ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನೇಮಕಾತಿ 2017

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿ 28 ಪ್ರಥಮ ದರ್ಜೆ ಸಹಾಯಕರು ಮತ್ತು 50 ಕಿರಿಯ ಸಹಾಯಕ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಸರ್ಕಾರಿ ಆದೇಶದ ಪ್ರಕಾರ ಮೀಸಲಾತಿ ನಿಗದಿಪಡಿಸಿ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಚಿಕ್ಕಮಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್-ಲೈನ್ ಮುಖಾಂತರ ಆಹ್ವಾನಿಸಲಾಗಿದೆ.

28 ಪ್ರಥಮ ದರ್ಜೆ ಸಹಾಯಕರು ಮತ್ತು 50 ಕಿರಿಯ ಸಹಾಯಕ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳನ್ನು ಸರ್ಕಾರಿ ಆದೇಶದ ಪ್ರಕಾರ ಮೀಸಲಾತಿ ನಿಗದಿಪಡಿಸಿ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಡಿಸಿಸಿ ಬ್ಯಾಂಕ್ ನೇಮಕಾತಿ 2017

ಹುದ್ದೆಯ ವಿವರ

ಪ್ರಥಮ ದರ್ಜೆ ಸಹಾಯಕರು - ಒಟ್ಟು 28 ಹುದ್ದೆಗಳು
ವೇತನ ಶ್ರೇಣಿಃ ರೂ.14550-26700/- ಮತ್ತು ನಿಯಮಾನುಸಾರ ಲಭ್ಯವಾಗುವ ಭತ್ಯೆಗಳು.

ಕಿರಿಯ ಸಹಾಯಕರು - ಒಟ್ಟು 50 ಹುದ್ದೆಗಳು
ವೇತನ ಶ್ರೇಣಿಃ ರೂ.11600-21000/- ಮತ್ತು ನಿಯಮಾನುಸಾರ ಲಭ್ಯವಾಗುವ ಭತ್ಯೆಗಳು.

ವಿಶೇಷ ಸೂಚನೆ

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿಸಲ್ಲಿಸಿ ಪ್ರತ್ಯೇಕವಾಗಿ ಶುಲ್ಕವನ್ನು ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸುವ ಆನ್-ಲೈನ್ ವಿಳಾಸ recruit-app.com

ಅರ್ಜಿ ಶುಲ್ಕ

  • ಸಾಮಾನ್ಯ (ಇತರೆ), ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.1000/-
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-

ಅರ್ಜಿ ಶುಲ್ಕವನ್ನು ಪಾವತಿಸಲು ನಿಗದಿಪಡಿಸಿದ ಕೊನೆಯ ದಿನಾಂಕಃ 02-05-2017 ಇದರ ನಂತರ ಶುಲ್ಕವನ್ನು ಸಂದಾಯ ಮಾಡಲು
ಅವಕಾಶವಿರುವುದಿಲ್ಲ. ಡಿ.ಡಿ., ಪೋಸ್ಟಲ್ ಆರ್ಡ್‍ರ್, ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಸಂದಾಯ ಮಾಡದ ಅರ್ಜಿಗಳನ್ನು
ಪರಿಗಣಿಸುವುದಿಲ್ಲ. ಅರ್ಜಿ ಶುಲ್ಕವನ್ನು ಪಾವತಿಸುವುದಕ್ಕೆ ಕರ್ನಾಟಕ ರಾಜ್ಯದಲ್ಲಿನ ಯಾವುದೇ ಇ-ಪಾವತಿ ಅಂಚೆ ಕಚೇರಿಗೆ ಹೋಗಿ, ನಿಗಧಿತ ಅರ್ಜಿ ಶುಲ್ಕ + ಸೇವಾ ತೆರಿಗೆ (ರೂ. 30/-) ಯನ್ನು ಪಾವತಿ ಮಾಡತಕ್ಕದ್ದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕಃ 29-03-2017
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಃ 28-04-2017
  • ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕಃ 02-05-2017

ವಿಶೇಷ ಸೂಚನೆ

ಆನ್-ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ 8904985941 ಅನ್ನು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ

