ಕರ್ನಾಟಕ ಲೋಕ ಸೇವಾ ಆಯೋಗ 2018ರ ಸಾಲಿನ ಖಾಲಿ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 1520 ಜೂನಿಯರ್ ಟ್ರೈನಿಂಗ್ ಆಫೀಸರ್ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 20, 2018ರ ಒಳಗೆ ಅರ್ಜಿ ಸಲ್ಲಿಸಬಹುದು.
ಕಮೀಷನ್ | ಕರ್ನಾಟಕ ಲೋಕ ಸೇವಾ ಆಯೋಗ |
ಹುದ್ದೆ | ಜೂನಿಯರ್ ಟ್ರೈನಿಂಗ್ ಆಫೀಸರ್ |
ಖಾಲಿ ಹುದ್ | 1520 |
ಸೇವೆ ನಿರ್ವಹಿಸಬೇಕಾದ ಸ್ಥಳ | ಕರ್ನಾಟಕ |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 20 ಮಾರ್ಚ್ 2018 |
ವೇತನ ಶ್ರೇಣಿ | 17,650ರೂ. -32,000ರೂ. |
ವಿದ್ಯಾರ್ಹತೆ | ಎಸ್ಎಸ್ಎಲ್ಸಿ ಜೊತೆಗೆ ಸಂಬಂಧಿಸಿದ ವಿಷ್ಯಗಳಲ್ಲಿ ಡಿಪ್ಲೋಮಾ ಮಾಡಿರಬೇಕು. |
ವಯೋಮಿತಿ | 18-35 ವರ್ಷ ( 20೦.03.2018 ಕ್ಕೆ ಅನ್ವಯವಾಗುವಂತೆ) |
ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
ಸ್ಟೆಪ್ 1
ಮೊದಲಿಗೆ ಕರ್ನಾಟಕ ಲೋಕ ಸೇವಾ ಆಯೋಗದ ಅಧೀಕೃತ ವೆಬ್ಸೈಟ್ನ್ನು ಕ್ಲಿಕ್ ಮಾಡಿ. ಅದರಲ್ಲಿ ನೇಮಕಾತಿಗೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.
ಸ್ಟೆಪ್ 2
ಕೊಟ್ಟಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ. ಅದೇ ಪೇಜ್ನ ಕೆಳಗೆ ಕೊಟ್ಟಿರುವ ಎಲ್ಲಾ ಸೂಚನೆಯನ್ನು ನಾನು ಓದಿದ್ದೇನೆ ಎನ್ನುವ ಆಪ್ಷನ್ ಬರುತ್ತದೆ ಅದನ್ನ ಕ್ಲಿಕ್ ಮಾಡಿ ನ್ಯೂ ರಿಜಿಸ್ಟೇಶನ್ ಆಪ್ಷನ್ನ್ನು ಕ್ಲಿಕ್ ಮಾಡಿ
ಸ್ಟೆಪ್ 3
ಹೊಸ ನೊಂದಣಿದಾರರಿಗೆ ಫಾರ್ಮ್ ಕಾಣಿಸುತ್ತದೆ ಅದರಲ್ಲಿ ಕೇಳಲಾಗಿರುವ ಎಲ್ಲಾ ಪ್ರಶ್ನೆಗೆ ಸರಿಯಾಗಿ ಭರ್ತಿ ಮಾಡಬೇಕು.
ಸ್ಟೆಪ್ 4
ಎಲ್ಲವನ್ನು ಭರ್ತಿ ಮಾಡಿದ ನಂತರ ಕೊನೆಗೆ ಸೆಕ್ಯೂರಿಟಿ ಕೋಡ್ ಒಂದನ್ನು ಕೇಳುತ್ತದೆ. ಅಲ್ಲಿ ಕೊಟ್ಟಿರುವ ಕೋಡ್ನ್ನು ಸರಿಯಾಗಿ ನಮೂದಿಸಿ.
ಸ್ಟೆಪ್ 5
ಅಭ್ಯರ್ಥಿಯ ಘೋಷಣೆ ಎನ್ನುವ ಆಪ್ಷನ್ ಕಾಣಿಸುತ್ತದೆ ಅದರಲ್ಲಿ ಕೊಟ್ಟಿರುವುದನ್ನೆಲ್ಲಾ ಓದಿ. ನಾನು ಒಪ್ಪುತ್ತೇನೆ ಎನ್ನುವ ಆಪ್ಷನ್ನ್ನು ಕ್ಲಿಕ್ ಮಾಡಿ . ನಂತರ ಅದರ ಕೆಳಗೆ ಸಬ್ಮಿಟ್ ಆಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ.