ಕೇಂದ್ರ ರೇಷ್ಮೆ ಮಂಡಳಿಯು 9 ಸೈಂಟಿಸ್ಟ್ ಮತ್ತು ಡೈರೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 19,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

| CRITERIA | DETAILS |
| Name Of The Posts | ಸೈಂಟಿಸ್ಟ್ ಮತ್ತು ಡೈರೆಕ್ಟರ್ |
| Organisation | ಕೇಂದ್ರ ರೇಷ್ಮೆ ಮಂಡಳಿ |
| Educational Qualification | ಡಾಕ್ಟೊರೇಟ್ ಪದವಿ,ಸ್ನಾತಕೋತ್ತರ ಪದವಿ |
| Job Location | ಭಾರತದೆಲ್ಲೆಡೆ |
| Salary Scale | ಡೈರೆಕ್ಟರ್ -ತಿಂಗಳಿಗೆ 1,23,100/- ರಿಂದ 2,15,900/-ರೂ, ಸೈಂಟಿಸ್ಟ್ -ಸಿ - ತಿಂಗಳಿಗೆ 67,700/-ರಿಂದ 2,08,700/-ರೂ ಮತ್ತು ಸೈಂಟಿಸ್ಟ್ -ಬಿ -ತಿಂಗಳಿಗೆ 56,100/- ರಿಂದ 1,77,500/-ರೂ |
| Application Start Date | October 19, 2019 |
| Application End Date | November 19, 2019 |
ವಿದ್ಯಾರ್ಹತೆ:
ಡಾಕ್ಟೊರೇಟ್ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವಯೋಮಿತಿ:
ಹುದ್ದೆಗಳಿಗನುಸಾರ ಗರಿಷ್ಟ 35,40 ಮತ್ತು 53 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
ವೇತನದ ವಿವರ:
ಡೈರೆಕ್ಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 1,23,100/- ರಿಂದ 2,15,900/-ರೂ, ಸೈಂಟಿಸ್ಟ್ -ಸಿ ಹುದ್ದೆಗಳಿಗೆ ನೇಮಕ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 67,700/-ರಿಂದ 2,08,700/-ರೂ ಮತ್ತು ಸೈಂಟಿಸ್ಟ್ -ಬಿ ಹುದ್ದೆಗಳಿಗೆ ನೇಮಕ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100/- ರಿಂದ 1,77,500/-ರೂ ವೇತನವನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನ ಅಧಿಕೃತ ವೆಬ್‌ಸೈಟ್ http://csb.gov.in/ ಗೆ ಭೇಟಿ ನೀಡಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನವೆಂಬರ್ 19,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ನಂತರ ಅರ್ಜಿ ಪ್ರತಿಯ ಪ್ರಿಂಟೌಟ್ ಅನ್ನು ಕಚೇರಿಯ ವಿಳಾಸಕ್ಕೆ ನವೆಂಬರ್ 22,2019ರೊಳಗೆ ತಲುಪಿಸತಕ್ಕದ್ದು.
ಕಚೇರಿಯ ವಿಳಾಸ:
ಸದಸ್ಯ ಕಾರ್ಯದರ್ಶಿ,
ಕೇಂದ್ರ ರೇಷ್ಮೆ ಮಂಡಳಿ,
ಸಿಎಸ್‌ಬಿ ಕಾಂಪ್ಲೆಕ್ಸ್,
ಹೊಸೂರು ರಸ್ತೆ,ಬಿ.ಟಿ.ಎಂ ಲೇಔಟ್,
ಮಡಿವಾಳ, ಬೆಂಗಳೂರು - 560068
ಅಭ್ಯರ್ಥಿಗಳು ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.


Click it and Unblock the Notifications











