BEL Recruitment 2022 : 25 ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ 25 ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು.

ಬಿಇಎಲ್ ನಲ್ಲಿ ಉದ್ಯೋಗಾವಕಾಶ...ನ.29ರೊಳಗೆ ಅರ್ಜಿ ಹಾಕಿ

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ನವೆಂಬರ್ 16,2022 ರಿಂದ ನವೆಂಬರ್ 29,2022ರೊಳಗೆ ಅರ್ಜಿಯನ್ನು ಹಾಕಬಹುದು. ಈ ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆ, ವಯೋಮಿತಿ, ನೀಡಲಾಗುವ ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿಯನ್ನು ಪಡೆಯಲು ಮುಂದೆ ಓದಿ.

BEL ನೇಮಕಾತಿ 2022 ವಿದ್ಯಾರ್ಹತೆ :

BEL ನೇಮಕಾತಿ 2022 ವಿದ್ಯಾರ್ಹತೆ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಬಿ.ಇ/ಬಿ.ಟೆಕ್, ಬಿ.ಎಸ್ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

BEL ನೇಮಕಾತಿ 2022 ವಯೋಮಿತಿ :

BEL ನೇಮಕಾತಿ 2022 ವಯೋಮಿತಿ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 28 ವರ್ಷ ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಟ 32 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

BEL ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

BEL ನೇಮಕಾತಿ 2022 ಆಯ್ಕೆ ಪ್ರಕ್ರಿಯೆ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 

BEL ನೇಮಕಾತಿ 2022 ವೇತನ :

BEL ನೇಮಕಾತಿ 2022 ವೇತನ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000/- ರಿಂದ 55,000/-ರೂಗಳ ವರೆಗೆ ವೇತನ ಜೊತೆಗೆ ಇತರೆ ಭತ್ಯೆಗಳನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

BEL ನೇಮಕಾತಿ 2022 ಅರ್ಜಿ ಶುಲ್ಕ :

BEL ನೇಮಕಾತಿ 2022 ಅರ್ಜಿ ಶುಲ್ಕ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 400/-ರೂ ಮತ್ತು ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 150/-ರೂ ಅರ್ಜಿ ಶುಲ್ಕವನ್ನು ಎಸ್‌ಬಿಐ ಕಲೆಕ್ಟ್ ಅಥವಾ ಆನ್‌ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗಿರುತ್ತದೆ.

BEL ನೇಮಕಾತಿ 2022 ಅರ್ಜಿ ಸಲ್ಲಿಕೆ :

BEL ನೇಮಕಾತಿ 2022 ಅರ್ಜಿ ಸಲ್ಲಿಕೆ :

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿಯ ಟ್ರೈನಿ ಇಂಜಿನಿಯರ್-I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್‌ ನಲ್ಲಿ ಅಧಿಕೃತ ವೆಬ್‌ಸೈಟ್ https://www.bel-india.in/Default.aspx ಗೆ ಭೇಟಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಅಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸುವ ಮೂಲಕ ನವೆಂಬರ್ 16,2022 ರಿಂದ ನವೆಂಬರ್ 29,2022ರೊಳಗೆ ಅರ್ಜಿಯನ್ನು ಕಚೇರಿಗೆ ತಲುಪಿಸಬಹುದು. ಅರ್ಜಿಯ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

ಕಚೇರಿ ವಿಳಾಸ:
Deputy Manager (HR/Military Communications SBU), Bharat Electronics Limited, Jalahalli Post, Bengaluru - 560013.

ಅಭ್ಯರ್ಥಿಗಳು ಬಿಇಎಲ್ ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Bharat electronics limited (BEL) recruitment 2022 notification has been released for 25 trainee engineer-I and project engineer-I posts. Interested candidates can apply before November 29.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X