BHEL Recruitment 2021 : 27 ವೈದ್ಯಕೀಯ ಅಧಿಕಾರಿ/ವೈದ್ಯಕೀಯ ತಜ್ಞ ಹುದ್ದೆಗಳ ನೇಮಕಾತಿ

ಬಿಹೆಚ್ಇಎಲ್ ನಲ್ಲಿ 27 ವೈದ್ಯಕೀಯ ಅಧಿಕಾರಿ ಹುದ್ದೆಗಳ ನೇಮಕಾತಿ

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) 27 ವೈದ್ಯಕೀಯ ಅಧಿಕಾರಿಗಳು/ವೈದ್ಯಕೀಯ ವೃತ್ತಿಪರರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಆಗಸ್ಟ್ 18, 2021 ರಿಂದ ಸೆಪ್ಟೆಂಬರ್ 7, 2021ರ ರಾತ್ರಿ 11:45ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

BHEL ನೇಮಕಾತಿ 2021 ಅರ್ಹತೆಗಳು :

ಬಿಹೆಚ್‌ಇಎಲ್ ನೇಮಕಾತಿಯ ವೈದ್ಯಕೀಯ ಅಧಿಕಾರಿಗಳು/ವೈದ್ಯಕೀಯ ವೃತ್ತಿಪರರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಜೊತೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹೊಂದಿರುವುದರ ಜೊತೆಗೆ ಕನಿಷ್ಠ ಒಂದು ವರ್ಷಗಳ ಅನುಭವ/ಅಭ್ಯಾಸ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

BHEL ನೇಮಕಾತಿ 2021 ವಯೋಮಿತಿ:

ಬಿಹೆಚ್‌ಇಎಲ್ ನೇಮಕಾತಿ 2021ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಗಸ್ಟ್ 1,೨೦೨೧ರ ವೇಳೆಗೆ ಗರಿಷ್ಟ 37 ವರ್ಷ ಮೀರಿರಬಾರದು. ಓಬಿಸಿ-ಎನ್‌ಸಿಎಲ್ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

BHEL ನೇಮಕಾತಿ 2021 ವೇತನ:

ಬಿಹೆಚ್‌ಇಎಲ್ ನೇಮಕಾತಿಯ ವೈದ್ಯಕೀಯ ಅಧಿಕಾರಿಗಳು/ವೈದ್ಯಕೀಯ ವೃತ್ತಿಪರರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 70,000/- ರಿಂದ 2,00,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

BHEL ನೇಮಕಾತಿ 2021 ಅರ್ಜಿ ಶುಲ್ಕ :

ಬಿಹೆಚ್ಇಎಲ್ ನೇಮಕಾತಿಯ ವೈದ್ಯಕೀಯ ಅಧಿಕಾರಿಗಳು/ವೈದ್ಯಕೀಯ ವೃತ್ತಿಪರರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ 354/-ರೂ ಅನ್ನು ಅರ್ಜಿ ಶುಲ್ಕವಾಗಿ ಆನ್‌ಲೈನ್ ಮೋಡ್ ಮೂಲಕ ಪಾವತಿಸಬೇಕಿರುತ್ತದೆ.

BHEL ನೇಮಕಾತಿ 2021 ಆಯ್ಕೆ ಪ್ರಕ್ರಿಯೆ :

ಬಿಹೆಚ್‌ಇಎಲ್ ನೇಮಕಾತಿಯ ವೈದ್ಯಕೀಯ ಅಧಿಕಾರಿಗಳು/ವೈದ್ಯಕೀಯ ವೃತ್ತಿಪರರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯ್ಕೆಯನ್ನು ಶಾರ್ಟ್‌ಲಿಸ್ಟಿಂಗ್, ವೈಯಕ್ತಿಕ ಸಂದರ್ಶನ ಮತ್ತು ದಾಖಲೆ ಪರಿಶೀಲನೆಯ ಮೂಲಕ ಮಾಡಲಾಗುತ್ತದೆ.

BHEL ನೇಮಕಾತಿ 2021 ಅರ್ಜಿ ಸಲ್ಲಿಕೆ:

ಬಿಹೆಚ್ಇಎಲ್ ನೇಮಕಾತಿಯ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://trichy.bhel.com/careers/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸೆಪ್ಟೆಂಬರ್ 7,2021ರ ರಾತ್ರಿ 11:45ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
BHEL recruitment 2021 notification has been released for medical officer/medical professional posts. Interested candidates can apply through online before september 7.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X