ಬಿಇಎಲ್ ನೇಮಕಾತಿ ಸೀನಿಯರ್ ಇಂಜಿನಿಯರ್ ಮತ್ತು ಉಪ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ರಕ್ಷಣಾ ಸಚಿವಾಲಯದೊಂದಿಗೆ ನವರತ್ನ ಸಾರ್ವಜನಿಕ ವಲಯ ಉದ್ಯಮವು ಭಾರತೀಯ ಪ್ರಜೆಗಳಿಂದ 12 ಸೀನಿಯರ್ ಇಂಜಿನಿಯರ್ ಮತ್ತು ಉಪ ವ್ಯವಸ್ಥಾಪರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ಮತ್ತು ಆಗ್ರಾದ ಘಟಕಗಳಲ್ಲಿ ಅಥವಾ ಯಾವುದೇ ಘಟಕಗಳಲ್ಲಿ 3 ವರ್ಷಗಳ ಕಾಲ ಕೆಲಸ ನಿರ್ವಹಿಸಬೇಕಿರುತ್ತದೆ. ಆಸಕ್ತ ಅಭ್ಯರ್ಥಿಗಳು 27 ಜನವರಿ 2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಬಿಇಎಲ್ ನೇಮಕಾತಿ ಆಸಕ್ತರು ಅರ್ಜಿ ಸಲ್ಲಿಸಬಹುದು

CRITERIA DETAILS
Name Of The Posts ಸೀನಿಯರ್ ಇಂಜಿನಿಯರ್E-||| ಮತ್ತು ಉಪ ವ್ಯವಸ್ಥಾಪಕರು E-|V
Organisation ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್
Educational Qualification BE/B.Tech/M.Tech
Experience ಅಪೇಕ್ಷಣೀಯ
Job Location ಬೆಂಗಳೂರು,ಆಗ್ರಾ, ಭಾರತ
Salary Scale ವರ್ಷಕ್ಕೆ 11 ಲಕ್ಷ ರೂ(ಸೀನಿಯರ್ ಇಂಜಿನಿಯರ್), ವರ್ಷಕ್ಕೆ 13 ಲಕ್ಷ ರೂಗಳು(ಉಪ ವ್ಯವಸ್ಥಾಪಕರು)
Industry ಇಲೆಕ್ಟ್ರಾನಿಕ್ಸ್
Application Start Date January 9, 2019
Application End Date January 27, 2019

ವಿದ್ಯಾರ್ಹತೆ :

ಸೀನಿಯರ್ ಇಂಜಿನಿಯರ್ ಮತ್ತು ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್ (ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್/ಇಲೆಕ್ಟ್ರಾನಿಕ್ಸ್/ ಇಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಶನ್/ಟೆಲಿಕಮ್ಯುನಿಕೇಶನ್ ) ಅಥವಾ ಎಂ.ಟೆಕ್ (ಇನ್ಫರ್ಮೇಶನ್ ಟೆಕ್ನಾಲಜಿ/ಕಮ್ಯುನಿಕೇಶನ್ ಸಿಸ್ಟಮ್) ವಿದ್ಯಾರ್ಹತೆಯ ಜೊತೆಗೆ ನಿರ್ದಿಷ್ಟಪಡಿಸಿದ ಕ್ಷೆತ್ರಗಳಲ್ಲಿ ಅನುಭವವಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಖಾಲಿ ಹುದ್ದೆಗಳ ವಿವರ:

ಹುದ್ದೆಗಳ ಹೆಸರುಹುದ್ದೆಗಳ ಸಂಖ್ಯೆ
ಸೀನಿಯರ್ ಇಂಜಿನಿಯರ್/ E-|||10
ಉಪ ವ್ಯವಸ್ಥಾಪಕ/E|V2
ಒಟ್ಟು12

ವೇತನದ ವಿವರ:

ಸೀನಿಯರ್ ಇಂಜಿನಿಯರ್ ಹುದ್ದೆಗಳಿಗೆ ವರ್ಷಕ್ಕೆ 11ಲಕ್ಷ ರೂ ವೇತನ ಮತ್ತು ಉಪ ವ್ಯವಸ್ಥಾಪಕ ಹುದ್ದೆಗಳಿಗೆ ವರ್ಷಕ್ಕೆ 13ಲಕ್ಷ ರೂ ವೇತನವನ್ನು ನೀಡಲಾಗುತ್ತದೆ.

ವಯೋಮಿತಿ:

ಸೀನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 1.2019 ಕ್ಕೆ 31 ವರ್ಷ ವಯಸ್ಸನ್ನು ಮೀರಿರಬಾರದು. ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 1.2019 ಕ್ಕೆ 36 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

SC/ST ಮತ್ತು ಓಬಿಸಿ ಅಭ್ಯರ್ಥಿಗಳಿಗೆ ಅನುಕ್ರಮವಾಗಿ 3ಮತ್ತು 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ. ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆಆಯ್ಕೆ ವಿಧಾನ:

ಸೀನಿಯರ್ ಇಂಜಿನಿಯರ್ ಮತ್ತು ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನೀಡಲಾಗುತ್ತದೆ. ತದನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೈಗೊಳ್ಳಲಾಗುತ್ತದೆ.

ಶುಲ್ಕದ ವಿವರ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಬೇಕು. ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು ರೂ 500/- ಶುಲ್ಕವನ್ನು SBI collect (ಆನ್ ಲೈನ್ ಅಥವಾ ಚಲನ್ ) ಮೂಲಕ ಪಾವತಿಸಬಹುದು. SC/ST/PWD ಅಭ್ಯರ್ಥಿಗಳು ಈ ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಪ್ರಕ್ರಿಯೆ:

ಅಭ್ಯರ್ಥಿಗಳು ಸೂಚನೆಯಲ್ಲಿ ತಿಳಿಸಿರುವಂತೆಯೇ ಅರ್ಜಿಯನ್ನು ಪೋಸ್ಟ್ ಮೂಲಕ ಸಲ್ಲಿಸಬೇಕು. ಅಭ್ಯರ್ಥಿಗಳು ಅಗತ್ಯ ದಾಖಲೆ ಮತ್ತು ಶುಲ್ಕದ ರಶೀದಿಯನ್ನು "ಉಪ ವ್ಯವಸ್ಥಾಪಕ, ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ
(ಪೋ), ಬೆಂಗಳೂರು 560013" ಇಲ್ಲಿಗೆ ಜನವರಿ 27.2019 ರೊಳಗೆ ಕಳುಹಿಸಬೇಕು.

ಅರ್ಜಿಯನ್ನು ಅಗತ್ಯ ದಾಖಲೆ/ಪ್ರಮಾಣಪತ್ರಗಳ ಜೊತೆಗೆ ಕಳುಹಿಸಿಸುವಾಗ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸಬೇಕು.

ಅರ್ಜಿಯನ್ನು ಡೌನಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ ಈ ಹುದ್ದೆಗಳಿಗೆ ಶುಲ್ಕವನ್ನು ಪಾವತಿಸಲು ಇಲ್ಲಿ ಕ್ಲಿಕ್ ಮಾಡಿ ಈ ಹುದ್ದೆಗಳ ನೇಮಕಾತಿಯ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Bharat Electronics Limited (BEL), a Navaratna public sector enterprise with the Ministry of Defence, Govt. of India, has invited applications from Indian nationals for filling 12 vacancies to the posts of Senior Engineers (SE) and Deputy Managers (DM) at its Units in Bangalore and Agra, or at any of its Units for a period of 3 years. Interested candidates can apply before 27 January 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+