ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ 70 ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿ 70 ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಸಂದರ್ಶನದ ವಿವರ ತಿಳಿಯಲು ಮುಂದೆ ಓದಿ.

ಏರ್ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಫ್ಲೈಟ್ ಡಿಸ್ಪ್ಯಾಚರ್
Organisation ಏರ್‌ ಇಂಡಿಯಾ ಲಿಮಿಟೆಡ್
Educational Qualification 10+2 / ಭೌತಶಾಸ್ತ್ರ ಮತ್ತು ಗಣಿತ /ಅದಕ್ಕೆ ಸಮನಾದ ವಿದ್ಯಾರ್ಹತೆ
Job Location ದೆಹಲಿ / ಮುಂಬೈ,ಭಾರತದೆಲ್ಲೆಡೆ
Salary Scale ಸೀನಿಯರ್ ಟ್ರೈನಿ ಫ್ಲೈಟ್ ಡಿಸ್ಪ್ಯಾಚರ್ -ತಿಂಗಳಿಗೆ 40,000/-ರೂ, ಟ್ರೈನಿ ಫ್ಲೈಟ್ ಡಿಸ್ಪ್ಯಾಚರ್ - ತಿಂಗಳಿಗೆ 25,000/-ರೂ , ಜ್ಯೂನಿಯರ್ ಟ್ರೈನಿ ಫ್ಲೈಟ್ ಡಿಸ್ಪ್ಯಾಚರ್ -ತಿಂಗಳಿಗೆ 20,000/-ರೂ
Application End Date May 6, 2019


ಶೈಕ್ಷಣಿಕ ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಭೌತಶಾಸ್ತ್ರ ಮತ್ತು ಗಣಿತ ವಿಷಯದಲ್ಲಿ ಹೊಂದಿರಬೇಕು ಅಥವಾ ಅದಕ್ಕೆ ಸಮನಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯದಿಂದ ಹೊಂದಿರಬೇಕು.

ವಯೋಮಿತಿ:

ಮಾರ್ಚ್ 31,2019ರ ಅನ್ವಯ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಸೀನಿಯರ್ ಟ್ರೈನಿ ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 40,000/-ರೂ,
ಟ್ರೈನಿ ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ಮತ್ತು ಜ್ಯೂನಿಯರ್ ಟ್ರೈನಿ ಫ್ಲೈಟ್ ಡಿಸ್ಪ್ಯಾಚರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಆರ್ಜಿ ಶುಲ್ಕವನ್ನು ಪಾವತಿಬೇಕಿದ್ದು,ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು 1000/-ರೂ ಅರ್ಜಿ

ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿರುವುದಿಲ್ಲ.

ಸಂದರ್ಶನದ ವಿವರ:

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ 6 ಮತ್ತು 9 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕದ ವಿವರ ಕೆಳಗಿನಂತಿವೆ

ಸಂದರ್ಶನ 1: ದಿನಾಂಕ ಮೇ 6,2019 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ ಏರ್ ಇಂಡಿಯಾ ಲಿಮಿಟೆಡ್, ಮುಖ್ಯ ಕಚೇರಿ,ದೆಹಲಿಯಲ್ಲಿ ಸಂದರ್ಶನವಿರುತ್ತದೆ.

ಸಂದರ್ಶನ 2: ದಿನಾಂಕ ಮೇ 9,2019 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ ಏರ್ ಇಂಡಿಯಾ ಲಿಮಿಟೆಡ್ , ಮುಂಬೈ ಕಚೇರಿಯಲ್ಲಿ ಸಂದರ್ಶನವಿರುತ್ತದೆ.

ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಗದಿತ ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Air india recruitment notification has been released on official website for the recruitment of 70 flight dispatcher posts. Interested candidates can attend walk-in interview on may 6th and 9th 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+