ಬಿಎಂಆರ್ ಸಿಎಲ್ ನೇಮಕಾತಿ 2019: 174 ಮೇಂಟೇನರ್ಸ್ , ಜ್ಯೂನಿಯರ್ ಮತ್ತು ಸೆಕ್ಷೆನ್ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಜ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿ ಎಲ್) 174 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಬಿಎಂಆರ್ ಸಿಎಲ್ ನಿಗಮವು 134ಮೇಂಟೇನರ್ಸ್, 41 ಜ್ಯೂನಿಯರ್ ಇಂಜಿನಿಯರ್ಸ್.37 ಸೆಕ್ಷನ್ ಇಂಜಿನಿಯರ್ಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ನೇರ ನೇಮಕಾತಿಗೆ ಫ್ರೆಬ್ರವರಿ 2,2019 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಮತ್ತು ಫೆಬ್ರವರಿ4,2019ಅರ್ಜಿಯ ಶುಲ್ಕವನ್ನು ಪಾವತಿಸಲು ಕೊನೆಯ ದಿನವಾಗಿರುತ್ತದೆ.

ಬಿಎಂಆರ್ ಸಿಎಲ್ ನ ಆಪರೇಶನ್ಸ್ ಮತ್ತು ಮೇಂಟೇನೆನ್ಸ್ ವಿಂಗ್ ಅಡಿಯಲ್ಲಿ ಕಾರ್ಯಾಚರಣೆಗಳು, ಸಿವಿಲ್ ಮತ್ತು ಸಿಸ್ಟಮ್ಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 2,2019ಕ್ಕೆ ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 35 ದಾಟಿರಬಾರದು, ಎಸ್ಸಿ/ಎಸ್ ಟಿ/ ವರ್ಗ| ರ ವಯಸ್ಸು 40 ದಾಟಿರಬಾರದು. ವರ್ಗ||A,||B,|||A,|||B ಅಭ್ಯರ್ಥಿಗಳ ವಯಸ್ಸು 38 ದಾಟಿರಬಾರದು.ಮಾಜಿ ಸೈನಿಕ ಅಭ್ಯರ್ಥಿಗಳ ವಯಸ್ಸು 50ಅನ್ನು ದಾಟಿರಬಾರದು.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ

CRITERIA DETAILS
Name Of The Posts ಜ್ಯೂನಿಯರ್ ಇಂಜಿನಿಯರ್ಸ್, ಸೆಕ್ಷನ್ ಇಂಜಿನಿಯರ್ಸ್ ಮತ್ತು ಮೇಂಟೇನರ್ಸ್
Organisation ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ
Educational Qualification ಮೆಟ್ರಿಕ್ಯುಲೇಶನ್ + ಐಐಟಿ/ ಬಿಇ/ಬಿ.ಟೆಕ್/ ಸಂಬಂಧಿತ ಕ್ಷೇತ್ರಗಳಲ್ಲಿ ಡಿಪ್ಲೊಮ
Skills Required ಅಪೇಕ್ಷಣೀಯ
Job Location ಬೆಂಗಳೂರು, ಕರ್ನಾಟಕ
Salary Scale ಮೇಂಟೇನರ್ಸ್ಗೆ ತಿಂಗಳಿಗೆ 10,170/- ರಿಂದ 18,500/- ರೂ, ಜ್ಯೂನಿಯರ್ ಇಂಜಿನಿಯರ್ ಗಳಿಗೆ ತಿಂಗಳಿಗೆ 14,000/- ರಿಂದ 26,950/- ರೂ, ಸಿಸ್ಟಮ್ಸ್ ಮತ್ತು ಸಿವಿಲ್ ಗಳಿಗೆ ತಿಂಗಳಿಗೆ 16,000/- ರಿಂದ 30,770/- ರೂ
Industry ರೈಲ್ವೆ
Application Start Date January 3, 2019
Application End Date February 2, 2019

ಅರ್ಜಿ ಶುಲ್ಕ ಮತ್ತು ಭಾಷೆ ಪ್ರಾವೀಣ್ಯತೆ ಕಡ್ಡಾಯ:

ಅರ್ಜಿಯನ್ನು ಸಲ್ಲಿಸಲಿರುವ ಆಭ್ಯರ್ಥಿಗಳ( ಸಾಮಾನ್ಯ, ವರ್ಗ|, ವರ್ಗ ||A, ವರ್ಗ||B, ವರ್ಗ|||A,ವರ್ಗ|||B ) ಅರ್ಜಿ ಶುಲ್ಕ 826/ -ರೂ ಮತ್ತು (ಎಸ್ ಸಿ/ ಎಸ್ ಟಿ ಅಭ್ಯಥಿಗಳ) ಅರ್ಜಿ ಶುಲ್ಕ 354/- ರೂ ಇರುತ್ತದೆ. ಆನ್ ಲೈನ್ ನಲ್ಲಿ ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಮೂಲಕ ಶುಲ್ಕ ಪಾವತಿಸಬಹುದು.