ಪ್ರಥಮ ದರ್ಜೆ ಸಹಾಯಕರು

  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದ ಬಿ.ಎ./ಬಿ.ಎ (ಸಹಕಾರ)/ಬಿ.ಕಾಂ/ಬಿ.ಬಿ.ಎಂ/ಬಿ.ಸಿ.ಎ/ಬಿ.ಎಸ್.ಸಿ/ಬಿ.ಎಸ್.ಸಿ. (ಕಂಪ್ಯೂಟರ್‍ಸೈನ್ಸ್) ಪದವಿ ಅಥವಾ ಬಿ.ಇ. ಕಂಪ್ಯೂಟರ್ ಸೈನ್ಸ್/ಇನ್‍ಫಾರ್ಮೇಷನ್ ಸೈನ್ಸ್ ಪದವಿಯಲ್ಲಿ ಕನಿಷ್ಠ ಸರಾಸರಿ ಶೇ. 55 ಅಂಕ ಗಳಿಸಿರಬೇಕು.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ ಸರಾಸರಿ ಶೇ. 50 ಅಂಕ ಗಳಿಸಿರಬೇಕು.
  • ಅಭ್ಯರ್ಥಿಗಳು ಕಂಪ್ಯೂಟರ್‍ನಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ಜ್ಞಾನ ಹೊಂದಿರಬೇಕು.
  • 3 ವರ್ಷಗಳಿಗಿಂತ ಕಡಿಮೆ ಅವಧಿಯ ಯಾವುದೇ ಕೋರ್ಸ್ ಅಥವಾ ಪದವಿಗಳನ್ನು ವಿದ್ಯಾರ್ಹತೆಗೆ ಪರಿಗಣಿಸಲಾಗುವುದಿಲ್ಲ.

ಕಿರಿಯ ಸಹಾಯಕರು

  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದ ಬಿ.ಎ./ಬಿ.ಎ (ಸಹಕಾರ)/ಬಿ.ಕಾಂ/ಬಿ.ಬಿ.ಎಂ/ಬಿ.ಸಿ.ಎ/ಬಿ.ಎಸ್.ಸಿ/ಬಿ.ಎಸ್.ಸಿ. (ಕಂಪ್ಯೂಟರ್ ಸೈನ್ಸ್) ಪದವಿ ಅಥವಾ ಬಿ.ಇ. ಕಂಪ್ಯೂಟರ್ ಸೈನ್ಸ್/ಇನ್‍ಫಾರ್ಮೇಷನ್ ಸೈನ್ಸ್ ಪದವಿಯಲ್ಲಿ ಕನಿಷ್ಠ ಸರಾಸರಿ ಶೇ. 50 ಅಂಕ ಗಳಿಸಿರಬೇಕು.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳು ಕನಿಷ್ಟ ಸರಾಸರಿ ಶೇ. 45 ಅಂಕ ಗಳಿಸಿರಬೇಕು.
  • ಅಭ್ಯರ್ಥಿಗಳು ಕಂಪ್ಯೂಟರ್‍ನಲ್ಲಿ ಕಾರ್ಯನಿರ್ವಹಿಸಲು ಸಾಮಾನ್ಯ ಜ್ಞಾನ ಹೊಂದಿರಬೇಕು.
  • 3 ವರ್ಷಗಳಿಗಿಂತ ಕಡಿಮೆ ಅವಧಿಯ ಯಾವುದೇ ಕೋರ್ಸ್ ಅಥವಾ ಪದವಿಗಳನ್ನು ವಿದ್ಯಾರ್ಹತೆಗೆ ಪರಿಗಣಿಸಲಾಗುವುದಿಲ್ಲ.

ವಯೋಮಿತಿ

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಟ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ವರ್ಗೀಕರಣದ ವಯೋಮಿತಿ

  • ಸಾಮಾನ್ಯ ವರ್ಗ- 18 ರಿಂದ 35 ವರ್ಷ
  • 2ಎ, 2ಬಿ, 3ಎ, 3ಬಿ- 18 ರಿಂದ 38 ವರ್ಷ
  • ಪ.ಜಾ./ಪ.ಪಂ/ಪ್ರ-1- 18 ರಿಂದ 40 ವರ್ಷ

ಆಯ್ಕೆ ವಿಧಾನ

ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆಯ ನಂತರ ಪದವಿ ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಅಂಕಗಳ ಆಧಾರದ ಮೇಲೆ 1:20 ರ ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಪದವಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇ. 50 ರಷ್ಟು ಹಾಗೂ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇ. 50 ರಷ್ಟು ಸೇರಿಸಿ ಗಳಿಸಿದ ಅಂಕಗಳನ್ನು ಶೇ. 85 ಕ್ಕೆ ಮಾರ್ಪಡಿಸಿ ಪ್ರಾಪ್ತವಾಗುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1: 5 ರ ಪ್ರಮಾಣದಲ್ಲಿ ಮೌಖಿಕ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಮೌಖಿಕ ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಕೂಡಿಸಿ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮವನ್ನು ಅನುಸರಿಸಿ ಆಯ್ಕೆ ಮಾಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ recruit-app.com ಗಮನಿಸಿ

More News  

For Quick Alerts
ALLOW NOTIFICATIONS  
For Daily Alerts

English summary
Chikmagalur DCC Bank invites online application from eligible candidates to fill fda and sda posts
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+