ಚಾಮುಲ್ ಹಾಲು ಒಕ್ಕೂಟದಲ್ಲಿ 72 ಹುದ್ದೆಗಳ ನೇಮಕಾತಿ ಆಸಕ್ತರು ಇಂದೇ ಅರ್ಜಿ ಹಾಕಿ

ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಕುದೇರು ಇದರಲ್ಲಿ ಖಾಲಿ ಇರುವ ವಿವಿಧ ವೃಂ ದಗಳಲ್ಲಿನ ಒಟ್ಟು 72 ಹುದ್ದೆಗಳನ್ನು ನಿಗದಿಪಡಿಸಿರುವ ಮೀಸಲಾತಿ ವರ್ಗೀಕರಣದನ್ವಯ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ. ಖುದ್ದಾಗಿ / ಅಂಚೆ /ಕೊರಿಯರ್ / ಪ್ರತ್ಯೇಕವಾಗಿ ಅರ್ಜಿ ಕಳುಹಿಸಲು ಅವಕಾಶ ಇರುವುದಿಲ್ಲ. ಖುದ್ದಾಗಿ / ಅಂಚೆ /ಪ್ರತ್ಯೇಕವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದೆಂದು ಈ ಮೂಲಕ ಸ್ಪಷ್ಟಪಡಿಸಿದೆ.

ಚಾಮುಲ್ನಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಅಸಿಸ್ಟೆಂಟ್ ಮ್ಯಾನೇಜರ್, ಜ್ಯೂನಿಯರ್ ಟೆಕ್ನೀಶಿಯನ್ ಮತ್ತು ವಿವಿಧ ಹುದ್ದೆಗಳು
Organisation ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
Educational Qualification ಹುದ್ದೆಗಳಿಗನುಸಾರ ವಿದ್ಯಾರ್ಹತೆ
Salary Scale ಹುದ್ದೆಗಳಿಗನುಸಾರ ವಿದ್ಯಾರ್ಹತೆ
Application Start Date February 20, 2019
Application End Date March 20, 2019

ಶೈಕ್ಷಣಿಕ ವಿದ್ಯಾರ್ಹತೆ :

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಂಬಂಧಿಸಿದ ಹುದ್ದೆಗಳಿಗೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಯಾವುದೇ ಹುದ್ದೆಗೆ ಸೇವಾನುಭವವನ್ನು ನಿಗದಿಪಡಿಸಿದಾಗ ಅಭ್ಯರ್ಥಿಗಳು ವಿದ್ಯಾರ್ಹತೆ ಹೊಂದಿದ ನಂತರ ಅ ಸೇವಾನುಭವ ಹೊಂದಿರತಕ್ಕದ್ದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆಯ ಎಲ್ಲಾ ಸೆಮಿಸ್ಟರ್ / ವರ್ಷಗಳಲ್ಲಿ ಎಲ್ಲಾ ವಿಷಯಗಳಿಗೆ (ಭಾಷೆಗಳು ಒಳಗೊಂಡಂತೆ ) ನಿಗದಿಪಡಿಸಿರುವ ಗರಿಷ್ಟ ಅಂಕಗಳು ಮತ್ತು ಪಡೆದಿರುವ ಅಂಕಗಳನ್ನು ಪರಿಗಣಿಸಿ ಶೇಕಡಾವಾರು ಸರಾಸರಿ ಅಂಕಗಳನ್ನು ಸ್ಟಷ್ಟವಾಗಿ ನಮೂದಿಸುವುದು.

