ಏರ್‌ ಇಂಡಿಯಾ ನೇಮಕಾತಿ 79 ಟ್ರೈನಿ ಕಂಟ್ರೋಲರ್ಸ್ ಮತ್ತು ಡಿಇಓ ಹುದ್ದೆಗಳಿಗೆ ವಾಕ್‌-ಇನ್‌ ಇಂಟರ್‌ರ್ವ್ಯೂ

ಏರ್‌ ಇಂಡಿಯಾ ನೇಮಕಾತಿ 79 ಟ್ರೈನಿ ಕಂಟ್ರೋಲರ್ಸ್ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ (ಡಿಇಓ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಏರ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 30 ಮತ್ತು ಮೇ 2 ರಂದು ನಡೆಯುವ ವಾಕ್ ಇನ್‌-ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು.

ಏರ್‌ ಇಂಡಿಯಾ  ನೇಮಕಾತಿ 79 ಹುದ್ದೆಗಳಿಗೆ ವಾಕ್‌-ಇನ್‌ ಇಂಟರ್ವ್ಯೂ

CRITERIA DETAILS
Name Of The Posts ಟ್ರೈನಿ ಕಂಟ್ರೋಲರ್ಸ್ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್
Organisation ಏರ್‌ ಇಂಡಿಯಾ ಲಿಮಿಟೆಡ್
Educational Qualification ಬಿ.ಇ /ಬಿ.ಟೆಕ್ ಅಥವಾ ಡಿಪ್ಲೋಮ, ಪದವಿ ಅಥವಾ ಪಿಯುಸಿ
Job Location ದೆಹಲಿ / ಮುಂಬೈ , ಭಾರತದೆಲ್ಲೆಡೆ
Salary Scale ಟ್ರೈನಿ ಕಂಟ್ರೋಲರ್ಸ್ - 45,000/- ರೂ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ - 21,000/-ರೂ
Application Start Date April 12, 2019
Application End Date May 2, 2019


ಶೈಕ್ಷಣಿಕ ವಿದ್ಯಾರ್ಹತೆ:

ಟ್ರೈನಿ ಕಂಟ್ರೋಲರ್ಸ್ ಹುದ್ದೆಗಳಿಗೆ ಬಿ.ಇ /ಬಿ.ಟೆಕ್ ಅಥವಾ ಡಿಪ್ಲೋಮ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ (ಡಿಇಓ) ಹುದ್ದೆಗಳಿಗೆ ಪದವಿ ಅಥವಾ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಏಪ್ರಿಲ್ 1,2019 ರ ಅನ್ವಯ ಗರಿಷ್ಟ 42 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 5ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳು3 ವರ್ಷ ವಯೋಮಿತಿ ಸಡಿಲಿಕೆಯನ್ನು ಹೊಂದಿರುತ್ತಾರೆ.

ವೇತನದ ವಿವರ:

ಟ್ರೈನಿ ಕಂಟ್ರೋಲರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 45,000/- ರೂ ಮತ್ತು ಡಾಟಾ ಎಂಟ್ರಿ ಆಪರೇಟರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,000/-ರೂ ವೇತನವನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು ಅಭ್ಯರ್ಥಿಗಳು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ 500/-ರೂ ಮತ್ತು ಟ್ರೈನಿ ಕಂಟ್ರೋಲರ್ಸ್‌ ಹುದ್ದೆಗಳಿಗೆ 1000/-ರೂ ಅರ್ಜಿ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಸಿಸಬಹುದು. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವಾಕ್ ಇನ್‌-ಇಂಟರ್ವ್ಯೂ:

ಅಭ್ಯರ್ಥಿಗಳು ಏರ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ http://www.airindia.in/ ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 30 ಮತ್ತು ಮೇ 2 ರಂದು ನಡೆಯುವ ವಾಕ್ ಇನ್‌-ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು.

ಸಂದರ್ಶನ ನಡೆಯುವ ಸ್ಥಳ:

ಸಿಎಂಎಸ್ ಡಿಪಾರ್ಟ್ಮೆಂಟ್,
ಏರ್ ಇಂಡಿಯಾ ಲಿಮಿಟೆಡ್,
ಜಿಎಸ್‌ಡಿ ಕಾಂಪ್ಲೆಕ್ಸ್,
ಹೊಸ ಎಟಿಸಿ ಟವರ್ ಬ್ಯುಲ್ಡಿಂಗ್ ಎದುರು,
ಐಜಿಐಎ ಟರ್ಮಿನಲ್ -2 ಹತ್ತಿರ,
ನವದೆಹಲಿ-110037

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Air India Recruitment 2019-20:Walk-in-Interview for 79 Trainee Controllers & DEO vacancies. Air India Limited (Air India) invited eligible and interested candidates to attend the walk-in-interview to fill up Trainee Controllers & DEO Posts through Air India official notification 2019. Job Seekers who are looking for a career in All India Government can make use of this opportunity. Walk-interview for these Air India Trainee Controllers & DEO jobs will held on 30th April 2019 & 02nd May 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X