BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ 22 ಸರಂಕ್ಷಣೆ ಅಧಿಕಾರಿ/ ಸಹಾಯಕ ಸಂರಕ್ಷಣ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ (ಸಂರಕ್ಷಣೆ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಫೆಬ್ರವರಿ 10,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಉದ್ಯೋಗಾವಕಾಶ

ವಿದ್ಯಾರ್ಹತೆ:

10ನೇ ತರಗತಿ ಮತ್ತು ಯಾವುದೇ ವಿಷಯದಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವಯೋಮಿತಿ:

ಜನವರಿ 1,2021ರ ಅನ್ವಯ ಸರಂಕ್ಷಣೆ ಅಧಿಕಾರಿ ಹುದ್ದೆಗಳಿಗೆ ಗರಿಷ್ಟ 32 ವರ್ಷ, ಸಹಾಯಕ ಸಂರಕ್ಷಣ ಅಧಿಕಾರಿ ಹುದ್ದೆಗಳಿಗೆ ಗರಿಷ್ಟ 40 ವರ್ಷ, ಕಿರಿಯ ಮೇಲ್ವಿಚಾರಕರು ಹುದ್ದೆಗಳಿಗೆ ಗರಿಷ್ಟ 43 ವರ್ಷ ಮತ್ತು ಹವಿಲ್ದಾರ್ (ಸಂರಕ್ಷಣೆ) ಹುದ್ದೆಗಳಿಗೆ ಗರಿಷ್ಟ 43 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಓಬಿಸಿ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ:

ಸರಂಕ್ಷಣೆ ಅಧಿಕಾರಿ/ ಸಹಾಯಕ ಸಂರಕ್ಷಣ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/- ರಿಂದ 1,40,000/-ರೂ, ಕಿರಿಯ ಮೇಲ್ವಿಚಾರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 24,500/- ರಿಂದ 90,000/-ರೂ ಮತ್ತು ಹವಿಲ್ದಾರ್ (ಸಂರಕ್ಷಣೆ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 20,500/- ರಿಂದ 29,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಬಿಇಎಲ್ ನ ಅಧಿಕೃತ ವೆಬ್‌ಸೈಟ್ https://bel-india.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಫೆಬ್ರವರಿ 10,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
BEL recruitment 2021 notification has been released for 22 officer, supervisor and havildar posts. Interested candidates can apply through online before February 10.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+