ಧಮುಲ್ ಹಾಲು ಒಕ್ಕೂಟ ನೇಮಕಾತಿ 42 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಧಾರವಾಡ, ಇದರಲ್ಲಿ ಖಾಲಿ ಇರುವ ಈ ಕೆಳಕಂಡ ವಿವಿಧ ವೃಂದದ 42 ಹುದ್ದೆಗಳನ್ನು ನಿಗದಿಪಡಿಸಿರುವ ಮೀಸಲಾತಿ ವರ್ಗೀಕರಣದನ್ವಯ ನೇಮಕಾತಿಗಾಗ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಆಹ್ವಾನಿಸಿದೆ. ಆಸಕ್ತರು ಫೆಬ್ರವರಿ 6,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಪ್ರತ್ಯೇಕ/ಖುದ್ದಾಗಿ ಅರ್ಜಿ ಕಳುಹಿಸಲು ಅವಕಾಶ ಇರುವುದಿಲ್ಲ.

ಧಮುಲ್ ಹಾಲು ಒಕ್ಕೂಟದಲ್ಲಿ ಉದ್ಯೋಗಾವಕಾಶ

CRITERIA DETAILS
Name Of The Posts ಸಹಾಯಕ ವ್ಯವಸ್ಥಾಪಕ,ವಿಸ್ತರಣಾಧಿಕಾರಿ, ಡೇರಿ ಪರಿವೀಕ್ಷಕರು,ಹಿರಿಯ ತಾಂತ್ರಿಕ,ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧಿಕಾರಿ
Organisation ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
Educational Qualification ಐಟಿಐ,ಡಿಪ್ಲೋಮಾ,ಪದವಿ,ಸ್ನಾತಕೋತ್ತರ ಪದವಿ
Job Location ಧಾರವಾಡ,ಗದಗ,ಹಾವೇರಿ ಉತ್ತರಕನ್ನಡ
Salary Scale ಸಹಾಯಕ ವ್ಯವಸ್ಥಾಪಕ - 52,650/- ರಿಂದ 97,100/-ರೂ, ವಿಸ್ತರಣಾಧಿಕಾರಿ ಮತ್ತು ಡೇರಿ ಪರಿವೀಕ್ಷಕರು - 33,450/-ರಿಂದ 62,600/-ರೂ ಹಿರಿಯ ತಾಂತ್ರಿಕ - 27,650/- ರಿಂದ 52,650/- ರೂ ತಾಂತ್ರಿಕ ಅಧಿಕಾರಿ ಮತ್ತು ಮಾರುಕಟ್ಟೆ ಅಧಿಕಾರಿ- 43,100/- ರಿಂದ 83,900/-ರೂ ವೇತನ
Application Start Date January 7, 2019
Application End Date February 6, 2019

ಶೈಕ್ಷಣಿಕ ವಿದ್ಯಾರ್ಹತೆ:

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಂಬಂಧಿಸಿದ ಹುದ್ದೆಗಳಿಗೆ ಸೂಚಿಸಿರುವ ವಿದ್ಯಾರ್ಹತೆಯನ್ನು ಆಭ್ಯರ್ಥಿಗಳು ಹೊಂದಿರಲೇಬೇಕು. ಯಾವುದೇ ಹುದ್ದೆಗೆ ಸೇವಾನುಭವವನ್ನು ನಿಗದಿಪಡಿಸಿದಾಗ ಅಭ್ಯರ್ಥಿಗಳು ವಿದ್ಯಾರ್ಹತೆ ಹೊಂದಿದ ನಂತರ ಆ ಸೇವಾನುಭವ ಹೊಂದಿರತಕ್ಕದ್ದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆಯ ಎಲ್ಲಾ ಸೆಮಿಸ್ಟರ್/ವರ್ಷಗಳಲ್ಲಿ ಎಲ್ಲಾ ವಿಷಯಗಳಿಗೆ ನಿಗದಿಪಡಿಸಿರುವ ಗರಿಷ್ಟ ಅಂಕಗಳು ಮತ್ತು ಪಡೆದಿರುವ ಅಂಕಗಳನ್ನು ಪರಿಗಣಿಸಿ ಶೇಕಡಾವಾರು ಸರಾಸರಿ ಅಂಕಗಳನ್ನು ಸ್ಪಷ್ಟವಾಗಿ ನಮೂದಿಸುವುದು.

ಸಹಾಯಕ ವ್ಯವಸ್ಥಾಪಕ (ಎಹೆಚ್ ಮತ್ತು ಎಐ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ವ್ಹಿ.ಎಸ್.ಸಿ ಮತ್ತು ಎ.ಹೆಚ್/ಬಿ.ವ್ಹಿ.ಎಸ್.ಸಿ ಪದವಿ ಹಾಗೂ ಕರ್ನಾಟಕ ಪಶುವೈದ್ಯಕೀಯ ಪರಿಷತ್ ನೊಂದಣಿ ಪ್ರಮಾಣ ಪತ್ರ ಹೊಂದಿರಬೇಕು.