ಪದವಿ: ಅಭ್ಯರ್ಥಿಯು 10+2 ರ ವಿದ್ಯಾಭ್ಯಾಸದ ನಂತರ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾಗಿರುವ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಪಡೆದ ಕನಿಷ್ಟ ಮೂರು ವರ್ಷಗಳ ಅವಧಿಯ ಸಾಂಪ್ರದಾಯಿಕ ಪದವಿ (10+2+3)

ಸ್ನಾತಕೋತ್ತರ ಪದವಿ: ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಪಡೆದ ಪದವಿಯೊಂದಿಗೆ 2 ವರ್ಷ ನಿಯತವಾಗಿ ತರಗತಿಗೆ ಹಾಜರಾಗಿ ಪಡೆದ ಸಾಂಪ್ರದಾಯಿಕ ಸ್ನಾತಕೋತ್ತರ ಪದವಿ (10+2+3+2)

ಐಟಿಐ / ಬಾಯ್ಲರ್ ಅಟೆಂಡೆಂಟ್ ವಿದ್ಯಾರ್ಹತೆ: ಎಸ್‌.ಎಸ್‌.ಎಲ್‌.ಸಿ ನಂತರ ಕರ್ನಾಟಕ ಉದ್ಯೋಗ ಮತ್ತು ತರಬೇತಿ ಇಲಾಖೆ /ರಾಜ್ಯ ಪರೀಕ್ಷಾ ಮಂಡಳಿಯಿಂದ / ಕರ್ನಾಟಕ ಸರ್ಕಾರ ಬಾಯ್ಲರ್ ಅಟೆಂಡೆಂಟ್ ಪರೀಕ್ಷಾ ಮಂಡಳಿಯಿಂದ ಪಡೆದ ಐಟಿಐ ವಿದ್ಯಾರ್ಹತೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಹುದ್ದೆಯ ಹೆಸರುನೇಮಕಾತಿ ನಿಯಮದನ್ವಯ ಅರ್ಹತೆ
ಸಹಾಯಕ ವ್ಯವಸ್ಥಾಪಕರು (ಎ.ಹೆಚ್‌ ಮತ್ತು ಎ.ಐ)ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್ಸಿ ಮತ್ತು ಎ.ಹೆಚ್ ಪದವಿಯನ್ನು ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕರು (ವಿತ್ತ)ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಕಾಂ (ಬಿ.ಕಾಂ ಪದವಿಯೊಂದಿಗೆ)/ ಎಂ.ಬಿ.ಎ (ಫಿನಾನ್ಸ್) (ಬಿ.ಬಿ.ಎಂ ಪದವಿಯೊಂದಿಗೆ) ಸ್ನಾತಕೋತ್ತರ ಪದವಿಯನ್ನು / ಸಿ.ಎ.ಐ.ಸಿ.ಡಬ್ಲ್ಯೂ.ಎ.ಐ ಪದವಿಯನ್ನು ಹೊಂದಿ ಕನಿಷ್ಟ ಮೂರು ವರ್ಷಗಳ ಸೇವಾನುಭವ ಹೊಂದಿರುವ ಹಾಗೂ ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ಗಳ ಬಗ್ಗೆ ಜ್ಞಾನವಿರಬೇಕು. ನೇಮಕಾತಿಯಲ್ಲಿ ಸ್ನಾತಕೋತ್ತರ ಪದವಿಯ ಅಂಕಗಳನ್ನು ಪರಿಗಣಿಸಲಾಗುವುದು.
ಸಹಾಯಕ ವ್ಯವಸ್ಥಾಪಕರು (ಅಭಿಯಂತರ)ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಟೆಕ್ (ಮೆಕ್ಯಾನಿಕಲ್ ಇಂಜಿನಿಯರಿಂಗ್) ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು. ಡೇರಿಯಲ್ಲಿ ಕೆಲಸ ನಿರ್ವಹಿಸಿ ಸೇವಾನುಭವ ಹೊಂದಿರುವವರನ್ನು ಪರಿಗಣಿಸಲಾಗುವುದು.
ತಾಂತ್ರಿಕ ಅಧಿಕಾರಿ (ಡಿ.ಟಿ)ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬೆ.ಟೆಕ್ (ಡಿ.ಟೆಕ್) / ಬಿ.ಎಸ್ಸಿ (ಡಿ.ಟಿ) ಪದವಿಯನ್ನು ಹೊಂದಿರತಕ್ಕದ್ದು.
