DHFWS Kolar Recruitment 2020: 25 ಹುದ್ದೆಗಳ ನೇಮಕಾತಿಗೆ ನ.4ಕ್ಕೆ ನೇರ ಸಂದರ್ಶನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯ, ಕೋಲಾರ ಇಲ್ಲಿ ಎನ್‌ಹೆಚ್ಎಂ ಯೋಜನೆಯಡಿಯಲ್ಲಿ 2020-21ನೇ ಸಾಲಿಗೆ 3 ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಬಿಎಎಂಎಸ್ ವೈದ್ಯರು, 19 ಶುಶ್ರೂಷಕಿಯರು ಮತ್ತು 3 ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಒಟ್ಟು 25 ಹುದ್ದೆಗಳನ್ನು ಭರ್ತಿ ಮಾಡಲು ನವೆಂಬರ್ 4,2020ರಂದು ನೇರ ಸಂದರ್ಶನ ನಡೆಸಲಾಗುತ್ತಿದೆ.

ಕೋಲಾರದಲ್ಲಿ ಉದ್ಯೋಗಾವಕಾಶ..ನ.4ಕ್ಕೆ ವಾಕ್ ಇನ್ ಇಂಟರ್ವ್ಯೂ

ವಿದ್ಯಾರ್ಹತೆ:

ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಹುದ್ದೆಗಳಿಗೆ ಎಂಬಿಬಿಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನ್ ಶಿಪ್ ಪೂರೈಸಿರಬೇಕು ಹಾಗೂ ಕೆ.ಎಮ್.ಸಿ ನೊಂದಣಿ ಹೊಂದಿರಬೇಕು. ಬಿಎಎಂಎಸ್ ವೈದ್ಯರು ಹುದ್ದೆಗಳಿಗೆ ಬಿಎಎಂಎಸ್ ಪದವಿ ಉತ್ತೀರ್ಣರಾಗಿ ಕಡ್ಡಾಯ ಹೌಸ್‌ಮೆನ್ ಶಿಪ್ ಅನ್ನು ಮುಗಿಸಿರಬೇಕು ಅಂಗೀಕೃತ ನೊಂದಣಿ ಪ್ರಾಧಿಕಾರದಿಂದ ವೃತ್ತಿ ನೊಂದಣಿಯನ್ನು ಮಾಡಿಕೊಂಡಿರಬೇಕು. ಶುಶ್ರೂಷಕಿಯರು ಹುದ್ದೆಗಳಿಗೆ ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಜೆಎನ್ಎಂ/ಬಿಎಸ್ಸಿ ನರ್ಸಿಂ್‌ ನಲ್ಲಿ ಕೆಎನ್ಸಿ ನೊಂದಣಿ ಹೊಂದಿರಬೇಕು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹುದ್ದೆಗಳಿಗೆ ಎಲ್‌.ಹೆಚ್‌.ವಿ ತರಬೇತಿಯನ್ನು ಹೊಂದಿರಬೇಕು.

ವಯೋಮಿತಿ:

ನೇಮಕಾತಿ ನಿಯಮಾನುಸಾರ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ವೇತನ:

ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಬಿಎಎಂಎಸ್ ವೈದ್ಯರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000/- ರಿಂದ 47,500/-ರೂ ಶುಶ್ರೂಷಕಿಯರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,075/-ರೂ ಮತ್ತು ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,600/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ:

ಅರ್ಜಿದಾರರು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಸಂದರ್ಶನದ ವಿವರ:

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಂದರ್ಶನ ನಡೆಯುವ ದಿನಾಂಕ ಮತ್ತು ಸಮಯ: ನವೆಂಬರ್ 4,2020 ಬೆಳಿಗ್ಗೆ 10ಗಂಟೆಗೆ
ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ,
ಕೆ.ಎನ್.ಟಿ.ಬಿ. ಸ್ಯಾನಿಟೋರಿಯಂ ಅಸ್ಪತ್ರೆ ಆವರಣ,
ಬಂಗಾರಪೇಟೆ ರಸ್ತೆ,
ಕೋಲಾರ.

ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನೇಮಕಾತಿ ಬಗೆಗಿನ ಪ್ರಕಟಣೆಯನ್ನು ಓದಲು ಮುಂದೆ ನೋಡಿ.

ಕೋಲಾರದಲ್ಲಿ ಉದ್ಯೋಗಾವಕಾಶ..ನ.4ಕ್ಕೆ ವಾಕ್ ಇನ್ ಇಂಟರ್ವ್ಯೂ
For Quick Alerts
ALLOW NOTIFICATIONS  
For Daily Alerts

English summary
DHFWS kolar recruitment 2020 notification has been released for 25 doctor, nurses and assistant posts. Interested candidates can attend walk in interview on November 4.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X