ಏರ್‌ ಇಂಡಿಯಾ ಲಿಮಿಟೆಡ್ ನೇಮಕಾತಿ 61 ಅಕೌಂಟ್ಸ್ ಎಕ್ಸಿಕ್ಯುಟಿವ್ ಮತ್ತು ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಏರ್‌ ಇಂಡಿಯಾ ಲಿಮಿಟೆಡ್ ನೇಮಕಾತಿ 61 ಅಕೌಂಟ್ಸ್ ಎಕ್ಸಿಕ್ಯುಟಿವ್ ಮತ್ತು ಅಕೌಂಟ್ಸ್ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಪ್ರಸ್ತುತ ಹುದ್ದೆಗಳು ಮುಂಬೈ, ದೆಹಲಿ, ಕೊಲ್ಕತ್ತ,ಚೆನ್ನೈ ,ಹೈದರಾಬಾದ್ ಮತ್ತು ಬೆಂಗಳೂರು ಕಡೆಗಳಲ್ಲಿ ಖಾಲಿ ಇದ್ದು ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಅಧಿಸೂಚನೆಯನ್ನ ಓದಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದೆಹಲಿ ಮತ್ತು ಮುಂಬೈ ನಲ್ಲಿ ಮೇ 3,4 ಮತ್ತು ಮೇ 10,11 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ12:30ರ ವರೆಗೆ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಏರ್‌ ಇಂಡಿಯಾ ಲಿಮಿಟೆಡ್ ನೇಮಕಾತಿ 61 ಹುದ್ದೆಗಳಿಗೆ ವಾಕ್‌ - ಇನ್‌ ಇಂಟರ್ವ್ಯೂ

CRITERIA DETAILS
Name Of The Posts ಅಕೌಂಟ್ಸ್ ಎಕ್ಸಿಕ್ಯುಟಿವ್ ಮತ್ತು ಅಕೌಂಟ್ಸ್ ಕ್ಲರ್ಕ್
Organisation ಏರ್‌ ಇಂಡಿಯಾ ಲಿಮಿಟೆಡ್
Educational Qualification ಸಿಎ/ಐಸಿಡಬ್ಲ್ಯೂಎ/ಎಂಬಿಎ/ಬಿ.ಕಾಂ
Job Location ಭಾರತದೆಲ್ಲೆಡೆ
Salary Scale ಅಕೌಂಟ್ಸ್ ಕ್ಲರ್ಕ್ - 25,200/-ರೂ ಮತ್ತು ಅಕೌಂಟ್ಸ್ ಎಕ್ಸಿಕ್ಯುಟಿವ್ - 45,000/-ರೂ
Application Start Date May 3, 2019
Application End Date May 11, 2019

ಶೈಕ್ಷಣಿಕ ವಿದ್ಯಾರ್ಹತೆ:

ಅಕೌಂಟ್ಸ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಸಿಎ/ಐಸಿಡಬ್ಲ್ಯೂಎ/ಎಂಬಿಎ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರುವುದರ ಜೊತೆಗೆ 2 ವರ್ಷದ ಅನುಭವ ಮತ್ತು ಅಕೌಂಟ್ಸ್ ಕ್ಲರ್ಕ್ ಹುದ್ದೆಗಳಿಗೆ ಸಿಎ ಇಂಟರ್/ ಐಸಿಡಬ್ಲ್ಯೂಎ ಇಂಟರ್ / ಬಿ.ಕಾಂ ಜೊತೆಗೆ 2 ವರ್ಷದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನದ ವಿವರ:

ಅಕೌಂಟ್ಸ್ ಕ್ಲರ್ಕ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25,200/-ರೂ ಮತ್ತು ಅಕೌಂಟ್ಸ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 45,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು 1,000/-ರೂ ಅರ್ಜಿ ಶುಲ್ಕ ಡಿಮ್ಯಾಂಡ್‌ ಡ್ರಾಫ್ಟ್ ಮೂಲಕ ಪಾವತಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವ ವಿವರ:

ಅಭ್ಯರ್ಥಿಗಳು ಏರ್‌ ಇಂಡಿಯಾ ಲಿಮಿಟೆಡ್ ನ ಅಧಿಕೃತ ವೆಬ್‌ಸೈಟ್‌ http://www.airindia.in./ ರಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ ಅಗತ್ಯ ದಾಖಲೆಗಳೊಂದಿಗೆ ದೆಹಲಿ ಮತ್ತು ಮುಂಬೈ ನಲ್ಲಿ ಮೇ 3,4 ಮತ್ತು ಮೇ 10,11 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ12:30ರ ವರೆಗೆ ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Air India Recruitment 2019-20:Walk-in-Interview for 61 Accounts Executive & Accounts Clerk vacancies. Air India Limited (Air India) invited eligible and interested candidates to attend the walk-in-interview to fill up Accounts Executive & Accounts Clerk Posts through Air India official notification 2019. Job Seekers who are looking for a career in All India Government can make use of this opportunity. Walk-interview for these Air India Accounts Executive & Accounts Clerk jobs will held on 03rd, 04th, 10th & 11th May 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+