ಅಭ್ಯರ್ಥಿಗಳು ಕನ್ನಡ ಭಾಷೆಯ ಪ್ರಾವೀಣ್ಯತೆಯನ್ನು ಹೊಂದಿರುವುದು ಕಡ್ಡಾಯ. ಕನ್ನಡ ಭಾಷೆಯನ್ನ ಓದಲು, ಬರೆಯಲು ಅಥವಾ ಮಾತನಾಡಲು ಬರದಿದ್ದಲ್ಲಿ ಅಭ್ಯರ್ಥಿಯು ಹುದ್ದೆಗೆ ಅನರ್ಹನಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಬಿಎಂಆರ್ ಸಿಎಲ್ ಖಾಲಿ ಹುದ್ದೆಗಳ ವಿವರ:

Post NameDepartmentNo Of Vacancies
MaintainerOperations
134
Junior Engineer
Systems11
Junior Engineer
Civil 10
Section EngineersSystems11
Section EngineersCivil
08
Total 174

ಹುದ್ದೆಗಳ ವರ್ಗ ಮತ್ತು ಪ್ರದೇಶ ಆಧಾರಿತ ಖಾಲಿ ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಶೈಕ್ಷಣಿಕ ಅರ್ಹತೆಗಳು:

  • ಮೇಂಟೇನರ್ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 10ನೇ ತರಗತಿ ಮತ್ತು ಇಂಜಿನಿಯರಿಂಗ್ ಟ್ರೇಡ್ಸ್ ನ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ನಲ್ಲಿ 2 ವರ್ಷದ ಐಟಿಐ ಮಾಡಿರಬೇಕು.
  • ಮೇಂಟೇನೆನ್ಸ್/ ಎಲೆಕ್ಟ್ರಿಷಿಯನ್/ಫಿಟ್ಟರ್/ ವೈರ್ ಮ್ಯಾನ್/ಇನ್ಸ್ಟ್ರುಮೆಂಟ್ ಮೆಕ್ಯಾನಿಕ್/ಮೆಕ್ ಸಂವಹನ ಸಲಕರಣೆ ನಿರ್ವಹಣೆ, ಮಾಸೋನ್ರಿ, ರೆಫ್ರಿಜರೇಶನ್, ಕಾರ್ಪೆನ್ಟ್ರಿ, ಬ್ಯುಲ್ಡಿಂಗ್ ಮತ್ತು ಎಸಿ ಮೆಕ್ಯಾನಿಕ್ಸ್; ಮೆಕಾನಿಕ್ ರೇಡಿಯೋ ಮತ್ತು ಟಿವಿ/ ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕ್ ಕಂಪ್ಯೂಟರ್ ಹಾರ್ಡ್ವೇರ್/ಮೆಕ್ಯಾನಿಕ್- ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್/ ಮೆಕ್ಯಾನಿಕ್ಸ್/ ಮೆಕ್ಯಾನಿಕ್ ಮೆಕಾಟ್ರೋನಿಕ್ಸ್ ಅಥವಾ ಸಮಾನ ಶಿಕ್ಷಣವನ್ನು ವಿಟಿ/ ಎಸ್ ಸಿವಿಟಿ ಇಂದ ಗುರುತಿಸಲ್ಪಟ್ಟ ಸಂಸ್ಥೆ / ಇನ್ ಸ್ಟಿಟ್ಯೂಟ್ ನಲ್ಲಿ ಪಡೆದುಕೊಂಡಿರಬೇಕು.
  • ಜ್ಯೂನಿಯರ್ ಇಂಜಿನಿಯರ್ಸ್- ಈ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 3 ವ‍ರ್ಷದ ಇಂಜಿನಿಯರಿಂಗ್ ವಿಭಾಗದ ಡಿಪ್ಲೊಮ ಅನ್ನು ಟ್ರೇಡ್ಸ್- ಟೆಲಿಕಮ್ಯುನಿಕೇಶನ್/ಕಂಪ್ಯೂಟರ್ ನೆಟ್ ವರ್ಕಿಂಗ್/ ಅಪ್ಲೈಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್/ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್/ಡಿಜಿಟಲ್ ಇಲೆಕ್ಟ್ರಾನಿಕ್ಸ್/ಇಂಡಸ್ಟ್ರಿಯಲ್ ಕಂಟ್ರೋಲ್/ ಪವರ್ ಇಲೆಕ್ಟ್ರಾನಿಕ್ಸ್ ಅಥವಾ ಸಮಾನ ಶಿಕ್ಷಣವನ್ನು ಎಐಸಿಟಿ ಇಂದ ಗುರುತಿಸಲ್ಪಟ್ಟ ಸಂಸ್ಥೆ/ಇನ್ ಸ್ಟಿಟ್ಯೂಟ್ ನಿಂದ ಪಡೆದುಕೊಂಡಿರಬೇಕು.
  • ಜ್ಯೂನಿಯರ್ ಇಂಜಿನಿಯರ್ಸ್(ಸಿವಿಲ್)-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು 3 ವ‍ರ್ಷದ ಸಿವಿಲ್ ಅಥವಾ ಅದಕ್ಕೆ ಸಮನಾದ ಇಂಜಿನಿಯರ್ ಡಿಪ್ಲೊಮ ಅನ್ನು ಎಐಸಿಟಿಇ ಇಂದ ಗುರುತಿಸಲ್ಪಟ್ಟ ಸಂಸ್ಥೆ/ಇನ್ ಸ್ಟಿಟ್ಯೂಟ್ ನಿಂದ ಪಡೆದುಕೊಂಡಿರಬೇಕು.
  • ಸೆಕ್ಷನ್ ಇಂಜಿನಿಯರ್ಸ್(ಸಿಸ್ಟಮ್ಸ್)- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಟ್ರೇಡ್ಸ್- ಇನ್ಸ್ಟ್ರುಮೆಂಟೇಶನ್ ಮತ್ತು ಕಂಟ್ರೋಲ್ ಇಂಜಿನಿಯರಿಂಗ್/ ಟೆಲಿಕಮ್ಯುನಿಕೇಶನ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್/ ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್/ಮೆಕ್ಯಾನಿಕಲ್/ಕಂಪ್ಯೂಟರ್ ಅಥವಾ ಅದಕ್ಕೆ ಸಮಾನದ ಶಿಕ್ಷಣವನ್ನು ಎಐಸಿಟಿಇ ಇಂದ ಗುರುತಿಸಲ್ಪಟ್ಟ ಸಂಸ್ಥೆ/ಇನ್ ಸ್ಟಿಟ್ಯೂಟ್ ನಿಂದ ಪಡೆದುಕೊಂಡಿರಬೇಕು.
  • ಸೆಕ್ಷನ್ ಇಂಜಿನಿಯರ್ಸ್(ಸಿವಿಲ್)- ಈ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಸಿವಿಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಅಥವಾ ಅದಕ್ಕೆ ಸಮಾನದ ಶಿಕ್ಷಣವನ್ನು ಎಐಸಿಟಿಇ ಇಂದ ಗುರುತಿಸಲ್ಪಟ್ಟ ಸಂಸ್ಥೆ/ಇನ್ ಸ್ಟಿಟ್ಯೂಟ್ ನಿಂದ ಪಡೆದುಕೊಂಡಿರಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ಸಂಬಳದ ವಿವರ:

ಆಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಭಾಷಾ ಪ್ರಾವೀಣ್ಯತೆ ಪರೀಕ್ಷೆ,ಶೈಕ್ಷಣಿಕ ಅರ್ಹತೆ ಮತ್ತು ಮೆಡಿಕಲ್ ಫಿಟ್ನೆಸ್ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಜ್ಯೂನಿಯರ್ ಇಂಜಿನಿಯರ್ಸ್ ಮತ್ತು ಸೆಕ್ಷನ್ ಇಂಜಿನಿಯರ್ಸ್ ಮತ್ತು ಮೇಟೇನರ್ಸ್ಗಳಿಗೆ ವೇತನಗಳು ಇಂತಿವೆ

ಮೇಂಟೇನರ್ಸ್ (ಆಪರೇಶನ್ಸ್)- ತಿಂಗಳಿಗೆ 10,170/- ರಿಂದ 18,500/- ರೂಗಳು
ಜ್ಯೂನಿಯರ್ ಇಂಜಿನಿಯರ್ (ಸಿಸ್ಟಮ್ಸ್)- ತಿಂಗಳಿಗೆ 14,000/- ರಿಂದ 26,950/- ರೂಗಳು
ಜ್ಯೂನಿಯರ್ ಇಂಜಿನಿಯರ್ (ಸಿವಿಲ್) - ತಿಂಗಳಿಗೆ 14,000/- ರಿಂದ 26,950/- ರೂಗಳು
ಸೆಕ್ಷನ್ ಇಂಜಿನಿಯರ್ಸ್(ಸಿಸ್ಟಮ್ಸ್)- ತಿಂಗಳಿಗೆ 16,000/- ರಿಂದ 30,770/- ರೂಗಳು
ಸೆಕ್ಷನ್ ಇಂಜಿನಿಯರ್ಸ್ (ಸಿವಿಲ್)- ತಿಂಗಳಿಗೆ 16,000/- ರಿಂದ 30,770/- ರೂಗಳು

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷೆ ಮತ್ತು ಇನ್ನಿತರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಇಚ್ಚಿಸಿದ್ದಲ್ಲಿ ಬಿಎಂಆರ್ ಸಿಎಲ್ ನ ಅಧಿಕೃತ ವೆಬ್ ಸೈಟ್ ಕೆರಿಯರ್ ಸೆಕ್ಷನ್ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ ಅಥವಾ ಅಭ್ಯರ್ಥಿಗಳು ನೇರವಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The Bangalore Metro Rail Corporation Limited (BMRCL), a joint venture of Government of India and Government of Karnataka, has invited online applications from eligible Indian citizens for filling 174 vacancies to the posts of Junior Engineers (JEs), Section Engineers (SEs) and Maintainers under its Operation & Maintenance (O&M) wing through direct recruitment.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+