ಏರ್ ಇಂಡಿಯಾ ನೇಮಕಾತಿ 43 ಆಫೀಸರ್ ಮತ್ತು ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಮಾರ್ಚ್ 28,2019 ರೊಳಗೆ ಕಳುಹಿಸಬಹುದು.

| CRITERIA | DETAILS |
| Name Of The Posts | ಆಫೀಸರ್ , ಡೆಪ್ಯುಟಿ ಮ್ಯಾನೇಜರ್ |
| Organisation | ಏರ್ ಇಂಡಿಯಾ ಎಕ್ಸ್‌ಪ್ರೆಸ್ |
| Educational Qualification | ಪದವಿ , ಎಂಬಿಎ, ಸಿಎ / ಐಸಿಡಬ್ಲ್ಯೂಎ, ಎಟಿಪಿಎಲ್ ,ಪಿಐಸಿ |
| Job Location | ಭಾರತದೆಲ್ಲೆಡೆ |
| Salary Scale | ತಿಂಗಳಿಗೆ 25,000/- ರಿಂದ 1,10,000/- ರೂ |
| Application Start Date | March 13, 2019 |
| Application End Date | March 28, 2019 |
ಖಾಲಿ ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಚೀಫ್ ಮ್ಯಾನೇಜರ್ | 1 |
| ಆಫೀಸರ್ | 12 |
| ರೂಟ್ ಮ್ಯಾನೇಜರ್ | 4 |
| ಪ್ರೈಸಿಂಗ್ ಅನಾಲಿಸ್ಟ್ / ಡಿಮ್ಯಾಂಡ್ ಅನಾಲಿಸ್ಟ್ | 1 |
| ಡೆಪ್ಯುಟಿ ಮ್ಯಾನೇಜರ್ -ಫಿನಾನ್ಸ್ | 6 |
| ಆಫೀಸರ್- ಫಿನಾನ್ಸ್ | 6 |
| ಸೀನಿಯರ್ ಅಸಿಸ್ಟೆಂಟ್ - ಫಿನಾನ್ಸ್ / ಕ್ಯಾಷಿಯರ್ | 7 |
| ಡೆಪ್ಯುಟಿ ಮ್ಯಾನೇಜರ್ | 1 |
| ಆಫೀಸರ್ | 1 |
| ಅಸಿಸ್ಟೆಂಟ್ | 2 |
| ಡೆಪ್ಯುಟಿ ಚೀಫ್ ಆಫ್ ಟ್ರೈನಿಂಗ್ | 1 |
| ಸಿಂಥೆಟಿಕ್ ಫ್ಲೈಟ್ ಇನ್‌ಸ್ಟ್ರಕ್ಟರ್ | 1 |
ಹುದ್ದೆಗಳಿಗೆ ಕೇಳಾಗಿರುವ ವಿದ್ಯಾರ್ಹತೆ ಮತ್ತು ಸಂಬಳದ ವಿವರ:
| ಹುದ್ದೆಗಳ ಹೆಸರು | ವಿದ್ಯಾರ್ಹತೆ | ಸಂಬಳದ ವಿವರ |
| ಚೀಫ್ ಮ್ಯಾನೇಜರ್ | ಪದವಿ | ತಿಂಗಳಿಗೆ 1,10,000/- ರೂ |
| ಆಫೀಸರ್ | ಪದವಿ | ತಿಂಗಳಿಗೆ 50, 000/- ರೂ |
| ರೂಟ್ ಮ್ಯಾನೇಜರ್ | ಎಂಬಿಎ | ತಿಂಗಳಿಗೆ 35,000/- ರೂ |
| ಪ್ರೈಸಿಂಗ್ ಅನಾಲಿಸ್ಟ್ / ಡಿಮ್ಯಾಂಡ್ ಅನಾಲಿಸ್ಟ್ | ಎಂಬಿಎ | ತಿಂಗಳಿಗೆ 60,000/- ರೂ |
| ಡೆಪ್ಯುಟಿ ಮ್ಯಾನೇಜರ್ -ಫಿನಾನ್ಸ್ | ಸಿಎ / ಐಸಿಡಬ್ಲ್ಯೂಎ | ತಿಂಗಳಿಗೆ 35,000/- ರೂ |
| ಆಫೀಸರ್- ಫಿನಾನ್ಸ್ | ಎಂಬಿಎ | ತಿಂಗಳಿಗೆ 28,000/- ರೂ |
| ಸೀನಿಯರ್ ಅಸಿಸ್ಟೆಂಟ್ - ಫಿನಾನ್ಸ್ / ಕ್ಯಾಷಿಯರ್ | ಪದವಿ | ತಿಂಗಳಿಗೆ 60,000/- ರೂ |
| ಡೆಪ್ಯುಟಿ ಮ್ಯಾನೇಜರ್ | ಎಂಬಿಎ | ತಿಂಗಳಿಗೆ 60,000/- ರೂ |
| ಆಫೀಸರ್ | ಎಂಬಿಎ | ತಿಂಗಳಿಗೆ 35,000/- ರೂ |
| ಅಸಿಸ್ಟೆಂಟ್ | ಪದವಿ | ತಿಂಗಳಿಗೆ 25,000/- ರೂ |
| ಡೆಪ್ಯುಟಿ ಚೀಫ್ ಆಫ್ ಟ್ರೈನಿಂಗ್ | ಪದವಿ | ತಿಂಗಳಿಗೆ 1,25,000/- ರೂ |
| ಸಿಂಥೆಟಿಕ್ ಫ್ಲೈಟ್ ಇನ್‌ಸ್ಟ್ರಕ್ಟರ್ | ಎಟಿಪಿಎಲ್ ,ಪಿಐಸಿ | ಗಂಟೆಗೆ 4,600/-ರೂ |
ವಯೋಮಿತಿ:
ಈ ಹುದ್ದೆಗಳಿಗೆ 30 ರಿಂದ 70 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಓಬಿಸಿ ಅಭ್ಯರ್ಥಿಗಳು 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 5 ವರ್ಷ ವಯೋಮಿತಿ ಸಡಿಲಿಕೆಯನ್ನು ಹೊಂದಿರುತ್ತಾರೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ , ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಸಾಮಾನ್ಯ ಓಬಿಸಿ ಅಭ್ಯರ್ಥಿಗಳು 500 /-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದು ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಮಾರ್ಚ್ 28,2019ಕಳುಹಿಸಬಹುದು. ಅರ್ಜಿಯನ್ನು ಕಳುಹಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.
ಕಚೇರಿಯ ವಿಳಾಸ:
The Chief Of HR,
Air India Express Limited,
Airlines House, Durbar Hall Road,
Near Gandhi Square,
Kochi-682016
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಹಾಗೂ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications











