ATI Mysore Recruitment 2021 : 21 ಸಹಾಯಕ, ಸಿಬ್ಬಂದಿ ಮತ್ತು ಸಂಶೋಧನಾ ಸಹವರ್ತಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಡಳಿತ ತರಬೇತಿ ಸಂಸ್ಥೆ ಮೈಸೂರು (ಎಟಿಐ ಮೈಸೂರು) 21 ಸಿಬ್ಬಂದಿ, ಸಂಶೋಧನಾ ಸಹಾಯಕ, ತಾಂತ್ರಿಕ ಸಹಾಯಕ, ಮಲ್ಟಿ ಟಾಸ್ಕಿಂಗ್ ಅಫಿಶಿಯಲ್, ಮಲ್ಟಿ ಟಾಸ್ಕಿಂಗ್ ಸಹಾಯಕ, ಹಿರಿಯ ಸಿಬ್ಬಂದಿ, ಕಿರಿಯ ಸಿಬ್ಬಂದಿ, ಕಿರಿಯ ಸಿಬ್ಬಂದಿ ಮತ್ತು ಸಂಶೋಧನಾ ಸಹಾಯಕ ಮತ್ತು ಸಂಶೋಧನಾ ಸಹವರ್ತಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ನೇಮಕಾತಿ ಬಗೆಗಿನ ಸಂಪೂರ್ಣ ವಿವರ ತಿಳಿಯಲು ಮುಂದೆ ಓದಿ.

ಆಡಳಿತ ತರಬೇತಿ ಸಂಸ್ಥೆ ಮೈಸೂರಿನಲ್ಲಿ ಉದ್ಯೋಗಾವಕಾಶ

ಹುದ್ದೆಗಳ ವಿವರ:

ಸಿಬ್ಬಂದಿ - 3 ಹುದ್ದೆಗಳು
ಸಂಶೋಧನಾ ಸಹಾಯಕ - 4 ಹುದ್ದೆಗಳು
ತಾಂತ್ರಿಕ ಸಹಾಯಕ - 2 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಅಫಿಶಿಯಲ್ - 1 ಹುದ್ದೆ
ಮಲ್ಟಿ ಟಾಸ್ಕಿಂಗ್ ಸಹಾಯಕ - 2 ಹುದ್ದೆಗಳು
ಹಿರಿಯ ಸಿಬ್ಬಂದಿ - 4 ಹುದ್ದೆಗಳು
ಕಿರಿಯ ಸಿಬ್ಬಂದಿ - 1 ಹುದ್ದೆ
ಕಿರಿಯ ಸಿಬ್ಬಂದಿ ಮತ್ತು ಸಂಶೋಧನಾ ಸಹಾಯಕ - 3 ಹುದ್ದೆಗಳು
ಸಂಶೋಧನಾ ಸಹವರ್ತಿ - 1 ಹುದ್ದೆ
ಒಟ್ಟು 21 ಹುದ್ದೆಗಳು

ವಿದ್ಯಾರ್ಹತೆ:

ಆಡಳಿತ ತರಬೇತಿ ಸಂಸ್ಥೆ ಮೈಸೂರು (ಎಟಿಐ ಮೈಸೂರು) ನೇಮಕಾತಿಯ ವಿವಿಧ ಹುದ್ದೆಗಳಿಗೆ ಪೋಸ್ಟ್ ಗ್ರಾಜುಯೇಟ್, ಎಂಬಿಎ, ಸಿಎ, ಎಂ.ಕಾಂ, ಪಿಹೆಚ್.ಡಿ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ, ಬಿ.ಟೆಕ್, ಬಿಸಿಎ, ಡಿಪ್ಲೋಮಾ, ಪಿಯುಸಿ/10+2, ಎಂ.ಟೆಕ್, ಎಂ.ಎಸ್, ಎಂಸಿಎ ಮತ್ತು ಎಂ.ಫಿಲ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು.

ವಯೋಮಿತಿ:

ಆಡಳಿತ ತರಬೇತಿ ಸಂಸ್ಥೆ ಮೈಸೂರು (ಎಟಿಐ ಮೈಸೂರು) ನೇಮಕಾತಿ ನಿಯಮಾನುಸಾರ ಗರಿಷ್ಟ 65 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ ವಿವರ:

ಸಿಬ್ಬಂದಿ - ತಿಂಗಳಿಗೆ 75,000/-ರೂ
ಸಂಶೋಧನಾ ಸಹಾಯಕ - ತಿಂಗಳಿಗೆ 30,000/-ರೂ
ತಾಂತ್ರಿಕ ಸಹಾಯಕ - ತಿಂಗಳಿಗೆ 36,000/-ರೂ
ಮಲ್ಟಿ ಟಾಸ್ಕಿಂಗ್ ಅಫಿಶಿಯಲ್ - ತಿಂಗಳಿಗೆ 25,000/-ರೂ
ಮಲ್ಟಿ ಟಾಸ್ಕಿಂಗ್ ಸಹಾಯಕ - ತಿಂಗಳಿಗೆ 25,000/-ರೂ
ಹಿರಿಯ ಸಿಬ್ಬಂದಿ - ತಿಂಗಳಿಗೆ 60,000/-ರೂ
ಕಿರಿಯ ಸಿಬ್ಬಂದಿ - ತಿಂಗಳಿಗೆ 40,000/-ರೂ
ಕಿರಿಯ ಸಿಬ್ಬಂದಿ ಮತ್ತು ಸಂಶೋಧನಾ ಸಹಾಯಕ - ತಿಂಗಳಿಗೆ 30,000/-ರೂ
ಸಂಶೋಧನಾ ಸಹವರ್ತಿ - ತಿಂಗಳಿಗೆ 45,000/-ರೂ

ಆಯ್ಕೆ ಪ್ರಕ್ರಿಯೆ:

ಆಡಳಿತ ತರಬೇತಿ ಸಂಸ್ಥೆ ಮೈಸೂರು (ಎಟಿಐ ಮೈಸೂರು) ನೇಮಕಾತಿಯ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಮೇರೆಗೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://atimysore.gov.in/ ಗೆ ಭೇಟಿ ನೀಡಿ. ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಸೆಪ್ಟೆಂಬರ್ 17,2021ರೊಳಗೆ ಅರ್ಜಿಯನ್ನು ತಲುಪಿಸಬೇಕಿರುತ್ತದೆ.

ಕಚೇರಿ ವಿಳಾಸ:
ಡೈರೆಕ್ಟರ್ ಜನರಲ್,
ಆಡಳಿತ ತರಬೇತಿ ಸಂಸ್ಥೆ,
ಲಲಿತ ಮಹಲ್ ರೋಡ್,
ಮೈಸೂರು,
ಕರ್ನಾಟಕ.

More News  

For Quick Alerts
ALLOW NOTIFICATIONS  
For Daily Alerts

English summary
ATI mysore recruitment 2021 notification has been released for 21 assistant, faculty and RA posts. Interested candidates can apply before September 17.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+