ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 695 ಶಿಶಿಕ್ಷು (ಅಪ್ರೆಂಟಿಸ್) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಕ್ಟೋಬರ್ 9,2019ರಂದು ಬೆಳಿಗ್ಗೆ 10:30 ಗಂಟೆಗೆ ಕಚೇರಿ ವಿಳಾಸಕ್ಕೆ ಹಾಜರಾಗತಕ್ಕದ್ದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.

ವಿದ್ಯಾರ್ಹತೆ:
ಶಿಶಿಕ್ಷು ತರಬೇತಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ತರಬೇತಿಯ ವಿವರ:
| ಕ್ರಮ ಸಂಖ್ಯೆ | ವೃತ್ತಿಯ ಹೆಸರು | ತರಬೇತಿ ಅವಧಿ | ಒಟ್ಟು ಹುದ್ದೆಗಳು |
| 1 | ಡೀಸೆಲ್ ಮೆಕ್ಯಾನಿಕ್ | 2 ವರ್ಷ | 530 |
| 2 | ಶೀಟ್‌ಮೆಟಲ್ ವರ್ಕರ್ | 2 ವರ್ಷ | 63 |
| 3 | ವೆಲ್ಡರ್ | 15 ತಿಂಗಳು | 40 |
| 4 | ಫಿಟ್ಟರ್ | 2 ವರ್ಷ | 52 |
| 5 | ಟರ್ನರ್ | 2 ವರ್ಷ | 10 |
ವಯೋಮಿತಿ:
ಅಕ್ಟೋಬರ್ 9,2019ರ ಅನ್ವಯ ಕನಿಷ್ಟ 16 ರಿಂದ ಗರಿಷ್ಟ 26 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ತರಬೇತಿ ಭತ್ಯೆ :
ಶಿಶಿಕ್ಷು ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಕಂಡ ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುವುದು.
| ಕ್ರಮ ಸಂಖ್ಯೆ | ವೃತ್ತಿ | 1ನೇ ವರ್ಷ | 2ನೇ ವರ್ಷ |
| 1 | ಫಿಟ್ಟರ್ | 8,180/- | 9,349/- |
| 2 | ವೆಲ್ಡರ್ | 8,089/- | 9,245/- |
| 3 | ಇತರೆ ವೃತ್ತಿಗಳಿಗೆ | 8,271/- | 9,453/- |
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ,ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಭ್ಯರ್ಥಿಯ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ ಮಾಹಿತಿಗಳನ್ನೊಳಗೊಂಡ ಹಾಗೂ ಅಂದವಾಗಿ ಬೆರಳಚ್ಚುಗೊಳಿಸಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಳನ್ನು ತೆಗೆದುಕೊಂಡು ಅಕ್ಟೋಬರ್ 9,2019ರಂದು ಬೆಳಿಗ್ಗೆ 10:30ಗಂಟೆಯಿಂದ ಸಂಜೆ 5:00 ಗಂಟೆಯೊಳಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ,ಅನೆಕ್ಸ್ ಬಿಲ್ಡಿಂಗ್,3ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ, ಬೆಂಗಳೂರು-560027, ಇಲ್ಲಿ ಖುದ್ದಾಗಿ ಮೂಲಕ ದಾಖಲಾತಿಗಳ ಪರಿಶೀಲನೆಗೆ ಹಾಜರಾಗತಕ್ಕದ್ದು.
ಅಧಿಕೃತ ವೆಬ್‌ಸೈಟ್: https://www.mybmtc.karnataka.gov.in/
ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಪ್ರಕಟಣೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











