ಏರ್ ಇಂಡಿಯಾ ಲಿಮಿಟೆಡ್ ನಲ್ಲಿ 400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಕ್ಯಾಬಿನ್ ಸಿಬ್ಬಂದಿಗಳಿಗಾಗಿ ಅವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಟ್ರೈನಿ ಕ್ಯಾಬಿನ್ ಸಿಬ್ಬಂದಿ ಮತ್ತು ಅನುಭವಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 01,2017 ಕೊನೆ ದಿನಾಂಕವಾಗಿದೆ.
ಹುದ್ದೆಗಳ ವಿವರ
ಹುದ್ದೆ: ಟ್ರೈನಿ ಕ್ಯಾಬಿನ್ ಸಿಬ್ಬಂದಿ(ಮಹಿಳೆಯರಿಗೆ)
ಒಟ್ಟು ಹುದ್ದೆ: 400
| ಎಸ್.ಸಿ | ಎಸ್.ಟಿ | ಒಬಿಸಿ | ಸಾಮಾನ್ಯ |
| 28 | 19 | 153 | 200 |
ವಿದ್ಯಾರ್ಹತೆ
10+2 ಜತೆಗೆ ಪದವಿ ಅಥವಾ ಮೂರು ವರ್ಷಗಳ ಡಿಪ್ಲೋಮಾ/ ಡಿಗ್ರಿ ಹೋಟೆಲ್ ಮ್ಯಾನೇಜ್ಮೆಂಟ್ ಹಾಗೂ ಕೆಟರಿಂಗ್ ತಂತ್ರಜ್ಞಾನ, ಟ್ರಾವೆಲ್ ಅಂಡ್ ಟೂರಿಸಂ ಮ್ಯಾನೇಜ್ಮೆಂಟ್ ಕೋರ್ಸ್ ಪಡೆದಿರಬೇಕು.

ವಯೋಮಿತಿ
- ಅನುಭವಿ ಕ್ಯಾಬಿನ್ ಹುದ್ದೆಗೆ:01/08/2017ರಂತೆ ಗರಿಷ್ಠ 35 ವರ್ಷ.
- ಟ್ರೈನಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ 01/08/2017ರಂತೆ ಗರಿಷ್ಠ 27 ವರ್ಷ.
- ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇರುತ್ತದೆ.
ಅರ್ಹತೆ
- ಅನುಭವಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೋಯಿಂಗ್ ವಿಮಾನದಲ್ಲಿ ಕನಿಷ್ಠ ಒಂದು ವರ್ಷ ಕ್ಯಾಬಿನ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿರಬೇಕು.
- ಟ್ರೈನಿ ಕ್ಯಾಬಿನ್ ಸಿಬ್ಬಂದಿ ಹುದ್ದೆಗೆ ಯಾವುದೇ ಸೇವಾನುಭವದ ಅವಶ್ಯಕತೆ ಇಲ್ಲ
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಿಡಿತ ಹೊಂದಿರಬೇಕು. ವಿದೇಶಿ ಭಾಷೆ ಬಲ್ಲವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಕೆ
ಅರ್ಜಿಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿ ಸಲ್ಲಿಸುವವರು ವೆಬ್ಸೈಟ್ ವಿಳಾಸದ ಮೂಲಕ ಅರ್ಜಿ ಸಲ್ಲಿಸುವುದು.
ಅರ್ಜಿ ಶುಲ್ಕ
- ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/-
- ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
- ಶುಲ್ಕವನ್ನು ಡಿ.ಡಿ ಮೂಲಕ ಪಾವತಿಸಬಹುದಾಗಿದ್ದು, AIR INDIA LIMITED ಹೆಸರಿನಲ್ಲಿ ದೆಹಲಿಯಲ್ಲಿ ಸಂದಾಯವಾಗುವಂತೆ ತೆಗೆಯುವುದು.
ಆಯ್ಕೆ ಪ್ರಕ್ರಿಯೆ
ವೈಯಕ್ತಿಕ ಸಂದರ್ಶನ, ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಟ್ರೈನಿ ಸಿಬ್ಬಂದಿಗಳಿಗೆ ಮಾಸಿಕ ರೂ.15000/- ಸ್ಟೈಪಂಡ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 01/08/2017
ಸಂದರ್ಶನದ ಸ್ಥಳ
Training Hall, Ground Floor
Air India Admin Building, Opp. Post Office
IGI Airport, Terminal- 1, Palam, New Delhi 110037
ಸಂದರ್ಶನ ನಡೆಯುವ ದಿನಾಂಕ
04-08-2017, 05-08-2017, 06-08-2017
ಹೆಚ್ಚಿನ ವಿವರಗಳಿಗಾಗಿ www.airindia.in ಗಮನಿಸಿ


Click it and Unblock the Notifications











