ಡಿಎಫ್‌ಆರ್‌ಎಲ್ ನಲ್ಲಿ ಸೆಪ್ಟೆಂಬರ್ 18ಕ್ಕೆ ವಾಕ್-ಇನ್ ಇಂಟರ್ವ್ಯೂ: ಆಸಕ್ತರು ಭಾಗವಹಿಸಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ (ಡಿಎಫ್‌ಆರ್‌ಎಲ್‌)ದಲ್ಲಿ 5 ಸಂಶೋಧನಾ ಸಹಾಯಕ ಮತ್ತು ಕಿರಿಯ ಸಂಶೋಧನಾ ಸಹೋದ್ಯೋಗಿ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.

ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್‌ 18 ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.

ಡಿಎಫ್‌ಆರ್‌ಎಲ್‌ ನಲ್ಲಿ ಉದ್ಯೋಗಾವಕಾಶ : ಸೆಪ್ಟೆಂಬರ್ 18ಕ್ಕೆ  ನೇರ ಸಂದರ್ಶನ

CRITERIA DETAILS
Name Of The Posts ಸಂಶೋಧನಾ ಸಹಾಯಕ, ಕಿರಿಯ ಸಂಶೋಧನಾ ಸಹೋದ್ಯೋಗಿ
Organisation ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್)
Educational Qualification ಎಂ.ಎಸ್ಸಿ,ಪಿ.ಎಚ್‌ಡಿ, ಎಂ.ಟೆಕ್
Job Location ಮೈಸೂರು (ಕರ್ನಾಟಕ)
Salary Scale ಸಂಶೋಧನಾ ಸಹಾಯಕ -ತಿಂಗಳಿಗೆ 54,000/- ರೂ ಮತ್ತು ಕಿರಿಯ ಸಂಶೋಧನಾ ಸಹೋದ್ಯೋಗಿ -ತಿಂಗಳಿಗೆ 31,000/-ರೂ
Application End Date September 18, 2019

ಶೈಕ್ಷಣಿಕ ವಿದ್ಯಾರ್ಹತೆ:

ಸಂಶೋಧನಾ ಸಹಾಯಕ ಹುದ್ದೆಗಳಿಗೆ ಎಂ.ಎಸ್ಸಿ ಮತ್ತು ಪಿ.ಎಚ್‌ಡಿ ಹಾಗೂ ಕಿರಿಯ ಸಂಶೋಧನಾ ಸಹೋದ್ಯೋಗಿ ಹುದ್ದೆಗಳಿಗೆ ಎಂ.ಎಸ್ಸಿ ಅಥವಾ ಎಂ.ಟೆಕ್ ಜೊತೆಗೆ ನೀಟ್ /ಗೇಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಲು ಅರ್ಹರು.

ವಯೋಮಿತಿ:

ಸಂಶೋಧನಾ ಸಹಾಯಕ ಹುದ್ದೆಗಳಿಗೆ ಗರಿಷ್ಟ 35 ವರ್ಷ ಮತ್ತು ಕಿರಿಯ ಸಂಶೋಧನಾ ಸಹೋದ್ಯೋಗಿ ಹುದ್ದೆಗಳಿಗೆ ಗರಿಷ್ಟ 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.

ವೇತನದ ವಿವರ:

ಸಂಶೋಧನಾ ಸಹಾಯಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 54,000/- ರೂ ಮತ್ತು ಕಿರಿಯ ಸಂಶೋಧನಾ ಸಹೋದ್ಯೋಗಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 31,000/-ರೂ ವೇತನವನ್ನು ನೀಡಲಾಗುವುದು.

ಸಂದರ್ಶನದ ವಿವರ:

ಈ ಹುದ್ದೆಗಳಿಗೆ ಸೆಪ್ಟೆಂಬರ್ 18,2019ರಂದು ನೇರ ಸಂದರ್ಶನ ನಡೆಸಲಾಗುತ್ತಿದ್ದು, ಸಂದರ್ಶನದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಜೊತೆಗೆ ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ಕಚೇರಿಯ ವಿಳಾಸಕ್ಕೆ ತಲುಪಿಸಬೇಕಿರುತ್ತದೆ. ತದನಂತರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಅಭ್ಯರ್ಥಿಗಳು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.

For Quick Alerts
ALLOW NOTIFICATIONS  
For Daily Alerts

English summary
DFRL Recruitment 2019-20:Walk-in-Interview for 05 RA & JRF vacancies. Defence Food Research Laboratory (DFRL) invited eligible and interested candidates to attend the walk-in-interview to fill up RA & JRF Posts through DFRL official notification August 2019.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X