ಗ್ರಾಮ ಲೆಕ್ಕಿಗ ಹುದ್ದೆಗೆ ನೇರ ನೇಮಕಾತಿ... ಮೇ 11 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಗ್ರಾಮ ಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗಧಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ

ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ, ಜಿಲ್ಲಾಧಿಕಾರಿಗಳ ಕಛೇರಿ ಬಳ್ಳಾರಿ, ಗ್ರಾಮ ಲೆಕ್ಕಿಗರ ಹುದ್ದೆಯ ನೇರ ನೇಮಕಾತಿ ಕುರಿತು ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಮೇ.11, 2018 ಕೊನೆಯ ದಿನಾಂಕ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಬಳ್ಳಾರಿ ಜಿಲ್ಲೆಯಲ್ಲಿ 37 ಗ್ರಾಮ ಲೆಕ್ಕಿಗರ ಹುದ್ದೆ ತೆರವಾಗಿದ್ದು, ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಗ್ರಾಮ ಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗಧಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.

ಬಳ್ಳಾರಿ: ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನ ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ, ಪ್ರವರ್ಗ-1, ಮಾ.ಸೈ ಹಾಗೂ ಅಂಗವಿಕಲರೂ 100
ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ರೂ 200

ಶೈಕ್ಷಣಿಕ ವಿದ್ಯಾರ್ಹತೆ:

  • ಪಿಯುಸಿ ಅಥವಾ ಸಿಬಿಎಸ್ ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಈ ವಿದ್ಯಾರ್ಹತೆಯನ್ನ ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು
  • ಮೇಲ್ಕಂಡ ವಿದ್ಯಾರ್ಹತೆಯನ್ನು ಹೊರತುಪಡಿಸಿ, ಇನ್ನಿತ್ತರ ಯಾವುದೇ ತತ್ಸಮಾನ ವಿದ್ಯಾರ್ಹತೆಯನ್ನ ಪರಿಗಣಿಸಲಾಗುವುದಿಲ್ಲ
  • ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ವೇತನ ಶ್ರೇಣಿ:

ರೂ.11600-200-12000-250-13000-300-14200-350-15600-400-17200-450-19000-500-21000

ವಯೋಮಿತಿ:

ಮೀಸಲಾತಿ ಕನಿಷ್ಠ ಗರಿಷ್ಠ
ಪ.ಜಾತಿ/ಪ.ಪಂ/ಪ್ರ.1 18 40
2ಎ, 2ಬಿ, 3ಎ, 3ಬಿ 18 38
ಸಾಮಾನ್ಯ ವರ್ಗ 18 35

ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಕೆ ಹೇಗೆ?

  • ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್‌ಸೈಟ್ ತೆರೆದು ಪರದೆ ಮೇಲೆ ಮೂಡುವ ಅರ್ಜಿಯನ್ನ ಭರ್ತಿ ಮಾಡಬೇಕು
  • ಅಭ್ಯರ್ಥಿಯು Submit Button ಕ್ಲಿಕ್ ಮಾಡಿದಾಗ ಅರ್ಜಿ ಸಂಖ್ಯೆ ಸೃಷ್ಟಿಯಾಗುತ್ತದೆ
  • ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು, ಸ್ವೀಕೃತಿ ಪತ್ರ ಮತ್ತು ದ್ವಿ ಪ್ರತಿ ಚಲನ್ ತೆಗೆದುಕೊಳ್ಳ ತಕ್ಕದ್ದು
  • ಆ ಚಲನ್ ನ್ನು ಅರ್ಜಿ ಶುಲ್ಕದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಯಾವುದಾದರೂ ಶಾಖೆಯ ಜಿಲ್ಲಾಧಿಕಾರಿಗಳು, ಬಳ್ಳಾರಿ ಖಾತೆ ಎಸ್‌ಬಿ ನಂ.64043310450ಕ್ಕೆ ಪಾವತಿಸಬೇಕು
  • ಅಭ್ಯರ್ಥಿಗಳು ಚಲನ್ ಪಾವತಿಯ ಒಂದು ಪ್ರತಿಯನ್ನ ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳಬೇಕು
  • ಅರ್ಜಿಯನ್ನ 11.04.2018 ರಿಂದ 11.05.2018 ರ ಒಳಗಾಗಿ ಸಲ್ಲಿಸತಕ್ಕದ್ದು
  • ಬ್ಯಾಂಕಿನಲ್ಲಿ ನಿದಶಿತ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 11.05.2018
  • ಪಾವತಿಸಿದ ಚಲನ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ 16.05.2018
  • ಡಿಡಿ, ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಗಳನ್ನ ಸ್ವೀಕರಿಸಲಾಗುವುದಿಲ್ಲ.
  • ಒಮ್ಮೆ ಅರ್ಜಿ ಶುಲ್ಕ ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲೂ ಹಿಂತಿರುಗಿಸಲಾಗುವುದಿಲ್ಲ
For Quick Alerts
ALLOW NOTIFICATIONS  
For Daily Alerts

English summary
Revenue Department of karnataka Bellary District has released an employment notification calling out for aspirants to apply for the posts of Village Accountant. Those interested can check out the eligibility, salary scale, how to apply and the complete details of the government job here
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X