ಸಹಾಯಕ ವ್ಯವಸ್ಥಾಪಕ (ಎಫ್ ಮತ್ತು ಎಫ್) ಹುದ್ದೆಗಳಿಗೆ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ (ಕೃಷಿ) ಪದವಿಯನ್ನು ಹೊಂದಿರಬೇಕು ಹಾಗೂ ಗಣಕ ಯಂತ್ರದ ಚಾಲನೆ ಮಾಡುವ ಜ್ಞಾನ ಉಳ್ಳವರಾಗಿರಬೇಕು. ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ಸಹಾಯಕ ವ್ಯವಸ್ಥಾಪಕ (ಹಣಕಾಸು) ಹುದ್ದೆಗಳಿಗೆ ಅಭ್ಯರ್ಥಿಗಳು ಅಂಗೀಕೃ ವಿಶ್ವವಿದ್ಯಾನಿಲಯದಿಂದ ನಿಯತವಾಗಿ (ರೆಗ್ಯುಲರ್) ಬಿ.ಕಾಂ. ಪದವಿಯೊಂದಿಗೆ ಇಂಟರ್ ಸಿ.ಎ ಅಥವಾ ಇಂಟರ್ ಐ.ಸಿ.ಡಬ್ಲು ವಿದ್ಯಾರ್ಹತೆ ಹೊಂದಿರಬೇಕು. ಪ್ರತಿಷ್ಠಿತ ಸಂಸ್ಥೆ/ ಉದ್ದಿಮೆಗಳಲ್ಲಿ 3 ವರ್ಷ ಸೇವಾನುಭವ ಹೊಂದಿದ ಹಾಗೂ ಗಣಕ ಯಂತ್ರದಲ್ಲಿ ಲೆಕ್ಕಪತ್ರಗಳ ಪ್ಯಾಕೇಜ್ ಗಳ ನಿರ್ವಹಣೆ ಜ್ಞಾನವನ್ನು ಹೊಂದಿರಬೇಕು.

ವಿಸ್ತರಣಾಧಿಕಾರಿ ದರ್ಜೆ-3 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಕನಿಷ್ಠ ಶೇ50%ರಷ್ಟು ಅಂಕ ಗಳಿಸಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಡೇರಿ ಪರಿವೀಕ್ಷಕರು ದರ್ಜೆ-2 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ತಾಂತ್ರಿಕ ಸಂಸ್ಥೆಯಿಂದ ಡಿಪ್ಲೋಮಾ ವಿದ್ಯಾರ್ಹತೆಯಲ್ಲಿ ಸಿವ್ಹಿಲ್/ಮೆಕ್ಯಾನಿಕಲ್/ಇಲೆಕ್ಟ್ರಿಕಲ್/ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.

ಹಿರಿಯ ತಾಂತ್ರಿಕ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ತಾಂತ್ರಿಕ ಸಂಸ್ಥೆಯಿಂದ ಐಟಿಐ ವಿದ್ಯಾರ್ಹತೆಯಲ್ಲಿ ಮೆಕ್ಯಾನಿಕಲ್/ ಮೆಕಟ್ರಾನಿಕ್ಸ್/ಇಲೆಕ್ಟ್ರಿಕಲ್/ಫಿಟ್ಟರ್/ರೆಫ್ರಿಜಿರೇಶನ್ ವಿಷಯದಲ್ಲಿ ತೇರ್ಗಡೆ ಹೊಂದಿ, ೨ ವರ್ಷಗಳ ಕಾಲ ಬೃಹತ್ ಉದ್ಯಮದಲ್ಲಿ ಸೇವಾನುಭವ ಹೊಂದಿರಬೇಕು.

ತಾಂತ್ರಿಕ ಅಧಿಕಾರಿ (ಡಿ.ಟಿ.) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಡೇರಿ ಟೆಕ್ನಾಲಜಿ/ಡೇರಿ ಸೈನ್ಸ್ ವಿದ್ಯಾರ್ಹತೆಯನ್ನು ಹೊಂದಿದ್ದು, ಆಫೀಸ್ ಪ್ಯಾಕೇಜ್ ಗಳನ್ನು ಒಳಗೊಂಡಂತೆ ಗಣಕ ಯಂತ್ರ ಚಾಲನೆ ಮಾಡುವ ಜ್ಞಾನ ಹೊಂದಿರಬೇಕು.

