CRITERIA | DETAILS |
| Name Of The Posts | ಕಸ್ಟಮರ್ ಏಜೆಂಟ್, ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್ |
| Organisation | ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್ |
| Educational Qualification | ಪದವಿ,ಎಸ್ ಎಸ್ ಎಲ್ ಸಿ/ 10ನೇ ತರಗತಿ |
| Job Location | ಹುಬ್ಬಳ್ಳಿ (ಕರ್ನಾಟಕ) |
| Salary Scale | ಕಸ್ಟಮರ್ ಏಜೆಂಟ್-ತಿಂಗಳಿಗೆ 17,790/-ರೂ ವೇತನ, ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್ -ತಿಂಗಳಿಗೆ 13,440/-ರೂ ವೇತನ |
| Application End Date | February 10, 2019 |
ವಿದ್ಯಾರ್ಹತೆ :
ಕಸ್ಟಮರ್ ಏಜೆಂಟ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2+3 ಮಾದರಿಯಡಿಯಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಕಂಪ್ಯೂಟರ್ ಜ್ಞಾನದೊಂದಿಗೆ ವಾಕ್ಚಾತುರ್ಯವನ್ನು ಹೊಂದಿರಬೇಕು.
ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ/ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 1,2019ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಅಭ್ಯರ್ಥಿಗಳು 28 ವರ್ಷ, ಓಬಿಸಿ ಅಭ್ಯರ್ಥಿಗಳು 31 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ 33ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವೇತನದ ವಿವರ:
ಕಸ್ಟಮರ್ ಏಜೆಂಟ್: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,790/-ರೂ ವೇತನವನ್ನು ನೀಡಲಾಗುವುದು.
ಹ್ಯಾಂಡಿಮ್ಯಾನ್/ಹ್ಯಾಂಡಿವುಮೆನ್ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 13,440/-ರೂ ವೇತನವನ್ನು ನೀಡಲಾಗುವುದು.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ. ಇತರೆ ಅಭ್ಯರ್ಥಿಗಳು 500/- ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಿರುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಪರೀಕ್ಷೆ, ಗುಂಪು ಚರ್ಚೆ,ಶಾರೀರಿಕ ಸಹಿಷ್ಣುತೆ ಪರೀಕ್ಷೆ ಮತ್ತು ಪೂರ್ವ-ಉದ್ಯೋಗ ವೈದ್ಯಕೀಯ ಪರೀಕ್ಷೆಯ ಮೇಲೆ ಆಯ್ಕೆ ಮಾಡಲಾಗುವುದು.
ಸಂದರ್ಶನ ನಡೆಯುವ ಸ್ಥಳ:
ಪ್ರೊಫೆಸರ್ ಕಮಲ ಶಿವಪ್ಪ ಬಾಳೇಕುಂದ್ರಿ ಪ್ರೌಢ ಶಾಲೆ,
ಡಾ. ರಾಮಕೃಷ್ಣನ್ ನಗರ, ಗೋಕುಲ ರಸ್ತೆ,
ಹುಬ್ಬಳ್ಳಿ,
ಧಾರವಾಡ (ಜಿಲ್ಲೆ)
ಮೇಲೆ ನೀಡಲಾದ ಸ್ಥಳದಲ್ಲಿ ಫೆಬ್ರವರಿ10,2019ರಂದು ಬೆಳಗ್ಗೆ 9ಗಂಟೆಯಿಂದ ಸಂದರ್ಶನ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಹಾಜರಾಗಬಹುದು.
ಈ ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











