ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿ ಬರುವ ತಾಲೂಕುಗಳಲ್ಲಿ ಖಾಲಿ ಇರುವ 34 ಗ್ರಾಮ ಲೆಕ್ಕಿಗರ ಹುದ್ದೆಗಳನ್ನ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31. ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ 2018:
| CRITERIA | DETAILS |
| Name Of The Posts | ಗ್ರಾಮ ಲೆಕ್ಕಿಗ ಹುದ್ದೆ |
| Organisation | ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ |
| Educational Qualification | ಅಭ್ಯರ್ಥಿಗಳು ಸಿಬಿಎಸ್ಇ ಅಥವಾ ಐಸಿಎಸ್ಇ 12 ನೇ ತರಗತಿ ಪಾಸಾಗಿರಬೇಕು |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಕಂಪ್ಯೂಟರ್ ಜ್ಞಾನ ಹೊಂದಿರಬೇಕು |
| Job Location | ದಕ್ಷಿಣ ಕನ್ನಡ |
| Industry | ಜಿಲ್ಲಾಧಿಕಾರಿ ಕಚೇರಿ |
| Application End Date | October 31, 2018 |
ಪ್ರಮುಖ ದಿನಾಂಕಗಳು
- ಅರ್ಜಿ ಕರೆಯಲು ನಿಗದಿಪಡಿಸಿದ ದಿನಾಂಕ : 01.10.2018
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31.10.2018
- ಅರ್ಜಿ ಶುಲ್ಕವನ್ನ ಬ್ಯಾಂಕಿಗೆ ಪಾವತಿಸಿಲು ಕೊನೆಯ ದಿನಾಂಕ : 02-11-2018
- ಅಭ್ಯರ್ಥಿಗಳು ಅರ್ಜಿಯನ್ನ ಆನ್‌ಲೈನ್ ಮುಖಾಂತರ ಮಾತ್ರ ಸಲ್ಲಿಸಬಹುದಾಗಿದೆ.
- ಅರ್ಜಿಗಳನ್ನ ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
- ಅಭ್ಯರ್ಥಿಗಳು ಮೊದಲಿಗೆ ಆಫೀಶೀಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ
- ಸ್ಕ್ರೀನ್ ಮೇಲೆ ಮೂಡುವ ಹುದ್ದೆಯ ವಿವರಗಳನ್ನ ಕ್ಲಿಕ್ ಮಾಡಿ, ಗಮನವಿಟ್ಟು ಓದಿಕೊಳ್ಳಿ
- ಬಳಿಕ ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿ
- ಅಭ್ಯರ್ಥಿಯು ಸಬ್‌ಮಿಟ್ ಬಟನ್ ಒತ್ತಿದರೆ ಅರ್ಜಿ ಸಂಖ್ಯೆ ಸೃಷ್ಟಿಯಾಗುತ್ತದೆ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಪ್ರವರ್ಗ 1 : ರೂ 250
- ಸಾಮಾನ್ಯ ವರ್ಗ, 2ಎ, 2ಬಿ, 3ಎ, 3ಬಿ ವರ್ಗಕ್ಕೆ : ರೂ 500
- ಅಂಗವಿಕಲ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ
- ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ ಮತ್ತು ದ್ವಿಪ್ರತಿ ಚಲನ್ ತೆಗೆದಕೊಳ್ಳತಕ್ಕದ್ದು
- ಆ ಚಲನ್ ನ್ನ ಅರ್ಜಿ ಶುಲ್ಕದೊಂದಿಗೆ ಕಾರ್ಪೋರೇಶನ್ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕ್ ಕರ್ನಾಟಕದ ಯಾವುದಾದರೂ ಶಾಖೆಯಲ್ಲಿ ಪಾವತಿಸಬೇಕು
- ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪ್ ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನ ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳಬೇಕು
- ಬ್ಯಾಂಕಿನಲ್ಲಿ ಅರ್ಜಿ ಶುಲ್ಕ ಪಾವತಿಸಲು ನಿಗಧಿತ ಗೊಳಿಸಿದ ಕೊನೆಯ ದಿನಾಂಕ 02.11.2018ರ ಸಂಜೆ 5.30 ರೊಳಗೆ ಚಲನ್ ಅಪ್‌ಲೋಡ್ ಮಾಡಿಕೊಳ್ಳಬೇಕು
- ಸಾಮಾನ್ಯ - 17 ಹುದ್ದೆ
- ಎಸ್‌ಸಿ - 06 ಹುದ್ದೆ
- ಎಸ್‌ಟಿ -01 ಹುದ್ದೆ
- ಕೆಟಗರಿ 1: 02 ಹುದ್ದೆ
- ಕೆಟಗರಿ 2ಎ: 05 ಹುದ್ದೆ
- ಕೆಟಗರಿ 2ಬಿ: 01 ಹುದ್ದೆ
- ಕೆಟಗರಿ 3 ಎ: 01 ಹುದ್ದೆ
- ಕೆಟಗರಿ 3 ಬಿ : 01 ಹುದ್ದೆ
- ಸಾಮಾನ್ಯ ವರ್ಗ ಅಭ್ಯರ್ಥಿಗಳು : 18 ರಿಂದ 35 ವರ್ಷ
- 2ಎ.2ಬಿ, 3ಎ ಮತ್ತು 3ಬಿ : 18 ರಿಂದ 38 ವರ್ಷ
- ಎಸ್‌ಸಿ/ಎಸ್‌ಟಿ/ಕೆಟಗರಿ 1 : 18 ರಿಂದ 40 ವರ್ಷ
- ಅಭ್ಯರ್ಥಿಗಳು ಸಿಬಿಎಸ್ಇ ಅಥವಾ ಐಸಿಎಸ್ಇ 12 ನೇ ತರಗತಿ ಪಾಸಾಗಿರಬೇಕು
- ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಶುಲ್ಕ ವಿವರ ಹಾಗೂ ಪಾವತಿ
ಹುದ್ದೆಯ ವರ್ಗೀಕರಣ
ಕೆಟಗರಿ ಆಧಾರದ ಮೇಲೆ ಹುದ್ದೆಗಳನ್ನ ಹಂಚಿಕೆ ಮಾಡಲಾಗಿದೆ
ವಯೋಮಿತಿ
ವಿದ್ಯಾರ್ಹತೆ
ಸಂದರ್ಶನದಂದು ಪ್ರಸ್ತುತಪಡಿಸಬೇಕಾಗಿರುವ ಮೂಲ ಪ್ರಮಾಣ ಪತ್ರಗಳು:
- ಪಿಯುಸಿ ಪರೀಕ್ಷೆ ಅಥವಾ ಸಿಬಿಎಸ್ಇ ಅಥವಾ ಐಸಿಎಸ್ಇ ನಡೆಸುವ 12ನೇ ತರಗತಿ ಪರೀಕ್ಷೆಯ ಮೂಲ ಪಟ್ಟಿ
- ಹುಟ್ಟಿದ ದಿನಾಂಕದ ಪ್ರಮಾಣ ಪತ್ರ
- ಈಗಾಗಲೇ ಸೇವೆಯಲ್ಲಿರುವವರು ಸೇವಾ ಪ್ರಮಾಣ ಪತ್ರ ಹಾಗೂ ನಿರಾಕ್ಷೇಪಣಾ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರು, ವಿಧವೆಯರು, ಜೀತ ಕಾರ್ಮಿಕರು, ಗ್ರಾಮ ಸಮೂಹ ಪರಿಶೀಲಕರು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ
- ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ
- ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ
- ಸೈನಿಕ ಸೇವೆಯಿಂದ ಬಿಡುಗಡೆಯಾದ ಬಗೆಗಿನ ಪ್ರಮಾಣ ಪತ್ರ
- ಅಂಗವಿಕಲ ಮೀಸಲಾತಿ ಬಗ್ಗೆ ಪ್ರಮಾಣ ಪತ್ರ
- ಪರಿಶಿಷ್ಟ ಜಾತಿ, ಪ.ಪಂಗಡ ಮತ್ತು ಪ್ರವರ್ಗ 1 ಹಾಗೂ 2ಎ, 2ಬಿ, 3ಎ, 3ಬಿ ಮೀಸಲಾತಿ ಅಭ್ಯರ್ಥಿಗಳು ಕ್ರಮವಾಗಿ ತಹಶೀಲ್ದಾರ್ ಅವರಿಂದ ಪಡೆದ ಪ್ರಮಾಣ ಪತ್ರವನ್ನ ಪಡೆದಿಟ್ಟುಕೊಂಡಿರತಕ್ಕದ್ದು.
For Quick Alerts
For Daily Alerts
English summary
Karnataka Revenue Department has released an employment notification for the recruitment of 85 Village Accountant. Job seekers who are interested to hold the opportunity are requested to submit an application before August 26, 2017.
Story first published: Thursday, September 27, 2018, 14:34 [IST]


Click it and Unblock the Notifications











