ನಮ್ಮ ಮೆಟ್ರೋ- ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ.
ಅಕ್ಟೋಬರ್ 31, 2017ರಂದು ಸಂದರ್ಶನ ನಿಗದಿಯಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಹುದ್ದೆಗಳ ವಿವರ
ತಹಸೀಲ್ದಾರ್-01 ಹುದ್ದೆ
ವೇತನ: ರೂ.30000/-
ಉಪ ತಹಸೀಲ್ದಾರ್-01 ಹುದ್ದೆ
ವೇತನ: ರೂ.23000/-
ಸರ್ವೇಯರ್-01 ಹುದ್ದೆ
ವೇತನ: ರೂ.22000/-
ವಯೋಮಿತಿ: ತಹಸೀಲ್ದಾರ್ ಹಾಗೂ ಉಪ ತಹಸೀಲ್ದಾರ್ ಹುದ್ದೆಗೆ ಗರಿಷ್ಠ 45 ವರ್ಷ.
ವಿದ್ಯಾರ್ಹತೆ
- ತಹಸೀಲ್ದಾರ್ ಹುದ್ದೆಯ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಯಲಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು. ತಹಸೀಲ್ದಾರ್ ಹುದ್ದೆಯಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ ಅನುಭವ ಇರಬೇಕು.
- ಉಪ ತಹಸೀಲ್ದಾರ್ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲದಿಂದ ಪದವಿ ಪೂರೈಸಿರಬೇಕು ಜೊತೆಗೆ ಕಂದಾಯ ಇಲಾಖೆಯಲ್ಲಿ ಉಪ ತಹಸೀಲ್ದಾರ್ ಹುದ್ದೆಯಲ್ಲಿ ಸೇವೆ ಮಾಡಿದ ಅನುಭವವಿರಬೇಕು.
- ಸರ್ವೆಯರ್ ಹುದ್ದೆಯ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಪಿಯುಸಿ (10+2)ಗಣಿತ, ವಿಜ್ಞಾನ ವಿಷಯ ಓದಿರಬೇಕು. ಅಥವಾ ಎಸ್ಸೆಸೆಲ್ಸಿ ಆಗಿದ್ದು, ಸರ್ವೇ ವಿಭಾಗದಲ್ಲಿ ಡಿಪ್ಲೋಮಾ/ಐಟಿಐ ಪಡೆದವರು ಹಾಜರಾಗಬಹುದು.
ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಒಂದರಿಂದ ಮೂರು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಮೇಲೆ ತಿಳಿಸಿರುವ ಹುದ್ದೆಗಳಿಗೆ ಅಕ್ಟೋಬರ್ 31, 2017ರಂದು ವಾಕ್ ಇನ್ ಸಂದರ್ಶನ ನಡೆಸಲಾಗುತ್ತದೆ. ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರ, ಮೂಲ ದಾಖಲೆ ಪತ್ರಗಳು, ನಕಲು ಪ್ರತಿಗಳನ್ನು ಸಂದರ್ಶನದ ವೇಳೆ ತರತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