ಮಾರುಕಟ್ಟೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂಬಿಎ ಪದವಿ ಹೊಂದಿ, ಆಫೀಸ್ ಪ್ಯಾಕೇಜ್ ಗಳನ್ನು ಒಳಗೊಂಡಂತೆ ಗಣಕ ಯಂತ್ರ ಚಾಲನೆ ಮಾಡುವ ಜ್ಞಾನ ಹೊಂದಿರಬೇಕು.

ಈ ಹುದ್ದೆಗಳನ್ನು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ನಿಯತವಾಗಿ ಎಂ.ಬಿ.ಎ (ಮಾರುಕಟ್ಟೆ) ವಿದ್ಯಾರ್ಹತೆ ಹೊಂದಿ, ಸಮಾಲೋಚನೆ ಶುಲ್ಕದ ಆಧಾರದ ಮೇಲೆ 3 ವರ್ಷ ಸಹಕಾರಿ ಹಾಲು ಒಕ್ಕೂಟದಲ್ಲಿ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ.

ವೇತನದ ವಿವರ:

ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 52,650/- ರಿಂದ 97,100/-ರೂ ವೇತನವನ್ನು ನೀಡಲಾಗುವುದು.

ವಿಸ್ತರಣಾಧಿಕಾರಿ ಮತ್ತು ಡೇರಿ ಪರಿವೀಕ್ಷಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 33,450/-ರಿಂದ 62,600/-ರೂ ವೇತನವನ್ನು ನೀಡಲಾಗುವುದು.

ಹಿರಿಯ ತಾಂತ್ರಿಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 27,650/- ರಿಂದ 52,650/- ವೇತನವನ್ನು ನೀಡಲಾಗುವುದು.

ತಾಂತ್ರಿಕ ಅಧಿಕಾರಿ ಮತ್ತು ಮಾರುಕಟ್ಟೆ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 43,100/- ರಿಂದ 83,900/-ರೂ ವೇತನವನ್ನು ನೀಡಲಾಗುವುದು.

ಖಾಲಿ ಹುದ್ದೆಗಳ ವಿವರ ಇಲ್ಲಿವೆ

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸಹಾಯಕ ವ್ಯವಸ್ಥಾಪಕರು 18
ವಿಸ್ತರಣಾಧಿಕಾರಿ (ದರ್ಜೆ-3) 10
ಡೇರಿ ಪರಿವೀಕ್ಷಕರು (ದರ್ಜೆ -2) 4
ಹಿರಿಯ ತಾಂತ್ರಿಕ ಹುದ್ದೆಗಳು 8
ತಾಂತ್ರಿಕ ಅಧಿಕಾರಿ ಹುದ್ದೆಗಳು 1
ಮಾರುಕಟ್ಟೆ ಅಧಿಕಾರಿ 1
ಒಟ್ಟು 42

ವಯೋಮಿತಿ:

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಫೆಬ್ರವರಿ 6.2019ಕನಿಷ್ಟ /ಗರಿಷ್ಟ ವಯೋಮಿತಿ ಈ ಕೆಳಕಂಡಂತೆ ಇರತಕ್ಕದ್ದು.

ಕ್ರ.ಸಂ. ಮೀಸಲಾತಿ ವರ್ಗೀಕರಣ ಕನಿಷ್ಟ ವಯೋಮಿತಿ ಗರಿಷ್ಟ ವಯೋಮಿತಿ
1 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 18 40
2 ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ 18 38
3 ಸಾಮಾನ್ಯ ಅಭ್ಯರ್ಥಿಗಳಿಗೆ 18 35

ಮಾಜಿ ಸೈನಿಕರಿಗೆ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿರುವ ಅವಧಿಗೆ ಹಾಗೂ ಅಂಗವಿಕಲ ಮತ್ತು ವಿಧವೆಯರಿಗೆ 10 ವರ್ಷಗಳ ಅವಧಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ:

ಅರ್ಜಿದಾರರು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಪ್ರವರ್ಗ-1ಅಭ್ಯರ್ಥಿಗಳು 200/- ರೂ ಶುಲ್ಕ ಮತ್ತು ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ,3ಎ,3ಬಿ ಅಭ್ಯರ್ಥಿಗಳು 400/-ರೂ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಶುಲ್ಕವನ್ನು ದಿನಾಂಕ 7.2.2019 ರೊಳಗೆ ಪಾವತಿಸಬೇಕು.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ http://dhamul.in/ ಗೆ ಹೋಗಿ ವೀಕ್ಷಿಸಬಹುದು.

ಮೀಸಲಾತಿ ಮತ್ತು ಅರ್ಜಿ ಸಲ್ಲಿಸುವ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Dhamul recruitment notification has been released for the recruitment of 42 various vacancies.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X