ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ನೇಮಕಾತಿ 8 ಕ್ರಿಯೇಟಿವ್ ಬರಹಗಾರರು ಮತ್ತು ಸೋಶಿಯಲ್ ಮೀಡಿಯಾ ಮೆವೆನ್ಸ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಫೆಬ್ರವರಿ 25,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

| CRITERIA | DETAILS |
| Name Of The Posts | ಸೋಶಿಯಲ್ ಮೀಡಿಯಾ ಎಂಟ್ರೆಂಟ್, ಕ್ರಿಯೇಟಿವ್ ಬರಹಗಾರರು ಮತ್ತು ಸೋಶಿಯಲ್ ಮೀಡಿಯಾ ಮೆವೆನ್ಸ್ ಮತ್ತು ಇತರೆ |
| Organisation | ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ |
| Educational Qualification | ಸ್ನಾತಕೋತ್ತರ ಪದವಿ (ಸಮೂಹ ಸಂವಹನ/ ಪತ್ರಿಕೋದ್ಯಮ) ,ಪದವಿ / ಡಿಪ್ಲೋಮಾ |
| Job Location | ನವದೆಹಲಿ |
| Salary Scale | ಸೋಶಿಯಲ್ ಮೀಡಿಯಾ ಎಂಟ್ರೆಟ್- 47,000/-ರೂ ಕ್ರಿಯೇಟಿವ್ ಬರಹಗಾರ ಮತ್ತು ಸೋಶಿಯಲ್ ಮೀಡಿಯಾ ಮೆವೆನ್ಸ್ - 65,000/-ರೂ |
| Application End Date | February 25, 2019 |
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು 6 ತಿಂಗಳವರೆಗೆ ಕಾಂಟ್ರ್ಯಾಕ್ಟ್ ಮೇಲೆ ಡಿಡಿ ನ್ಯೂಸ್,ನವದೆಹಲಿ ಇಲ್ಲಿ ಕೆಲಸ ನಿರ್ವಹಿಸಲು ನೇಮಕಾತಿ ಮಾಡಲಾಗುತ್ತಿದೆ.
ವಿದ್ಯಾರ್ಹತೆ:
ಸೋಶಿಯಲ್ ಮೀಡಿಯಾ ಎಂಟ್ರೆಟ್ ಮತ್ತು ಕ್ರಿಯೇಟಿವ್ ಬರಹಗಾರ ಮತ್ತು ಸೋಶಿಯಲ್ ಮೀಡಿಯಾ ಮೆವೆನ್ಸ್ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ (ಸಮೂಹ ಸಂವಹನ/ ಪತ್ರಿಕೋದ್ಯಮ) ಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ವೀಡಿಯೋ/ಇಮೇಜ್ ಎಡಿಟರ್ ಮತ್ತು ಆಪ್ಟಿಮೈಸರ್ಸ್ ಹುದ್ದೆಗಳಿಗೆ ಪದವಿ / ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರ:
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಸೋಶಿಯಲ್ ಮೀಡಿಯಾ ಎಂಟ್ರೆಟ್ | 1 |
| ಕ್ರಿಯೇಟಿವ್ ಬರಹಗಾರರು ಮತ್ತು ಸೋಶಿಯಲ್ ಮೀಡಿಯಾ ಮೆವೆನ್ಸ್ | 2 |
| ವೀಡಿಯೋ/ಇಮೇಜ್ ಎಡಿಟರ್ ಮತ್ತು ಆಪ್ಟಿಮೈಸರ್ಸ್ | 1 |
| ಹೆಡ್ | 1 |
| ಡಾಟಾ ಸೈಂಟಿಸ್ಟ್ಸ್ | 2 |
| ಸೋಶಿಯಲ್ ಮೀಡಿಯಾ ಡೆಲಿವರಿ ಪ್ಲಾನಿಂಗ್ ಆಫೀಸರ್ | 1 |
| ಒಟ್ಟು | 8 |
ವೇತನದ ವಿವರ:
ಸೋಶಿಯಲ್ ಮೀಡಿಯಾ ಎಂಟ್ರೆಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 47,000/-ರೂ ವೇತನವನ್ನು ನೀಡಲಾಗುವುದು.
ಕ್ರಿಯೇಟಿವ್ ಬರಹಗಾರ ಮತ್ತು ಸೋಶಿಯಲ್ ಮೀಡಿಯಾ ಮೆವೆನ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 65,000/-ರೂ ವೇತನವನ್ನು ನೀಡಲಾಗುವುದು.
ವೀಡಿಯೋ/ಇಮೇಜ್ ಎಡಿಟರ್ ಮತ್ತು ಆಪ್ಟಿಮೈಸರ್ಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 75,000/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಕಿರುಪಟ್ಟಿಯನ್ನು ತಯಾರಿಸಿ ನಂತರ ನೇರ ಸಂದರ್ಶನವನ್ನು ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳು 500/- ರೂ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳು 250/-ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಬಿಇಸಿಐಎಲ್ ನ ಅಧಿಕೃತ ವೆಬ್‌ಸೈಟ್ http://www.becil.com/ ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ ನಂತರ ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಯ ವಿಳಾಸಕ್ಕೆ ಕಳಹಿಸಬೇಕು.
ಕಚೇರಿಯ ವಿಳಾಸ:
BECIL's Corporate Office: C-56,
A/17, Sector -62,
Noida-201307
ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











