CRPF Recruitment 2020: ವಿವಿಧ 789 ಹುದ್ದೆಗಳ ನೇಮಕಾತಿ

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯಲ್ಲಿ ಭಾರತದೆಲ್ಲೆಡೆ ಖಾಲಿ ಇರುವ 800 ಸಬ್‌ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಸಬ್-ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಬಹುದು. ಅರ್ಹ ಅಭ್ಯರ್ಥಿಗಳು ಜುಲೈ 20 ರಿಂದ ಆಗಸ್ಟ್ 31,2020ರೊಳಗೆ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ. ಹುದ್ದೆಗಳ ಬಗೆಗೆ ಇನ್ನಷ್ಟು ತಿಳಿಯಲು ಮುಂದೆ ಓದಿ.

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ 789 ಹುದ್ದೆಗಳು ಖಾಲಿ ಇವೆ

ವಿದ್ಯಾರ್ಹತೆ:

ಸಿಆರ್ ಪಿಎಫ್ ನೇಮಕಾತಿಯ ವಿವಿಧ ಹುದ್ದೆಗಳಿಗೆ ಪದವಿ, ಡಿಪ್ಲೋಮಾ, 12ನೇ ತರಗತಿ ಮತ್ತು ಹತ್ತನೇ ತರಗತಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಖಾಲಿ ಹುದ್ದೆಗಳ ವಿವರ:

ಕಾನ್ಸ್ಟೇಬಲ್ -250 ಹುದ್ದೆಗಳು
ಹೆಡ್ -ಕಾನ್ಸ್ಟೇಬಲ್ -197 ಹುದ್ದೆಗಳು
ಸಬ್-ಇನ್ಸ್ ಪೆಕ್ಟರ್ -183 ಹುದ್ದೆಗಳು
ಅಸಿಸ್ಟೆಂಟ್ ಸಬ್-ಇನ್ಸ್ ಪೆಕ್ಟರ್- 158 ಹುದ್ದೆಗಳು
ಇನ್ಸ್ ಪೆಕ್ಟರ್- 1 ಹುದ್ದೆ
ಒಟ್ಟು 789 ಹುದ್ದೆಗಳು

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಆಗಸ್ಟ್ 31,2020ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 30 ವರ್ಷ ವಯೋಮಿತಿಯೊಳಗಿರಬೇಕು. ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾತಿ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನದ ವಿವರ:

ಸಿಆರ್ ಪಿಎಫ್ ನೇಮಕಾತಿಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,700/- ರಿಂದ 1,42,400/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ದೈಹಿಕ ಪರೀಖ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕಿದ್ದು, ಗ್ರೂಪ್ ಬಿ ಹುದ್ದೆಗಳಿಗೆ 200/-ರೂ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ 100/-ರೂ ಅರ್ಜಿ ಶುಲ್ಕವನ್ನು ಪೋಸ್ಟಲ್ ಅಥವಾ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ:

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್‌ https://crpf.gov.in/index.htm ಗೆ ಭೇಟಿ ನೀಡಿ ಪಡೆಯಬಹುದು. ನಂತರ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಖುದ್ದಾಗಿ ಅಥವಾ ಪೋಸ್ಟ್ ಮೂಲಕ ಕಚೇರಿಗೆ ಜುಲೈ 20,2020 ರಿಂದ ಆಗಸ್ಟ್ 31,2020ರೊಳಗೆ ಸಲ್ಲಿಸಬಹುದು.

ಕಚೇರಿ ವಿಳಾಸ:
ಡಿಐಜಿಪಿ, ಗ್ರೂಪ್ ಸೆಂಟರ್, ಸಿಆರ್ ಪಿಎಫ್, ಭೋಪಾಲ್,
ವಿಲ್ಲೇಜ್ ಬಾಂಗ್ರಾಸಿಯಾ, ತಾಲೂಕ್-ಹುಜೂರ್,
ಭೋಪಾಲ್ ಜಿಲ್ಲೆ,
ಮಧ್ಯಪ್ರದೇಶ-462045.

ಅಭ್ಯರ್ಥಿಗಳು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
CRPF recruitment 2020 notification has been released for the recruitment of 789 posts. Interested candidates can apply before August 31.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+