ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ನಲ್ಲಿ ಖಾಲಿ ಇರುವ ಒಟ್ಟು 20 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗುತ್ತಿಗೆ ಆಧಾರದ ಮೇಲೆ ಸೆಕ್ಷನ್ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ಆಗಸ್ಟ್ 26, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳ ವಿವರ
ರೋಲಿಂಗ್ ಸ್ಟಾಕ್, ಟ್ರ್ಯಾಕ್ಷನ್, ಎಎಫ್ಸಿ, ಟೆಲಿಕಾಂ, ಸಿಗ್ನಲಿಂಗ್, ಸಿವಿಲ್/ಆರ್ಎಸ್ಎಸ್,ಸಿಸ್ಟಂ ಡಿಸೈನ್, ಲಿಫ್ಟ್ ಅಂಡ್ ಎಸ್ಕಲೇಟರ್, ಟಿವಿಎಸ್ ಅಂಡ್ ಇಸಿಎಸ್ ಮತ್ತು ಡಿಪೊಟ್ ವಿಭಾಗಗಳಲ್ಲಿ 20 ಸೆಕ್ಷನ್ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
ವೇತನ ಶ್ರೇಣಿ: ರೂ.35910/-
ವಯೋಮಿತಿ: 31 ಜುಲೈ 2017ಕ್ಕೆ ಅನ್ವಯವಾಗುಂತೆ ಗರಿಷ್ಠ 35 ವರ್ಷ.
ವಿದ್ಯಾರ್ಹತೆ
ಪದವಿಯಲ್ಲಿ ಅಥವಾ ಡಿಪ್ಲಮೋನಲ್ಲಿ ಮೆಕ್ಯಾನಿಕಲ್, ಎಲೆಕ್ಟ್ರಾನಿಕಲ್. ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೆಷನ್ ಇಂಜಿನಿಯರಿಂಗ್ ಪದವಿ ಜೊತೆಗೆ ಮೂರು ವರ್ಷಗಳ ಸೇವಾ ಅನುಭವ ಇರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಪ್ರಿಂಟ್ ತೆಗೆದುಕೊಂಡು, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಛೇರಿ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸತಕ್ಕದ್ದು. ಅರ್ಜಿ ಲಕೋಟೆ ಮೇಲೆ ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೇನೆ ಎನ್ನುವುದನ್ನು ದಪ್ಪಾಕ್ಷರದಲ್ಲಿ ನಮೂದಿಸತಕ್ಕದ್ದು.
ಈ ಗುತ್ತಿಗೆಯ ಅವಧಿ ಮೂರು ವರ್ಷಗಳದಾಗಿದ್ದು, ಲಿಖಿತ ಪರೀಕ್ಷೆ ಬಳಿಕ ವೈಯಕ್ತಿಕ ಸಂದರ್ಶನ ಮೂಲಕ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಳಾಸ
General Manager (HR), Bangalore Metro Rail Corporation
Limited, III Floor, BMTC Complex, K.H.Road, Shanthinagar, Bangalore 560027
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ bmrc.co.in


Click it and Unblock the Notifications