ಉಗ್ರಾಣಾಧಿಕಾರಿಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಹೊಂದಿದ್ದು, ಜೊತೆಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ನಲ್ಲಿ ಪಿ.ಜಿ. ಡಿಪ್ಲೋಮಾ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು
ಕೃಷಿ ಅಧಿಕಾರಿಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನದಲ್ಲಿ ಸ್ನಾತಕ ಪದವಿಯನ್ನು ಹೊಂದಿರತಕ್ಕದ್ದು ನೇಮಕಾತಿಯಲ್ಲಿ ಸ್ನಾತಕ ಪದವಿಯ ಅಂಕಗಳನ್ನು ಪರಿಗಣಿಸಲಾಗುವುದು.
ಆಡಳಿತಾಧಿಕಾರಿ/ ಕಾರ್ಮಿಕಾಧಿಕಾರಿ/ ಸಾರ್ವಜನಿಕ ಸಂಪರ್ಕ ಅಧಿಕಾರಿ/ ಕೈಗಾರಿಕ ಸಂಪರ್ಕ ಅಧಿಕಾರಿಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲ್‌.ಎಲ್‌.ಎಂ (ಎಲ್‌.ಎಲ್‌.ಬಿ ಪದವಿಯೊಂದಿಗೆ) / ಎಂ.ಬಿ.ಎ (ಹೆಚ್‌.ಆರ್) (ಬಿ.ಬಿ.ಎಂ ಪದವಿಯೊಂದಿಗೆ) / ಎಂ.ಎಸ್‌.ಡಬ್ಲ್ಯೂ (ಬಿ.ಎಸ್‌.ಡಬ್ಲ್ಯೂ ಪದವಿಯೊಂದಿಗೆ ) ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು. ನೇಮಕಾತಿಯಲ್ಲಿ ಸ್ನಾತಕೋತ್ತರ ಪದವಿಯ ಅಂಕಗಳನ್ನು ಪರಿಗಣಿಸಲಾಗುವುದು.
ತಾಂತ್ರಿಕ ಅಧಿಕಾರಿ (ಗು.ನಿ)ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಸ್ನಾತಕೋತ್ತರ ಪದವಿ ( ಕೆಮಿಸ್ಟ್ರಿ/ ಮೈಕ್ರೋ ಬಯಾಲಜಿ) ನೇಮಕಾತಿಯಲ್ಲಿ ಸ್ನಾತಕೋತ್ತರ ಪದವಿಯ ಅಂಕಗಳನ್ನು ಪರಿಗಣಿಸಲಾಗುವುದು / ಬಿ.ಟೆಕ್ (ಡಿ.ಟೆಕ್) / ಪದವಿಯನ್ನು ಹೊಂದಿರತಕ್ಕದ್ದು ನೇಮಕಾತಿಯಲ್ಲಿ ಸ್ನಾತಕ ಪದವಿಯ ಅಂಕಗಳನ್ನು ಪರಿಗಣಿಸಲಾಗುವುದು.
ಎಂ.ಐ.ಎಸ್ /ಸಿಸ್ಟಂ ಆಫೀಸರ್ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ (ಕಂಪ್ಯೂಟರ್ ಸೈನ್ಸ್/ ಇನ್ಫರ್ಮೇಶನ್ ಸೈನ್ಸ್) ಪದವಿಯನ್ನು ಹೊಂದಿರತಕ್ಕದ್ದು.
ತಾಂತ್ರಿಕ ಅಧಿಕಾರಿ (ಇಂಜಿ)ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾಜ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿಯನ್ನು ಹೊಂದಿರತಕ್ಕದ್ದು.
ವಿಸ್ತರಣಾಧಿಕಾರಿ ದರ್ಜೆ-36- ಇತರರಿಗೆ ಹುದ್ದೆಗಳು:
ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ನಾತಕ / ಗ್ರಾಜುಯೇಟ್ ಪದವಿಯನ್ನು ಹೊಂದಿರತಕ್ಕದ್ದು, ಸಹಕಾರ ವ್ಯವಹಾರಗಳ ಡಿಪ್ಲೋಮಾ ಪಡೆದಿರುವವರಿಗೆ ಆದ್ಯತೆ ನೀಡಲಾಗುವುದು.

