ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ 'ಬಿ' ಮತ್ತು 'ಸಿ' ದರ್ಜೆಯ ವಿವಿಧ ಮಿಕ್ಕುಳಿದ ವೃಂದದ (Non Hyderabad-Karnataka) ಬ್ಯಾಕ್‌ಲಾಗ್ (Backlog) ಹುದ್ದೆಗಳ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡದ (Schedule Tribe) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಖಾಲಿ ಇರುವ 26 ಹುದ್ದೆಗಳಿಗೆ ಆಸಕ್ತರಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಬಹುದಾಗಿದ್ದು, ಅಭ್ಯರ್ಥಿಗಳು ಮೊದಲು https://www.bwssb.gov.in/ ನಲ್ಲಿ ಪ್ರಕಟಿಸಲಾಗಿರುವ ಅಧಿಸೂಚನೆಯಲ್ಲಿ ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳತಕ್ಕದ್ದು. ನಂತರ ಏಪ್ರಿಲ್ 5.2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಬಿಡಬ್ಲ್ಯೂಎಸ್‌ಎಸ್‌ಬಿ ಯಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಸಹಾಯಕ ಅಭಿಯಂತರ ,ಕಿರಿಯ ಅಭಿಯಂತರ,ಸಹಾಯಕ ,ಕಿರಿಯ ಸಹಾಯಕ ,ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ ,ಶೀಘ್ರಲಿಪಿಗಾರರು
Organisation ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
Educational Qualification ಪದವಿ , ಪಿಯುಸಿ, ಡಿಪ್ಲೋಮಾ
Job Location ಕರ್ನಾಟಕ
Salary Scale ಸಹಾಯಕ ಅಭಿಯಂತರ (ಸಿವಿಲ್),ಸಹಾಯಕ ಅಭಿಯಂತರ ( ಎಲೆಕ್ಟ್ರಿಕಲ್),ಸಹಾಯಕ ಅಭಿಯಂತರ (ಮೆಕ್ಯಾನಿಕಲ್)-29, 780/- ರಿಂದ 64,680/-ರೂ,ಕಿರಿಯ ಅಭಿಯಂತರ (ಸಿವಿಲ್),ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್)- 21,880/- ರಿಂದ 55,680/- ರೂ,ಸಹಾಯಕ,ಶೀಘ್ರಲಿಪಿಗಾರರು- 19,260/-ರಿಂದ 52,880/- ರೂ,ಕಿರಿಯ ಸಹಾಯಕ, ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ-15,460/- ರಿಂದ 48,680/- ರೂ
Application Start Date March 7, 2019
Application End Date April 5, 2019

ಶೈಕ್ಷಣಿಕ ವಿದ್ಯಾರ್ಹತೆ :

ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ / ಪರೀಕ್ಷಾ ಮಂಡಳಿಗಳಿಂದ ಆಯಾ ಹುದ್ದೆಗಳಿಗೆ ನಿಗದಿ ಪಡಿಸಿರುವ ಅರ್ಹತೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಪ್ರತಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಗಳು ಈ ಕೆಳಗಿನಂತಿವೆ

ಹುದ್ದೆಗಳ ಹೆಸರುಶೈಕ್ಷಣಿಕ ವಿದ್ಯಾರ್ಹತೆ
ಸಹಾಯಕ ಅಭಿಯಂತರ (ಸಿವಿಲ್) ಇಂಜಿನಿಯರಿಂಗ್ ಪದವಿ (ಸಿವಿಲ್)
ಸಹಾಯಕ ಅಭಿಯಂತರ (ಮೆಕ್ಯಾನಿಕಲ್) ಇಂಜಿನಿಯರಿಂಗ್ ಪದವಿ (ಮೆಕ್ಯಾನಿಕಲ್)
ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್) ಇಂಜಿನಿಯರಿಂಗ್ ಪದವಿ (ಎಲೆಕ್ಟ್ರಿಕಲ್)
ಕಿರಿಯ ಅಭಿಯಂತರ (ಸಿವಿಲ್) ಡಿಪ್ಲೋಮಾ (ಸಿವಿಲ್)
ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) ಡಿಪ್ಲೋಮಾ (ಎಲೆಕ್ಟ್ರಿಕಲ್)
ಸಹಾಯಕ ಪದವಿ (ಕಲಾ / ವಾಣಿಜ್ಯ / ವಿಜ್ಞಾನ)
ಕಿರಿಯ ಸಹಾಯಕ ಪಿಯುಸಿ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್
ಮಾಪನ ಓದುಗ ಪಿಯುಸಿ ಜೊತೆಗೆ ೬ ತಿಂಗಳ ಕಂಪ್ಯೂಟರ್ ಕೋರ್ಸ್
ಎರಡನೇ ದರ್ಜೆ ಉಗ್ರಾಣ ಪಾಲಕ ಪಿಯುಸಿ ಜೊತೆಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಸರ್ಟಿಫಿಕೇಟ್ ಕೋರ್ಸ್
ಶೀಘ್ರಲಿಪಿಗಾರರು ಪಿಯುಸಿ ಮತ್ತು ಹಿರಿಯ ಹಾಗೂ ಕಿರಿಯ ಶ್ರೇಣಿಯಲ್ಲಿ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಒಂದು ವರ್ಷದ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಾಡಿರಬೇಕು

