BEL Recruitment 2021 : 73 ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) 2021ನೇ ಸಾಲಿಗೆ 73 ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್‌ಗಳ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಬಹುದು. ತಮಿಳುನಾಡಿನಲ್ಲಿ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದಾಗಿದ್ದು, ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 25,2021 ರಿಂದ ಪ್ರಾರಂಭವಾಗಿ ನವೆಂಬರ್ 10,2021ರಂದು ಕೊನೆಗೊಳ್ಳಲಿದೆ.

ಬಿಇಎಲ್ ನಲ್ಲಿ 73 ಹುದ್ದೆಗಳ ನೇಮಕಾತಿ

BEL ನೇಮಕಾತಿ 2021 ಖಾಲಿ ಹುದ್ದೆಗಳ ವಿವರ:

ಗ್ರಾಜುಯೇಟ್ ಅಪ್ರೆಂಟಿಸ್ - 63 ಹುದ್ದೆಗಳು
ಟೆಕ್ನೀಶಿಯನ್ (ಡಿಪ್ಲೋಮಾ) ಅಪ್ರೆಂಟಿಸ್ - 10 ಹುದ್ದೆಗಳು
ಒಟ್ಟು 73 ಹುದ್ದೆಗಳು

BEL ನೇಮಕಾತಿ 2021 ಅರ್ಹತೆ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಯ ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ಬಿ.ಇ/ಬಿ.ಟೆಕ್/ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರಬೇಕು ಎಂದು ಬಿಇಎಲ್ ಅಪ್ರೆಂಟಿಸ್ ಅಧಿಸೂಚನೆ 2021ರಲ್ಲಿ ತಿಳಿಸಲಾಗಿದೆ.

BEL ನೇಮಕಾತಿ 2021 ವಯೋಮಿತಿ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಯ ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಪ್ರೆಂಟಿಸ್ ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರಬೇಕು.

BEL ನೇಮಕಾತಿ 2021 ವೇತನ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಯ ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ಸ್ಟೈಫೆಂಡ್ ಅನ್ನು ನೀಡಲಾಗುವುದು. ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 10,400/- ರಿಂದ 11,110/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

BEL ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಯ ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಯನ್ನು ಕಿರುಪಟ್ಟಿ ಮಾಡಲಾಗುವುದು. ಲಿಖಿತ ಪರೀಕ್ಷೆ, ಗುಂಪು ಚರ್ಚೆ, ದೈಹಿಕ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

BEL ನೇಮಕಾತಿ 2021 ಅರ್ಜಿ ಶುಲ್ಕ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಯ ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಅರ್ಜಿ ಶುಲ್ಕದ ವಿವರವನ್ನು ತಿಳಿಯಲು ನೇಮಕಾತಿ 2021ರ ಅಧಿಸೂಚನೆಯನ್ನು ಓದಬಹುದು.

BEL ನೇಮಕಾತಿ 2021 ಅರ್ಜಿ ಸಲ್ಲಿಕೆ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೇಮಕಾತಿಯ ಗ್ರಾಜುಯೇಟ್ ಮತ್ತು ಟೆಕ್ನೀಶಿಯನ್‌ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ http://www.mhrdnats.gov.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 10,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ಅರ್ಜಿಯನ್ನು ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ನನದಂಬಕ್ಕಂ, ಚೆನ್ನೈ - 6000089 ವಿಳಾಸಕ್ಕೆ ನವೆಂಬರ್ 25,2021ರೊಳಗೆ ತಲುಪಿಸಬೇಕಿರುತ್ತದೆ.

ಅಭ್ಯರ್ಥಿಗಳು ಬಿಇಎಲ್ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
BEL recruitment 2021 notification has been released for 73 graduation and technician apprentice posts. Interested candidates can apply before November 10.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+