ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ (ಸಿಐಐಎಲ್) ವಿವಿಧ 52 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಆಗಸ್ಟ್ 28,2019 ರೊಳಗೆ ಕಚೇರಿಯ ವಿಳಾಸಕ್ಕೆ ಸಲ್ಲಿಸಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ.

| CRITERIA | DETAILS |
| Name Of The Posts | ವಿವಿಧ ಹುದ್ದೆಗಳು |
| Organisation | ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ (ಸಿಐಐಎಲ್) |
| Educational Qualification | ಎಂ.ಫಿಲ್ / ಪಿ.ಹೆಚ್‌ಡಿ,ಸ್ನಾತಕೋತ್ತರ ಪದವಿ,ಡಿಪ್ಲೋಮ,ಪದವಿ,ಎಂಎ/ಎಂಎಸ್‌ಸಿ/ಬಿ.ಟೆಕ್/ಎಂ.ಟೆಕ್,ಎಂ.ಸಿ.ಎ,ಎಂ.ಎಸ್ಸಿ/ಬಿ.ಇ, |
| Job Location | ಮೈಸೂರು (ಕರ್ನಾಟಕ) |
| Salary Scale | ಹುದ್ದೆಗಳಿಗನುಸಾರ ವೇತನ |
| Application Start Date | August 14, 2019 |
| Application End Date | August 28, 2019 |
ವಿದ್ಯಾರ್ಹತೆ:
ವಿವಿಧ ಹುದ್ದೆಗಳಿಗನುಸಾರ ಎಂ.ಫಿಲ್ / ಪಿ.ಹೆಚ್‌ಡಿ,ಸ್ನಾತಕೋತ್ತರ ಪದವಿ,ಡಿಪ್ಲೋಮ,ಪದವಿ,ಎಂಎ/ಎಂಎಸ್‌ಸಿ/ಬಿ.ಟೆಕ್/ಎಂ.ಟೆಕ್,ಎಂ.ಸಿ.ಎ,ಎಂ.ಎಸ್ಸಿ/ಬಿ.ಇ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನದ ವಿವರ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಸಾರ ವೇತನವನ್ನು ನೀಡಲಾಗುವುದು.
ಅರ್ಜಿ ಶುಲ್ಕ:
ಅರ್ಜಿದಾರರು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ :
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಆಗಸ್ಟ್ 28,2019 ರೊಳಗೆ ಪೋಸ್ಟ್ ಮೂಲಕ ಸಲ್ಲಿಸಬಹುದು.
ಕಚೇರಿಯ ವಿಳಾಸ:
ಅಸಿಸ್ಟೆಂಟ್ ಡೈರೆಕ್ಟರ್,
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್,
ಮಾನಸಗಂಗೋತ್ರಿ,
ಮೈಸೂರು-570006,
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ


Click it and Unblock the Notifications