ಒಳಸೇವೆ ಅಭ್ಯರ್ಥಿ-1 ಹುದ್ದೆ
ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ನಾತಕ / ಗ್ರಾಜುಯೇಟ್ ಪದವಿಯೊಂದಿಗೆ ಒಕ್ಕೂಟದಲ್ಲಿ ಕನಿಷ್ಟ 5 ವರ್ಷಗಳು ಸೇವೆ ಸಲ್ಲಿಸಿರಬೇಕು.

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭ್ಯರ್ಥಿಗಳಿಗೆ 1 ಹುದ್ದೆ
ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯವುದೇ ಸ್ನಾತಕ / ಗ್ರಾಜುಯೇಟ್ ಪದವಿಯೊಂದಿಗೆ ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕನಿಷ್ಟ 5 ವರ್ಷಗಳು ಸೇವೆ ಸಲ್ಲಿಸಿರಬೇಕು.

ಸೆಕ್ಯುರಿಟಿ ಸೂಪರ್‌ವೈಸರ್ಪಿ.ಯು.ಸಿ ವಿದ್ಯಾರ್ಹತೆಯೊಂದಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರಬೇಕು ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‌ಗಳ ಬಗ್ಗೆ ಜ್ಞಾನವಿರಬೇಕು.
ಭದ್ರತಾ ರಕ್ಷಕರು / ಕೋ ಆರ್ಡಿನೇಟರ್ ಪ್ರೊಟೆಕ್ಷನ್ ದರ್ಜೆ-2ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಹತೆಯೊಂದಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರಬೆಕು.
ಕೆಮಿಸ್ಟ್ ದರ್ಜೆ-2ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಕೆಮಿಸ್ಟ್ರಿ) ಪದವಿಯನ್ನು ಹೊಂದಿರಬೇಕು.
ಆಡಳಿತ ಸಹಾಯಕ ದರ್ಜೆ-2ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ನಾತಕ / ಗ್ರಾಜುಯೇಟ್ ಪದವಿಯನ್ನು ಹೊಂದಿರಬೇಕು. ಪದವಿಯನ್ನು ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‌ಗಳ ಬಗ್ಗೆ ಜ್ಞಾನವಿರಬೇಕು.
ಲೆಕ್ಕ ಸಹಾಯಕ ದರ್ಜೆ -2ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯನ್ನ ಹೊಂದಿರಬೇಕು. Tally Certificate Course ಪಡೆದಿರಬೇಕು. ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‌ಗಳ ಬಗ್ಗೆ ಜ್ಞಾನವಿರಬೇಕು.
ಜ್ಯೂನಿಯರ್ ಸಿಸ್ಟಂ ಆಪರೇಟರ್ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ / ಬಿ.ಸಿ.ಎ (ಕಂಪ್ಯೂಟರ್ ಸೈನ್ಸ್) ಪದವಿ ಹೊಂದಿರತಕ್ಕದ್ದು, ಸೀನಿಯರ್ ಕನ್ನಡ / ಇಂಗ್ಲೀಷ್ ಟೈಪ್‌ರೈಟಿಂಗ್ ನಲ್ಲಿ ತೇರ್ಗಡೆ ಹೊಂದಿರಬೇಕು. ಮತ್ತು ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇ‍ಷನ್‌ಗಳ ಬಗ್ಗೆ ಜ್ಞಾನವಿರಬೇಕು. ಶಾರ್ಟ್‌ ಹ್ಯಾಂಡ್ ಮಾಡಿರಬೇಕು.
ಮಾರುಕಟ್ಟೆ ಸಹಾಯಕ ದರ್ಜೆ-2ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಬಿ.ಬಿ.ಎಂ/ ಬಿ.ಬಿ.ಎ ಪದವಿಯನ್ನು ಹೊಂದಿರಬೇಕು. ಗಣಕಯಂತ್ರದ ಬಳಕೆ ಹಾಗೂ ಕಂಪ್ಯೂಟರ್ ಅಪ್ಲಿಕೇಷನ್‌ಗಳ ಬಗ್ಗೆ ಜ್ಞಾನವಿರಬೇಕು
ಕಿರಿಯ ತಾಂತ್ರಿಕರು/ ಜ್ಯೂನಿಯರ್ ಟೆಕ್ನಿಷಿಯನ್ / ಬಾಯ್ಲರ್ ಅಟೆಂಡೆಂಟ್ಕರ್ನಾಟಕ ಉದ್ಯೋಗ ಮತ್ತು ತರಬೇತಿ ಇಲಾಖೆ / ರಾಜ್ಯ ಪರೀಕ್ಷಾ ಮಂಡಳಿಯಿಂದ / ಕರ್ನಾಟಕ ಸರ್ಕಾರ ಬಾಯ್ಲರ್ ಅಟೆಂಡೆಂಟ್ ಪರೀಕ್ಷಾ ಮಂಡಳಿಯಿಂದ ಪಡೆದ ಐ.ಟಿ.ಐ ವಿದ್ಯಾರ್ಹತೆ / ಬಾಯ್ಲರ್ ಅಟೆಂಡೆಂಟ್ ದರ್ಜೆ-2 ಪ್ರಮಾಣ ಪತ್ರ ಹೊಂದಿರತಕ್ಕದ್ದು.
( ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಹತೆ ಕಡ್ಡಾಯವಾಗಿ ಹೊಂದಿರಬೇಕು)
ಚಾಲಕರುಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಹತೆಯೊಂದಿಗೆ (HMV /LMV) ವಾಹನಗಳ ಚಾಲನಾ ಪರವಾನಗಿಯನ್ನು ಹೊಂದಿ ಯಾವುದೇ ಸರ್ಕಾರಿ / ಸಹಕಾರಿ / ಸಾರ್ವಜನಿಕ ಸಂಸ್ಥೆಗಳಲ್ಲಿ ವಾಹನ ಚಾಲನೆಯಲ್ಲಿ ಕನಿಷ್ಟ 5 ವರ್ಷಗಳು ಸೇವೆ ಸಲ್ಲಿಸಿರಬೇಕು.