ಬ್ಯಾಕ್‌ಲಾಗ್ ಹುದ್ದೆಗಳ ವರ್ಗೀಕರಣ:

ಗ್ರೂಪ್-ಬಿ ವೃಂದ (ತಾಂತ್ರಿಕ /Technical) (Group-B Cadre)

ಹುದ್ದೆಯ ಹೆಸರು ಪ.ಜಾ ಪ.ಪಂ ಒಟ್ಟು ಹುದ್ದೆಗಳ ಸಂಖ್ಯೆ
ಸಹಾಯಕ ಅಭಿಯಂತರ (ಸಿವಿಲ್) 7 1 8
ಸಹಾಯಕ ಅಭಿಯಂತರ (ಮೆಕ್ಯಾನಿಕಲ್) 1 1
ಸಹಾಯಕ ಅಭಿಯಂತರ ( ಎಲೆಕ್ಟ್ರಿಕಲ್) 3 3
ಒಟ್ಟು Total (A) 11 1 12

ಗ್ರೂಪ್ -ಸಿ ವೃಂದ (ತಾಂತ್ರಿಕ /Technical) (Group-C Cadre)

ಹುದ್ದೆಗಳ ಹೆಸರುಪ.ಜಾ ಪ.ಪಂ ಒಟ್ಟು
ಕಿರಿಯ ಅಭಿಯಂತರ (ಸಿವಿಲ್) 1 1
ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) 3 3
ಒಟ್ಟು Total (B) 4 4

ಗ್ರೂಪ್ -ಸಿ ವೃಂದ (ತಾಂತ್ರಿಕೇತರ /Non -Technical) (Group-C Cadre)

ಹುದ್ದೆಗಳ ಹೆಸರು ಪ.ಜಾ ಪ.ಪಂ ಒಟ್ಟು
ಸಹಾಯಕ 2 1 3
ಕಿರಿಯ ಸಹಾಯಕ 1 2 3
ಮಾಪನ ಓದುಗ 2 2
ಎರಡನೇ ದರ್ಜೆ ಉಗ್ರಾಣ ಪಾಲಕ 1 1
ಶೀಘ್ರಲಿಪಿಗಾರರು 1 1
ಒಟ್ಟು Total (C) 6 4 10
Total A+B+C 21 5 26

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಟ 18 ವರ್ಷ ಪೂರೈಸಿರತಕ್ಕದ್ದು ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ:

ಹುದ್ದೆಗಳು ಹುದ್ದೆಗಳಿಗೆ ನೀಡಲಾಗುವ ವೇತನ
ಸಹಾಯಕ ಅಭಿಯಂತರ (ಸಿವಿಲ್),ಸಹಾಯಕ ಅಭಿಯಂತರ ( ಎಲೆಕ್ಟ್ರಿಕಲ್),ಸಹಾಯಕ ಅಭಿಯಂತರ (ಮೆಕ್ಯಾನಿಕಲ್) 29, 780/- ರಿಂದ 64,680/-ರೂ
ಕಿರಿಯ ಅಭಿಯಂತರ (ಸಿವಿಲ್),ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್) 21,880/- ರಿಂದ 55,680/- ರೂ
ಸಹಾಯಕ,ಶೀಘ್ರಲಿಪಿಗಾರರು 19,260/-ರಿಂದ 52,880/- ರೂ
ಕಿರಿಯ ಸಹಾಯಕ, ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ 15,460/- ರಿಂದ 48,680/- ರೂ

ಅರ್ಜಿ ಸಲ್ಲಿಸುವುದು ಹೇಗೆ:

ಅರ್ಜಿಗಳನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಬಹುದಾಗಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು https://www.bwssb.gov.in/ ನಲ್ಲಿ ಪ್ರಕಟಿಸಲಾಗಿರುವ ಅಧಿಸೂಚನೆಯಲ್ಲಿ ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳತಕ್ಕದ್ದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Bangalore Water Supply & Sewage Board recruitment notification has been released for the recruitment of 26 AE,Ju Engineer, Steno & Other Posts. Interested candidates can apply through online before 5th april 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X