ಬಿಇಎಲ್: 27ಕ್ಕೂ ಅಧಿಕ ಇಂಜಿನಿಯರ್ ಗಳ ನೇಮಕಾತಿ

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್)ನಲ್ಲಿ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಆಪ್ಟಿಕ್ಸ್, ಲೇಸರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 27ಕ್ಕೂ ಅಧಿಕ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2018ರ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ.

ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಆಪ್ಟಿಕ್ಸ್, ಲೇಸರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 27ಕ್ಕೂ ಅಧಿಕ ಇಂಜಿನಿಯರ್ ಗಳನ್ನು ನೇಮಿಸಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 27 ರಿಂದ ಜನವರಿ 20, 2018ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬಿಇಎಲ್ ನೇಮಕಾತಿ

ಹುದ್ದೆಗಳ ವಿವರ

ಕಾಂಟ್ರಾಕ್ಟ್ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್)-09 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್/ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಬಿಇ ಅಥವಾ ಬಿಟೆಕ್ ಪದವಿ ಗಳಿಸಿರಬೇಕು.

ಕಾಂಟ್ರಾಕ್ಟ್ ಇಂಜಿನಿಯರ್ (ಮೆಕ್ಯಾನಿಕಲ್-ಪ್ರಾಡಕ್ಟ್ ಡಿಸೈನ್)-06 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ಪದವಿ ಗಳಿಸಿರಬೇಕು.

ಕಾಂಟ್ರಾಕ್ಟ್ ಇಂಜಿನಿಯರ್ (ಮೆಕ್ಯಾನಿಕಲ್-ಪ್ರಾಡಕ್ಟ್ ಮೆಟೀರಿಯಲ್)-02 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ಪದವಿ ಗಳಿಸಿರಬೇಕು.

ಕಾಂಟ್ರಾಕ್ಟ್ ಇಂಜಿನಿಯರ್ (ಕಂಪ್ಯೂಟರ್ ಸೈನ್ಸ್)-05 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮಶನ್ ಸೈನ್ಸ್ ವಿಷಯದಲ್ಲಿ ಬಿಇ ಅಥವಾ ಬಿಟೆಕ್ ಪದವಿ ಗಳಿಸಿರಬೇಕು.

ಕಾಂಟ್ರಾಕ್ಟ್ ಇಂಜಿನಿಯರ್ (ಆಪ್ಟಿಕ್ಸ್)-03 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಆಪ್ಟಿಕ್ಸ್/ಎಂ.ಟೆಕ್ (ಟೆಕ್ ಫೋಟೋನಿಕ್ಸ್/ಅಪ್ಲೈಡ್ ಆಪ್ಟಿಕ್ಸ್/ಆಪ್ಟಿಕಲ್ ಇಂಜಿನಿಯರಿಂಗ್/ಫೋಟೋನಿಕ್ಸ್) ಹೊಂದಿರಬೇಕು.

ಕಾಂಟ್ರಾಕ್ಟ್ ಇಂಜಿನಿಯರ್ (ಲೇಸರ್)-02 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಆಪ್ಟಿಕ್ಸ್/ಎಂ.ಟೆಕ್ (ಟೆಕ್ ಫೋಟೋನಿಕ್ಸ್/ಅಪ್ಲೈಡ್ ಆಪ್ಟಿಕ್ಸ್/ಆಪ್ಟಿಕಲ್ ಇಂಜಿನಿಯರಿಂಗ್/ಫೋಟೋನಿಕ್ಸ್) ಹೊಂದಿರಬೇಕು.

ವಯೋಮಿತಿ

ಗರಿಷ್ಟ 25 ವರ್ಷ(ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇರುತ್ತದೆ)

ಹುದ್ದೆಯ ತಾಣ: ಬೆಂಗಳೂರು (ಕರ್ನಾಟಕ)
ವೇತನ: ರೂ.23000/-

ಅರ್ಜಿ ಸಲ್ಲಿಕೆ

ಅರ್ಜಿಗಳನ್ನು ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಗಳು

  • ಅರ್ಜಿ ಸಲ್ಲಿಕೆ ಆರಂಭ : 27 ಡಿಸೆಂಬರ್ 2017
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 20 ಜನವರಿ 2018

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
BEL recruitment 2018 notification has been released on official website for the recruitment of 27 (twenty seven) vacancies for contract Engineer.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+