ಖಾಲಿ ಹುದ್ದೆಗಳ ವಿವರ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು (ಎ.ಹೆಚ್‌ ಮತ್ತು ಎ.ಐ)6
ಸಹಾಯಕ ವ್ಯವಸ್ಥಾಪಕರು (ವಿತ್ತ)1
ಸಹಾಯಕ ವ್ಯವಸ್ಥಾಪಕರು (ಅಭಿಯಂತರ)1
ತಾಂತ್ರಿಕ ಅಧಿಕಾರಿ (ಡಿ.ಟಿ)3
ಉಗ್ರಾಣಾಧಿಕಾರಿ1
ಕೃಷಿ ಅಧಿಕಾರಿ2
ಆಡಳಿತಾಧಿಕಾರಿ/ ಕಾರ್ಮಿಕಾಧಿಕಾರಿ/ ಸಾರ್ವಜನಿಕ ಸಂಪರ್ಕ ಅಧಿಕಾರಿ/ ಕೈಗಾರಿಕ ಸಂಪರ್ಕ ಅಧಿಕಾರಿ1
ತಾಂತ್ರಿಕ ಅಧಿಕಾರಿ (ಗು.ನಿ)2
ಎಂ.ಐ.ಎಸ್ /ಸಿಸ್ಟಂ ಆಫೀಸರ್1
ತಾಂತ್ರಿಕ ಅಧಿಕಾರಿ (ಇಂಜಿ)2 (ಮೆಕ್ಯಾನಿಕಲ್ ಇಂಜಿನಿಯರಿಂಗ್ 1 & ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ 1ಹುದ್ದೆ)
ವಿಸ್ತರಣಾಧಿಕಾರಿ ದರ್ಜೆ-38 (ಒಳಸೇವಾ ಅಭ್ಯರ್ಥಿಗಳಿಗೆ 1, ಸಾಮಾನ್ಯ /ಇತರೆ ಅಭ್ಯರ್ಥಿ 6 ಹುದ್ದೆ,ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ ಅಭ್ಯರ್ಥಿಗಳಿಗೆ 1 ಹುದ್ದೆ)
ಸೆಕ್ಯುರಿಟಿ ಸೂಪರ್‌ವೈಸರ್1
ಭದ್ರತಾ ರಕ್ಷಕರು / ಕೋ ಆರ್ಡಿನೇಟರ್ ಪ್ರೊಟೆಕ್ಷನ್ ದರ್ಜೆ-25
ಕೆಮಿಸ್ಟ್ ದರ್ಜೆ-24
ಆಡಳಿತ ಸಹಾಯಕ ದರ್ಜೆ-23
ಲೆಕ್ಕ ಸಹಾಯಕ ದರ್ಜೆ -24
ಜ್ಯೂನಿಯರ್ ಸಿಸ್ಟಂ ಆಪರೇಟರ್3
ಮಾರುಕಟ್ಟೆ ಸಹಾಯಕ ದರ್ಜೆ-22
ಕಿರಿಯ ತಾಂತ್ರಿಕರು/ ಜ್ಯೂನಿಯರ್ ಟೆಕ್ನಿಷಿಯನ್ / ಬಾಯ್ಲರ್ ಅಟೆಂಡೆಂಟ್20(ಫಿಟ್ಟರ್ 2, ಟರ್ನರ್ 1, ವೆಲ್ಡರ್ 1, ರೆಫ್ರಿಜರೇಶನ್ 4, ಇಲೆಕ್ಟ್ರಾನಿಕ್ ಮೆಕ್ಯಾನಿಕ್ 1,ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ 1, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಿಕಲ್ಸ್ 3, ಇಲೆಕ್ಟ್ರಾನಿಕ್ ಅಥವಾ ಇಲೆಕ್ಟ್ರಾನಿಕ್ಸ್ 3, ಬಾಯ್ಲರ್ ಅಟೆಂಡೆಂಟ್ ಸರ್ಟಿಫಿಕೇಟ್ ಗ್ರೇಡ್-2- 3 ಹುದ್ದೆಗಳು)
ಚಾಲಕರು2
ಒಟ್ಟು 72

