ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜ.18ಕ್ಕೆ 25 ಹುದ್ದೆಗಳಿಗೆ ನೇರ ಸಂದರ್ಶನ

ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯಗಳಲ್ಲಿ ಅಪ್ರೆಂಟಿಸ್ ತರಬೇತುದಾರರಾಗಿ ಕೆಲಸ ನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ.

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಿಕೊಂಡು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

25 ಹುದ್ದೆಗಳಿಗೆ ಜ.18ಕ್ಕೆ ನೇರ ಸಂದರ್ಶನ

 

ವಿದ್ಯಾರ್ಹತೆ:

ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಅಥವಾ ಕರ್ನಾಟಕ ಸರ್ಕಾರ ತಾಂತ್ರಿಕ ನಿರ್ದೇಶನಾಲಯದ ಅಡಿಯಲ್ಲಿ ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್ (ದ್ವಿತೀಯ ಪಿಯುಸಿ ನಂತರದ ಎರಡು ವರ್ಷದ ಕೋರ್ಸ್‌) ನಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಶಿಷ್ಯವೇತನ:

ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯ ನೇಮಕಾತಿಯ ಅಪ್ರೆಂಟಿಸ್ ತರಬೇತಿ ಅವಧಿಯಲ್ಲಿ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಪಡೆದ ಅಭ್ಯರ್ಥಿಗೆ 15,000/-ರೂ ಮತ್ತು ಡಿಪ್ಲೋಮಾ ಇನ್ ಲೈಬ್ರರಿ ಸೈನ್ಸ್ ಅಭ್ಯರ್ಥಿಗೆ 10,000/-ರೂ ಶಿ‍‍‍‍ಷ್ಯವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಅವರ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ವಿದ್ಯಾರ್ಹತೆ ಮತ್ತು ಜಾತಿ ಮತ್ತಿತರ ಸ್ವವಿರಗಳನ್ನೊಳಗೊಂಡ ಅರ್ಜಿಯ ನಮೂನೆಯನ್ನು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ http://library-bangaloreuniversity.in/ ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಂದರ್ಶನ ನಡೆಯುವ ದಿನಾಂಕದಂದು ಮೂಲ ದಾಖಲೆಗಳೊಂದಿಗೆ ಹಾಜರಾಗತಕ್ಕದ್ದು.

ಸಂದರ್ಶನದ ವಿವರ:

ಸಂದರ್ಶನ ನಡೆಯುವ ದಿನಾಂಕ ಮತ್ತು ಸಮಯ: ಜನವರಿ 18,2020 ರಂದು ಬೆಳಗ್ಗೆ 11 ಗಂಟೆಗೆ

ಸಂದರ್ಶನ ನಡೆಯುವ ಸ್ಥಳ:

ಬೋರ್ಡ್‌ ರೂಂ (ಕುಲಪತಿಗಳ ಕೊಠಡಿ ಪಕ್ಕ),

ಆಡಳಿತ ಕಛೇರಿ,

ಬೆಂಗಳೂರು ವಿಶ್ವವಿದ್ಯಾಲಯ,

ಜ್ಞಾನಭಾರತಿ,

ಬೆಂಗಳೂರು-560056.

ಅಭ್ಯರ್ಥಿಗಳು ನೇಮಕಾತಿಯ ಪ್ರಕಟಣೆಯನ್ನು ಓದಲು ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Bangalore university conducting walk-in interview for recruitment of 25 library apprentice trainees.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X