ಬಿಬಿಎಂಪಿ ನೇಮಕಾತಿ 250 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಸುತ್ತಿದೆ: ಆಸಕ್ತರು ಪಾಲ್ಗೊಳ್ಳಿ

ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸಲು 250 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 1 ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳ ಬಗೆಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಮುಂದೆ ಓದಿ.

ಬಿಬಿಎಂಪಿ ನೇಮಕಾತಿ:  ಆಗಸ್ಟ್ 1 ರಿಂದ ನೇರ ಸಂದರ್ಶನ

CRITERIA DETAILS
Name Of The Posts ತಜ್ಞರು, ವೈದ್ಯಕೀಯ ಅಧಿಕಾರಿ ಸ್ಟಾಫ್ ನರ್ಸ್,ಫಾರ್ಮಾಸಿಸ್ಟ್,ಟೆಕ್ನೀಶಿಯನ್,ಎಎನ್‌ಎಂ ,ಸಂಯೋಜಕ ,ಸೈಕಾಲಜಿಸ್ಟ್ /ಕೌನ್ಸಿಲರ್ ಮತ್ತು ಸಾಮಾಜಿಕ ಕಾರ್ಯಕರ್ತ
Organisation ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)
Educational Qualification ಎಂಬಿಬಿಎಸ್,ಎಂ.ಡಿ /ಡಿಎನ್‌ಬಿ, ಎಂ.ಎಸ್,ಬಿ.ಎಸ್ಸಿ / ಜಿಎನ್‌ಎಂ /ಡಿಪ್ಲೋಮಾ,ಬಿ.ಫಾರ್ಮ್ /ಡಿ.ಫಾರ್ಮ್,ಎಸ್‌ಎಸ್‌ಎಲ್‌ಸಿ,ಪಿಯುಸಿ,ಎಎನ್‌ಎಂ ತರಬೇತಿ,ಎಂಬಿಎ /ಸ್ನಾತಕ ಡಿಪ್ಲೋಮಾ ,ಸ್ನಾತಕೋತ್ತರ ಪದವಿ,ಎಂಎಸ್‌ಡಬ್ಲ್ಯೂ,ಪದವಿ
Job Location ಬೆಂಗಳೂರು (ಕರ್ನಾಟಕ)
Salary Scale ತಜ್ಞರು -ತಿಂಗಳಿಗೆ 1,10,000/-ರೂ ,ವೈದ್ಯಕೀಯ ಅಧಿಕಾರಿ -ತಿಂಗಳಿಗೆ 50,000/-ರೂ,ಸ್ಟಾಫ್ ನರ್ಸ್,ಫಾರ್ಮಾಸಿಸ್ಟ್,ಟೆಕ್ನೀಶಿಯನ್,ಎಎನ್‌ಎಂ - 12,000/- ರಿಂದ 15,000/-ರೂ,ಸಂಯೋಜಕ - ತಿಂಗಳಿಗೆ 23,000/-ರೂ ,ಸೈಕಾಲಜಿಸ್ಟ್ /ಕೌನ್ಸಿಲರ್ ಮತ್ತು ಸಾಮಾಜಿಕ ಕಾರ್ಯಕರ್ತ - ತಿಂಗಳಿಗೆ 25,000/-ರೂ
Application Start Date July 17, 2019


ಶೈಕ್ಷಣಿಕ ವಿದ್ಯಾರ್ಹತೆ:

ಎಂಬಿಬಿಎಸ್,ಎಂ.ಡಿ /ಡಿಎನ್‌ಬಿ, ಎಂ.ಎಸ್,ಬಿ.ಎಸ್ಸಿ / ಜಿಎನ್‌ಎಂ /ಡಿಪ್ಲೋಮಾ,ಬಿ.ಫಾರ್ಮ್ /ಡಿ.ಫಾರ್ಮ್,ಎಸ್‌ಎಸ್‌ಎಲ್‌ಸಿ,ಪಿಯುಸಿ,ಎಎನ್‌ಎಂ ತರಬೇತಿ,ಎಂಬಿಎ /ಸ್ನಾತಕ ಡಿಪ್ಲೋಮಾ ,ಸ್ನಾತಕೋತ್ತರ ಪದವಿ,ಎಂಎಸ್‌ಡಬ್ಲ್ಯೂ ಮತ್ತು ಪದವಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವಯೋಮಿತಿ:

ಕನಿಷ್ಟ 18 ರಿಂದ ಹುದ್ದೆಗಳಿಗನುಸಾರ ಗರಿಷ್ಟ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ-2ಎ,2ಬಿ,3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ತಜ್ಞರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,10,000/-ರೂ ,ವೈದ್ಯಕೀಯ
ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,000/-ರೂ,ಸ್ಟಾಫ್ ನರ್ಸ್,ಫಾರ್ಮಾಸಿಸ್ಟ್,ಟೆಕ್ನೀಶಿಯನ್,ಎಎನ್‌ಎಂ ಹುದ್ದೆಗಳಿಗೆ 12 ರಿಂದ 15,000/-ರೂ,ಸಂಯೋಜಕ ಹುದ್ದೆಗಳಿಗೆ ತಿಂಗಳಿಗೆ 23,000/-ರೂ ,ಸೈಕಾಲಜಿಸ್ಟ್ /ಕೌನ್ಸಿಲರ್ ಮತ್ತು ಸಾಮಾಜಿಕ ಕಾರ್ಯಕರ್ತ ಹುದ್ದೆ ಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ, ಲಿಖಿತ ಪರೀಕ್ಷೆ ಅಥವಾ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ

ನೇರ ಸಂದರ್ಶನ ವಿವರ:

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 1,2,3,5,6,7 ಮತ್ತು 8 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಸಂದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕದ ಬಗೆಗೆ ಅಧಿಸೂಚನೆಯನ್ನು ಓದಿ ತಿಳಿಯತಕ್ಕದ್ದು. ಇನ್ನಷ್ಟು ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ ಅನ್ನು ಚೆಕ್ ಮಾಡಿಕೊಳ್ಳಬಹುದು.

ಅಭ್ಯರ್ಥಿಗಳು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ

ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ

More News  

For Quick Alerts
ALLOW NOTIFICATIONS  
For Daily Alerts

English summary
BBMP Recruitment 2019-20:Walk-in-Interview for 250 Specialist, ANM, Medical Officers vacancies. Bruhat Bengaluru Mahanagara Palike (BBMP) invited eligible and interested candidates to attend the walk-in-interview to fill up Specialist, ANM, Medical Officers Posts through BBMP official notification 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+