ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಂಗಳೂರು ಇಲ್ಲಿ 2020-21ನೇ ಸಾಲಿಗೆ ಎನ್.ಹೆಚ್.ಎಂ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸುತ್ತಿದೆ. ಆಸಕ್ತರು ಅಧಿಸೂಚನೆಯನ್ನು ಓದಿಕೊಂಡು ಸಂದರ್ಶನ ದಲ್ಲಿ ಪಾಲ್ಗೊಳ್ಳಬಹುದು.
ಹುದ್ದೆಗಳ ವಿವರ:
ಜಿಲ್ಲಾ ದತ್ತಾಂಶ ವ್ಯವಸ್ಥಾಪಕರು - 1 ಹುದ್ದೆ
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು - 1 ಹುದ್ದೆ
ಡಿ.ಇ.ಐ.ಸಿ ವ್ಯವಸ್ಥಾಪಕರು - 1 ಹುದ್ದೆ
ತಾಲ್ಲೂಕು ಆಶಾ ಮೇಲ್ವಿಚಾರಕರು - 3 ಹುದ್ದೆಗಳು
ಲೆಕ್ಕಪತ್ರ ಸಹಾಯಕರು - 1 ಹುದ್ದೆ
ಒಟ್ಟು 7 ಹುದ್ದೆಗಳು
ವಿದ್ಯಾರ್ಹತೆ:
ಪೋಸ್ಟ್ ಗ್ರಾಜುಯೇಟ್, ಬಿಬಿಎಂ/ಎಂಬಿಎ ಪದವಿ, ಸ್ನಾತಕೋತ್ತರ ಪದವಿ, ಜೆ.ಎನ್.ಎಂ / ಬಿ.ಎಸ್ಸಿ ನರ್ಸಿಂಗ್ /ಡಿಪ್ಲೋಮಾ ಇನ್ ನರ್ಸಿಂಗ್, ಆಯುಷ್ ಕೋರ್ಸ್ ಗಳಲ್ಲಿ ತೇರ್ಗಡೆ ಮತ್ತು ಕಾಮರ್ಸ್ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.
ವಯೋಮಿತಿ:
ಗರಿಷ್ಟ 40 ರಿಂದ50 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವೇತನ:
ಜಿಲ್ಲಾ ದತ್ತಾಂಶ ವ್ಯವಸ್ಥಾಪಕರು - ತಿಂಗಳಿಗೆ 22,050/-ರೂ
ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರು - ತಿಂಗಳಿಗೆ 15,750/-ರೂ
ಡಿ.ಇ.ಐ.ಸಿ ವ್ಯವಸ್ಥಾಪಕರು - ತಿಂಗಳಿಗೆ 15,750/-ರೂ
ತಾಲ್ಲೂಕು ಆಶಾ ಮೇಲ್ವಿಚಾರಕರು - ತಿಂಗಳಿಗೆ 10,500/-ರೂ
ಲೆಕ್ಕಪತ್ರ ಸಹಾಯಕರು - 13,650/-ರೂ
ಸಂದರ್ಶನದ ವಿವರ:
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ 1 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಅಕ್ಟೋಬರ್ 15,2020ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಕಚೇರಿ ವಿಳಾಸ:
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆವರಣ,
ಹಳೇ ಟಿ.ಬಿ ಆಸ್ಪತ್ರೆ,
ಇಂದಿರಾನಗರ,
ಬೆಂಗಳೂರು -38.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.