ಕಾಫಿ ಬೋರ್ಡ್ ನೇಮಕಾತಿ 6 ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕಾಫಿ ಬೋರ್ಡ್ ಆಫ್ ಇಂಡಿಯಾ ( ಕಾಫಿ ಬೋರ್ಡ್) ನೇಮಕಾತಿ 6 ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಕಾಫಿ ಬೊರ್ಡ್ ನ ಅಧಿಕೃತ ವೆಬ್ ಸೈಟ್ https://indiacoffee.org/ ಗೆ ಹೋಗಿ ಕೇಳಲಾಗಿರುವ ಅರ್ಹತೆಗಳ ಬಗೆಗೆ ನೋಡಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿಗಳನ್ನು ಕಚೇರಿಯ ವಿಳಾಸಕ್ಕೆ ಮಾರ್ಚ್ 11,2019 ರೊಳಗೆ ಕಳುಹಿಸಬೇಕು.

ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

CRITERIA DETAILS
Name Of The Posts ಪ್ರಾಜೆಕ್ಟ್ ಅಸಿಸ್ಟೆಂಟ್
Organisation ಕಾಫಿ ಬೋರ್ಡ್ ಆಫ್ ಇಂಡಿಯಾ (ಕಾಫಿ ಬೋರ್ಡ್)
Educational Qualification 12ನೇ ತರಗತಿ ಜೊತೆಗೆ ಡಿಪ್ಲೋಮಾ
Job Location ಕೊಡಗು & ಚಿಕ್ಕಮಗಳೂರು (ಕರ್ನಾಟಕ)
Salary Scale ತಿಂಗಳಿಗೆ 12,000/-ರೂ
Application Start Date February 11, 2019
Application End Date March 11, 2019

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಟ 21 ವರ್ಷ ಮತ್ತು ಗರಿಷ್ಟ 40 ವರ್ಷದೊಳಗಿನವರಾಗಿರಬೇಕು.

ವೇತನದ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಅಭ್ಯರ್ಥಿಯ ಕನ್ನಡ ಭಾಷೆಯ ಸಂವಹನದ ಕೌಶಲ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಚಿಕ್ಕಮಗಳೂರು ಅಥವಾ ಕೊಡಗು ಜಿಲ್ಲೆಯ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ರೀತಿಯಲ್ಲಿ ಅರ್ಜಿ ಮತ್ತು ಅಗತ್ಯ ದಾಖಲೆಗಳ ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ:
ಪ್ರಾಜೆಕ್ಟ್ ಕೋ-ಆರ್ಡಿನೇಟರ್,
ಟ್ರೈಬಲ್ ಕಾಫಿ ಪ್ರಾಜೆಕ್ಟ್,
ಕಾಫಿ ಬೋರ್ಡ್, ನಂ.1,
ಅಂಬೇಡ್ಕರ್ ವೀದಿ,
ಬೆಂಗಳೂರು-560001

ಈ ಹುದ್ದೆಗಳ ಬಗೆಗೆ ಅಧಿಸೂಚನೆಯನ್ನು ಓದಲು ಮತ್ತು ಅರ್ಜಿ ನಮೂನೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Coffee Board of India

ಕಾಫಿ ಬೋರ್ಡ್, ಭಾರತೀಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸು ವಾಣಿಜ್ಯ ಇಲಾಖೆ ಇದಾಗಿದೆ. ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿದ್ದು ಪ್ರಸ್ತುತ ವಿರಾಜ ಪೇಟೆ ಮತ್ತು ಮೂಡಿಗೆರೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.

ನಾಲ್ಕು ವರ್ಷಗಳ ಯೋಜನೆಯಲ್ಲಿ ಸಂಪೂರ್ಣವಾಗಿ ಅಡ್-ಹಾಕ್ ಆಧಾರದ ಮೇಲೆ ಪ್ರಾಜೆಕ್ಟ್ ಸಹಾಯಕರಾಗಿ ಕಾರ್ಯನಿರ್ವಹಿಸಲು ಮತ್ತು ಬುಡಕಟ್ಟು ರೈತರ ಸುಸ್ಥಿರ ಕಾಫಿ ಕೃಷಿ ಆಧಾರಿತ ಜೀವನೋಪಾಯವನ್ನು ಉತ್ತೇಜಿಸುವ ವ್ಯಾಪಕ ಕ್ಷೇತ್ರ ಬೆಂಬಲ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದೊಂದಿಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಲು ಅಭ್ಯರ್ಥಿಗಳನ್ನು ನೇಮಕಾತಿ ಮಾಡಲಾಗುತ್ತಿದೆ.

ಜನಸಾಮಾನ್ಯ ಸಮುದಾಯ ಆಧಾರಿತ ಸಂಸ್ಥೆಗಳನ್ನು ರಚಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯದ ಕಟ್ಟಡ ಹಾಗೂ ಕಾಫಿ ಸಂಸ್ಕರಣೆ ಮೂಲ ಸೌಕರ್ಯವನ್ನು ಸ್ಥಾಪಿಸುವುದು ಮತ್ತು ವಿಭಿನ್ನ ಪ್ರವೇಶದ ಮಾರುಕಟ್ಟೆಗಳಿಗೆ ನೆರವಾಗುವ ಮೂಲಕ ಮಾರುಕಟ್ಟೆ ಸಂಪರ್ಕಗಳನ್ನು ಬೆಳೆಸುವ ಉದ್ದೇಶಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕಾಫಿಬೋರ್ಡ್ ಗರಿಷ್ಟ 6 ಪ್ರಾಜೆಕ್ಟ್ ಅಸಿಸ್ಟೆಂಟ್ ಗಳನ್ನು ನೇಮಕ ಮಾಡಲು ನಿರ್ಧರಿಸಿದ್ದು ವಿರಾಜಪೇಟೆ ಮತ್ತು ಮೂಡಿಗೆರೆ ಪ್ರದೇಶದ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Coffee board of india recruitment notification has been released for the recruitment of 6 project assistant posts.Interested candidates can send application through post before 3rd march 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+