ಬೆಂಗಳೂರಿನ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಉದ್ಯೋಗಾವಕಾಶ

ಬೆಂಗಳೂರಿನ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ ದಲ್ಲಿ ವ್ಯವಸ್ಥಾಪಕರು, ಸಹಾಯಕರು, ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬೆಂಗಳೂರಿನ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವ್ಯವಸ್ಥಾಪಕರು, ಸಹಾಯಕರು, ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಹಕಾರಿ ಬ್ಯಾಂಕ್ ಉದ್ಯೋಗ

ಹುದ್ದೆಗಳ ವಿವರ

ಉಪ ಪ್ರಧಾನ ವ್ಯವಸ್ಥಾಪಕರು-01 ಹುದ್ದೆ

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಎಂ.ಕಾಮ್/ಎಂ.ಬಿ.ಎ (ಫೈನಾನ್ಸ್) ಅಥವಾ ಸಿ.ಎ
ಅನುಭವ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯವಸ್ಥಾಪಕ ಹುದ್ದೆ ಹಾಗು ಮೇಲ್ಪಟ್ಟ ಹುದ್ದೆಯಲ್ಲಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: ರೂ.40050-56550 /- ಹಾಗೂ ಭತ್ಯೆಗಳು
ವಯೋಮಿತಿ: ಗರಿಷ್ಟ 45 ವರ್ಷಗಳು

ವ್ಯವಸ್ಥಾಪಕರು-01 ಹುದ್ದೆ

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಪ್ರಥಮ ದರ್ಜೆಯಲ್ಲಿ ಬಿ.ಕಾಮ್ ಪದವಿ ಹೊಂದಿರಬೇಕು.
ಅನುಭವ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯವಸ್ಥಾಪಕ ಹುದ್ದೆ ಹಾಗು ಮೇಲ್ಪಟ್ಟ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ: ರೂ.30400-51300 /- ಹಾಗೂ ಭತ್ಯೆಗಳು
ವಯೋಮಿತಿ: ಗರಿಷ್ಟ 35 ವರ್ಷಗಳು

ಕಿರಿಯ ಸಹಾಯಕರು-04 ಹುದ್ದೆಗಳು

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಹೊಂದಿರಬೇಕು.
ವೇತನ ಶ್ರೇಣಿ: ರೂ.20000-36300 /- ಹಾಗೂ ಭತ್ಯೆಗಳು
ವಯೋಮಿತಿ: ಗರಿಷ್ಟ 35 ವರ್ಷಗಳು

ಚಾಲಕ ಕಂ ಅಟೆಂಡರ್: 01 ಹುದ್ದೆ

ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿದ್ದು, ಲಘು ವಾಹನ ಚಲನೆಯ ಪರವಾನಗಿ ಹೊಂದಿರಬೇಕು.
ವೇತನ ಶ್ರೇಣಿ: ರೂ.14550-26700 /- ಹಾಗೂ ಭತ್ಯೆಗಳು
ವಯೋಮಿತಿ: ಗರಿಷ್ಟ 35 ವರ್ಷಗಳು

ಸೂಚನೆ

ವಯೋಮಿತಿಯಲ್ಲಿ ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ಇರಲಿದೆ.

ಅಗತ್ಯ ಅರ್ಹತೆ

ಅಭ್ಯರ್ಥಿಗಳು ಕನ್ನಡ ಓದಲು ಮತ್ತು ಬರೆಯಲು ಹಾಗು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಜಿ ಸಲ್ಲಿಕೆ

ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ವೆಬ್ಸೈಟ್ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿ ತಮ್ಮ ಭಾವಚಿತ್ರದೊಂದಿಗೆ ಅರ್ಜಿ ಶುಲ್ಕ ಪಾವತಿ ಮಾಡಿರುವ ಡಿಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಿಗದಿತ ದಿನಾಂಕದೊಳಗೆ ಬ್ಯಾಂಕ್ ವಿಳಾಸಕ್ಕೆ ತಲುಪಿಸಬೇಕು.

ಅರ್ಜಿ ಶುಲ್ಕ ರೂ.300/-

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳಿಗೆ ಕರೆ ಪತ್ರಗಳನ್ನೂ ಕಳುಹಿಸಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯುವ ಸ್ಥಳ, ದಿನಾಂಕ ಮತ್ತು ವೇಳೆ ಇವುಗಳ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-11-2017

ಅರ್ಜಿ ಸಲ್ಲಿಸಬೇಕಾದ ವಿಳಾಸ

ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ,
ನಂ.1, 1ನೇ ಮುಖ್ಯ ರಸ್ತೆ, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Chartered sahakari bank niyamita Bengaluru invites applications from eligible candidates for various posts. candidates should download the applications and submit before November 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+