ವೇತನದ ವಿವರ:

ಹುದ್ದೆಯ ಹೆಸರುವೇತನದ ವಿವರ:
ಸಹಾಯಕ ವ್ಯವಸ್ಥಾಪಕರು (ಎ.ಹೆಚ್‌ ಮತ್ತು ಎ.ಐ), ಸಹಾಯಕ ವ್ಯವಸ್ಥಾಪಕರು (ವಿತ್ತ) ,ಸಹಾಯಕ ವ್ಯವಸ್ಥಾಪಕರು (ಅಭಿಯಂತರ)52,650/- ರಿಂದ 97,100/-ರೂ
ತಾಂತ್ರಿಕ ಅಧಿಕಾರಿ (ಡಿ.ಟಿ), ಉಗ್ರಾಣಾಧಿಕಾರಿ,ಕೃಷಿ ಅಧಿಕಾರಿ,ಆಡಳಿತಾಧಿಕಾರಿ/ ಕಾರ್ಮಿಕಾಧಿಕಾರಿ/ ಸಾರ್ವಜನಿಕ ಸಂಪರ್ಕ ಅಧಿಕಾರಿ/ ಕೈಗಾರಿಕ ಸಂಪರ್ಕ ಅಧಿಕಾರಿ,ತಾಂತ್ರಿಕ ಅಧಿಕಾರಿ (ಗು.ನಿ), ಎಂ.ಐ.ಎಸ್ /ಸಿಸ್ಟಂ ಆಫೀಸರ್ , ತಾಂತ್ರಿಕ ಅಧಿಕಾರಿ (ಇಂಜಿ)43,100/- ರಿಂದ 83,900/-ರೂ
ವಿಸ್ತರಣಾಧಿಕಾರಿ ದರ್ಜೆ-3,ಸೆಕ್ಯುರಿಟಿ ಸೂಪರ್‌ವೈಸರ್33,450/- ರಿಂದ 62,600/-ರೂ
ಭದ್ರತಾ ರಕ್ಷಕರು / ಕೋ ಆರ್ಡಿನೇಟರ್ ಪ್ರೊಟೆಕ್ಷನ್ ದರ್ಜೆ-2,ಕೆಮಿಸ್ಟ್ ದರ್ಜೆ-2 ,ಆಡಳಿತ ಸಹಾಯಕ ದರ್ಜೆ-2,ಲೆಕ್ಕ ಸಹಾಯಕ ದರ್ಜೆ-2,ಜ್ಯೂನಿಯರ್ ಸಿಸ್ಟಂ ಆಪರೇಟರ್,ಮಾರುಕಟ್ಟೆ ಸಹಾಯಕ ದರ್ಜೆ-227,650/- ರಿಂದ 52,650/-ರೂ
ಕಿರಿಯ ತಾಂತ್ರಿಕರು/ ಜ್ಯೂನಿಯರ್ ಟೆಕ್ನಿಷಿಯನ್ / ಬಾಯ್ಲರ್ ಅಟೆಂಡೆಂಟ್ ಮತ್ತು ಚಾಲಕರು21,400/- ರಿಂದ 42,000/-ರೂ

ವಯೋಮಿತಿ:

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಫೆಬ್ರವರಿ 20,2019 ರ ಅನ್ವಯ ಕನಿಷ್ಟ/ ಗರಿಷ್ಟ ವಯೋಮಿತಿ ಈ ಕೆಳಕಂಡಂತೆ ಇರತಕ್ಕದ್ದು.

ಮೀಸಲಾತಿ ವರ್ಗೀಕರಣ ಕನಿಷ್ಟ ವಯೋಮಿತಿಗರಿಷ್ಟ ವಯೋಮಿತಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-11840
ಪ್ರವರ್ಗ-2A,2B,3A,3B,1838
ಸಾಮಾನ್ಯ ಅಭ್ಯರ್ಥಿಗಳಿಗೆ1835

ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ ವಯೋಮಿತಿ ಸಡಿಲಿಕೆ ವಿವರನ್ನು ಅಧಿಸೂಚನೆಯಲ್ಲಿ ನೀಡಲಾಗಿರುತ್ತದೆ.

ಆಯ್ಕೆ ವಿಧಾನ:

ಅರ್ಜಿದಾರರ ಅರ್ಜಿಗಳನ್ನು ಪ್ರತಿ ಹುದ್ದೆಗಳಿಗೆ ಪ್ರತ್ಯೇಕ ಜೇಷ್ಠತಾ ಪಟ್ಟಿಯನನು ತಯಾರು ಮಾಡಿ, ಒಂದು ಹುದ್ದೆಗೆ ಇಪ್ಪತ್ತು (1:20) ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು.ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:15 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಜಿ ಶುಲ್ಕ:

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು, ಮಾಜಿ ಸೈನಿಕರು ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕರೂ.300/- + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ
ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕರೂ.600/- + ಅಂಚೆ ಕಛೇರಿ ಶುಲ್ಕ ಪ್ರತ್ಯೇಕ

ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕವಾದ ಮಾರ್ಚ್ 21,2019 ರ ನಂತರ ಶುಲ್ಕವನ್ನು ಸಂದಾಯ ಮಾಡಿದ್ದಲ್ಲಿ. ಅಂತಹವರ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ:

ಈ ಹುದ್ದೆಗಳಿಗೆ ಅಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://chamul.co.in/home ಗೆ ಅರ್ಜಿಯನ್ನು ಭರ್ತಿ ಮಾಡಿ ನಂತರ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಈ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Chamarajanagar district co-operative milk producer’s societies union limited (CHAMUL) recruitment notification has been released on official website for the recruitment of 72 various posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+