ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ನಿಗಮ ನೇಮಕಾತಿ 193 ಇಂಜಿನಿಯರ್ ಮತ್ತು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಬಿಎಂಆರ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದುಕೊಂಡು ಕಚೇರಿಯ ವಿಳಾಸಕ್ಕೆ ಮೇ 6,2019 ರೊಳಗೆ ಕಳಹಿಸಬಹುದು.

| CRITERIA | DETAILS |
| Name Of The Posts | ಇಂಜಿನಿಯರ್ ಮತ್ತು ಮ್ಯಾನೇಜರ್ |
| Organisation | ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ನಿಗಮ |
| Educational Qualification | ಬಿಇ / ಬಿ.ಟೆಕ್ / ಎಂಇ /ಎಂ.ಟೆಕ್ /ಬಿ.ಆರ್ಕ್ / ಡಿಪ್ಲೋಮ |
| Job Location | ಬೆಂಗಳೂರು (ಕರ್ನಾಟಕ) |
| Application End Date | May 6, 2019 |
ಶೈಕ್ಷಣಿಕ ವಿದ್ಯಾರ್ಹತೆ:
ಬಿಇ / ಬಿ.ಟೆಕ್ /ಎಂಇ /ಎಂ.ಟೆಕ್ /ಬಿ.ಆರ್ಕ್ / ಡಿಪ್ಲೋಮ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್‌ನಿಂದ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಈ ಹುದ್ದೆಗಳಿಗೆ ಕನಿಷ್ಟ 35 ವರ್ಷ ಗರಿಷ್ಟ ೬೦ ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಯೋಮಿತಿ ಸಡಿಲಿಕೆಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಬಹುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವುದು ಹೇಗೆ:
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://english.bmrc.co.in/ ಗೆ ಹೋಗಿ ಅಧಿಸೂಚನೆಯನ್ನು ಓದಬಹುದು. ಅಧಿಸೂಚನೆಯನ್ನು ಓದಿದ ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಬಿಎಂಆರ್‌ಸಿಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಅರ್ಜಿಯ ಪ್ರಿಂಟೌಟ್ ಅನ್ನು ಕಚೇರಿಯ ವಿಳಾಸಕ್ಕೆ ಮೇ 6,2019ರ ಸಂಜೆ 4ಗಂಟೆಯೊಳಗೆ ಕಳುಹಿಸಬಹುದು.
ಕಚೇರಿಯ ವಿಳಾಸ:
ಜನರಲ್ ಮ್ಯಾನೇಜರ್,
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್,
3ನೇ ಮಹಡಿ,
ಬಿಎಂಟಿಸಿ ಕಾಂಪ್ಲೆಕ್ಸ್,
ಕೆ.ಹೆಚ್ ರೋಡ್,
ಶಾಂತಿನಗರ,
ಬೆಂಗಳೂರು-560027
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications











